ಮೈಸೂರು: ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಕೆಗೆ ರೋಹಿಣಿ ಸಿಂಧೂರಿ ಅಡ್ಡಿ ಪಡಿಸಿದ್ದಾರೆ ಅನ್ನೋ ಚಾಮರಾಜನಗರ ಡಿಸಿಯ ಆರೋಪಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗದ್ಗದಿತರಾಗಿದ್ದಾರೆ. ಚಾಮರಾಜನಗರದಲ್ಲಿ ಆಗಿರುವುದಕ್ಕೆ ನೋವಿದೆ. ಈ ವಿಚಾರದಲ್ಲಿ ಸಾಕಷ್ಟು ಊಹಾಪೋಹಗಳು ನಡೆಯುತ್ತಿವೆ. ಇದರಿಂದ ನನಗೆ ತುಂಬಾ ನೋವಾಗಿದೆ, ದೇಶದ ಯಾವುದೇ ಮೂಲೆಯಲ್ಲಿ ಆದ ಸಾವು ಸಾವೇ ಎಂದು ಅವರು ಭಾವುಕರಾಗಿದ್ದಾರೆ.

ನನ್ನ 10 ವರ್ಷದ ಸೇವೆಯಲ್ಲಿ ನಾನು ಎಂದು ಈ ರೀತಿ ಕೆಲಸ ಮಾಡಿಲ್ಲ.
ಸತ್ತವರ ಮನೆಯಲ್ಲಿ ನೋವಿರುತ್ತದೆ ಈ ವೇಳೆ ಈ ರೀತಿ ಆರೋಪ ಮಾಡಬಾರದು. ಮಾಡಿದರೆ ನಮ್ಮ ಮೇಲೆ ತಪ್ಪು ಅಭಿಪ್ರಾಯ ಬರುತ್ತದೆ. ರವಿಯವರು ಮಾಧ್ಯಮದಲ್ಲಿ ಹೇಳಿಕೆ ನೀಡದಿದ್ದರೆ, ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅವರು ಅಸತ್ಯವಾದ ವಿಚಾರಗಳನ್ನು ಹೇಳಿದ್ದಾರೆ. ಅದಕ್ಕೆ ಸ್ಪಷ್ಟಣೆ ನೀಡುತ್ತಿದ್ದೇನೆ. ನಾನು ಚಾಮರಾಜನಗರಕ್ಕೆ ಸ್ಪಂದಿಸಿಲ್ಲ ಅನ್ನೋ ಮಾತು ಸತ್ಯಕ್ಕೆ ದೂರವಾದ ಮಾರು. ಎಲ್ಲವೂ, ತನಿಖೆಯಲ್ಲಿ ಗೊತ್ತಾಗಲಿದೆ. ಅವರ ಕಷ್ಟ ಕಾಲದಲ್ಲಿ ರಿಸ್ಕ್ ತೆಗೆದುಕೊಂಡು ಆಕ್ಸಿಜನ್ ಕಳುಹಿಸಿದ್ದೇವೆ. ಅದು ನಮ್ಮ ಆಸ್ಪತ್ರೆಯಲ್ಲಿದ್ದ 40 ಸಿಲಿಂಡರ್ ಕಳುಹಿಸಿದ್ದೇವೆ. ಎಲ್ಲೂ ಸಹಾ ಆಸ್ಪತ್ರೆಯಿಂದ ಸಿಲಿಂಡರ್ ಕಳುಹಿಸಿ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಇದು ಮಾನವೀಯತರ ಅಲ್ಪವಾ? ಅಂತ ಚಾಮರಾಜನಗರ ಡಿಸಿ ಎಂ.ಆರ್.ರವಿಗೆ ರೋಹಿಣಿ ಸಿಂಧೂರಿ ಪ್ರಶ್ನೆ ಮಾಡಿದ್ದಾರೆ.

ಚಾಮರಾಜನಗರ ಡಿಸಿಗೆ ತಿರುಗೇಟು ಕೊಟ್ಟ ರೋಹಿಣಿ ಸಿಂಧೂರಿ
ಅಷ್ಟಕ್ಕೂ, ಅವ್ರು ಮೊದಲೇ ಕೇಳಿದ್ದರೆ ಮೊದಲೇ ಕಳುಹಿಸುತ್ತಿದ್ದೆವು. ಅವರು ಸರಿಯಾಗಿ ನಿರ್ವಹಣೆ ಮಾಡದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ.ನಮ್ಮ ಜಿಲ್ಲೆಯಲ್ಲಿ ಈ ರೀತಿ ಆಗಿದ್ದರೆ ಯಾರನ್ನಾದರೂ ಹೇಗಾದರೂ ಸಂಪರ್ಕಿಸಿ ಆಕ್ಸಿಜನ್ ಪಡೆಯುತ್ತಿದ್ದೆವು.ಅವರು ಆ ಕೆಲಸ ಮಾಡಿಲ್ಲ, ನಾವು ಜನರ ಪ್ರಾಣ ಉಳಿಸಲು 24/7ಕೆಲಸ ಮಾಡುತ್ತಿದ್ದೇವೆ.ಈ ರೀತಿ ಹೇಳಿದರೆ ನಮಗೂ ನೋವಾಗುತ್ತೆ ಅಂತೆ ಚಾಮರಾಜನಗರ ಜಿಲ್ಲಾಧಿಕಾರಿ ಆರೋಪಕ್ಕೆ ಮೈಸೂರು ಡಿಸಿ ಭಾವುಕರಾದ್ರು. ಅಲ್ಲದೇ, ಚಾಮರಾಜನಗರ ಡಿಸಿಯ ಪತ್ರಿಕಾ ಹೇಳಿಕೆಗೆ ಮೈಸೂರು ಡಿಸಿ ತಿರುಗೇಟು ಕೊಟ್ಟು ತಾವೂ ಒಂದು ಪತ್ರಿಕಾ ಹೇಳಿಕೆಯನ್ನ ಬಿಡುಗಡೆ ಮಾಡಿದ್ದಾರೆ.

The post ‘ಸುಮ್ಮನೆ ಇನ್ನೊಬ್ಬರ ಮೇಲೆ ಆರೋಪ ಮಾಡಬಾರದು ನೋವಾಗುತ್ತೆ’ ಕಣ್ಣೀರು ಹಾಕಿದ ರೋಹಿಣಿ ಸಿಂಧೂರಿ appeared first on News First Kannada.

Source: newsfirstlive.com

Source link