ಸುಮ್ಮನಿರುವ ಮುಸಲ್ಮಾನರನ್ನ ಕಂಟ್ರೋಲ್ ಮಾಡೋದೇ ಕಷ್ಟ, ಅಂಥದ್ರಲ್ಲಿ ಕೈಯಲ್ಲಿ ಶಸ್ತ್ರ ಇರೋ ಮುಸಲ್ಮಾನರನ್ನ ತಡಿಯಲಿಕ್ಕೆ ಆಗುತ್ತಾ? -ಚಕ್ರವರ್ತಿ ಸೂಲಿಬೆಲೆ | Chakravarti Sulibele slams muslim community and pfi in raichur


ರಾಯಚೂರಿನಲ್ಲಿ ನಡೆದ ಉಘೆ ಕಲ್ಯಾಣ ಕರ್ನಾಟಕ ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಪಿಎಫ್​​ಐ ಸಂಘಟನೆ ಮುಸ್ಲೀಂ ಸಮುದಾಯದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಸುಮ್ಮನಿರುವ ಮುಸಲ್ಮಾನರನ್ನ ಕಂಟ್ರೋಲ್ ಮಾಡೋದೇ ಕಷ್ಟ, ಅಂಥದ್ರಲ್ಲಿ ಕೈಯಲ್ಲಿ ಶಸ್ತ್ರ ಇರೋ ಮುಸಲ್ಮಾನರನ್ನ ತಡಿಯಲಿಕ್ಕೆ ಆಗುತ್ತಾ? -ಚಕ್ರವರ್ತಿ ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆ

ರಾಯಚೂರು: ದೇಶಾದ್ಯಂತ ಪಿಎಫ್​​ಐ (PFI) ಕಚೇರಿಗಳ ಮೇಲೆ ಎನ್​ಐಎ(NIA) ದಾಳಿ ಪ್ರಕರಣಕ್ಕೆ ಸಂಬಂಧಿಸಿ ರಾಯಚೂರಿನಲ್ಲಿ ನಡೆದ ಉಘೆ ಕಲ್ಯಾಣ ಕರ್ನಾಟಕ ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ(Chakravarti Sulibele) ಪ್ರತಿಕ್ರಿಯೆ ನೀಡಿದ್ದಾರೆ. ಹಾಗೂ ನಮಗೆ ಗೊತ್ತಿಲ್ಲದ ರೀತಿ ನಮ್ಮ ಸುತ್ತಲೂ ಷಡ್ಯಂತ್ರ ನಡೀತಿದೆ ಎಂದು ಪಿಎಫ್​​ಐ ಸಂಘಟನೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಮುಸ್ಲೀಂ ಸಮುದಾಯದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಪಿಎಫ್​​ಐ ಸಂಘಟನೆ ಮುಖ್ಯಸ್ಥ 24 ಗಂಟೆ ಸಮಯ ನೀಡಿದ್ದ. ಜೈಲಿನಿಂದ ಎಲ್ಲರನ್ನು ಬಿಡುಗಡೆ ಮಾಡದಿದ್ರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಬಸ್​ಗಳಿಗೆ ಕಲ್ಲು ಹೊಡೆಯುತ್ತೇವೆ ಅಂತಾ ಬೆದರಿಕೆ ಹಾಕಿದ್ದ. ಆಶ್ಚರ್ಯ ಅಂದ್ರೆ 24 ಗಂಟೆಯಾದ್ರೂ ಬಿಡುಗಡೆ ಮಾಡಲಿಲ್ಲ. ಯಾರು ಕೂಡ ಪ್ರತಿಭಟನೆ ಮಾಡಲಿಲ್ಲ. ಕೇರಳದಲ್ಲಿ ಪ್ರತಿಭಟನಾಕಾರರನ್ನು ಸ್ಥಳೀಯರೇ ಹೊಡೆದಿದ್ದಾರೆ. ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಲು ಹೋದಾಗ ಪಿಎಫ್​ಐ ಮುಖಂಡರ ವಿರುದ್ಧ ವ್ಯಾಪಾರಸ್ಥರೇ ತಿರುಗಿ ಬಿದ್ದಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದ್ದಾರೆ.

PFI ಕಚೇರಿಗಳ ಮೇಲೆ ಎನ್​ಐಎ ದಾಳಿ ಪ್ರಕರಣದ ಬಗ್ಗೆ ಮೊದಲು ಪ್ರತಿಕ್ರಿಯಿಸಿದ್ದೆ ಪಸ್ಮಂಡಾ ಮುಸಲ್ಮಾನರು. ಪಸ್ಮಂಡಾ ಅಂದರೆ ಮುಸಲ್ಮಾನರಲ್ಲಿರುವ ದಲಿತ ಸಮುದಾಯ. ಪಿಎಫ್​ಐನಿಂದ ನಮ್ಮ ಹೆಸರು ಹಾಳಾಗಿದೆ ಅಂತಾ ಹೇಳಿದ್ದಾರೆ. ನಮ್ಮ ಬೆಂಬಲವಿಲ್ಲ, PFI ಬ್ಯಾನ್ ಮಾಡಿ ಅಂತಲೂ ಹೇಳಿದ್ದಾರೆ. ಟರ್ಕಿಯಿಂದ ಪ್ರತಿವರ್ಷ ನೂರಾರು ಕೋಟಿ ಹಣ ಬರುತ್ತೆ. ಬೇರೆ ಬೇರೆ ಅಕೌಂಟ್​​ಗಳಿಗೆ ಕೋಟ್ಯಂತರ ಹಣ ಜಮೆ ಆಗ್ತಿದೆ. ಒಂದೇ ದಿನ ಏಕಕಾಲದಲ್ಲಿ ಪ್ರತಿಭಟನೆ ಮಾಡಿದ್ದಾರೆ. ನಮಗೆ ಗೊತ್ತಿಲ್ಲದ ರೀತಿ ನಮ್ಮ ಸುತ್ತಲೂ ಷಡ್ಯಂತ್ರ ನಡೀತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.

TV9 Kannada


Leave a Reply

Your email address will not be published.