ಪೊಲೀಸರು ಮೊದಲು ಸ್ಪಾಟ್ಗೆ ಬಂದಿದ್ದ ಕಾರನ್ನು ಗುರುತಿಸಿದ್ದಾರೆ. ಈ ವೇಳೆ ಹ್ಯುಂಡೈ ಇಯಾನ್ ಕಾರು ಅನ್ನೋದು ಗೊತ್ತಾಗಿತ್ತು. ನಂತರ ಮಂಗಳೂರಲ್ಲಿದ್ದ ಎಲ್ಲಾ ಇಯಾನ್ ಕಾರುಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಮೃತ ಫಾಸಿಲ್, ಕೊಲೆ ನಡೆದಿದ್ದ ಸ್ಥಳ
ಮಂಗಳೂರು: ಸುರತ್ಕಲ್ನಲ್ಲಿ (Surathkal) ನಡೆದಿದ್ದ ಫಾಜಿಲ್ ಕೊಲೆ (Fazil Murder) ಪ್ರಕರಣಕ್ಕೆ ಸಂಬಂಧಿಸಿ ಹತ್ಯೆಗೆ ಆರೋಪಿಗಳನ್ನ ಕರೆತಂದಿದ್ದ ಕಾರು ಚಾಲಕನನ್ನು (Car Driver) ಪೊಲೀಸರು ನಿನ್ನೆ (ಜುಲೈ 30) ರಾತ್ರಿ ವಶಕ್ಕೆ ಪಡೆದಿದ್ದಾರೆ. ಅಜಿತ್ ಪೊಲೀಸರ ವಶದಲ್ಲಿರುವ ಕಾರು ಚಾಲಕ. ಜುಲೈ 28ರ ರಾತ್ರಿ ಫಾಜಿಲ್ನ ಬರ್ಬರ ಕೊಲೆ ನಡೆದಿತ್ತು. ಕೊಲೆ ಆರೋಪಿಗಳನ್ನ ಅಜಿತ್ ಕಾರಿನಲ್ಲಿ ಕರೆತಂದು ಹತ್ಯೆ ನಡೆದ ಬಳಿಕ ಕರೆದೊಯ್ದಿದ್ದ. ಸದ್ಯ ಮಂಗಳೂರು ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಕಾರು ಚಾಲಕನನ್ನು ವಶಕ್ಕೆ ಪಡೆದ ಕಹಾನಿಯೇ ರೋಚಕವಾಗಿದೆ. ಪೊಲೀಸರು ಮೊದಲು ಸ್ಪಾಟ್ಗೆ ಬಂದಿದ್ದ ಕಾರನ್ನು ಗುರುತಿಸಿದ್ದಾರೆ. ಈ ವೇಳೆ ಹ್ಯುಂಡೈ ಇಯಾನ್ ಕಾರು ಅನ್ನೋದು ಗೊತ್ತಾಗಿತ್ತು. ನಂತರ ಮಂಗಳೂರಲ್ಲಿದ್ದ ಎಲ್ಲಾ ಇಯಾನ್ ಕಾರುಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅದರಲ್ಲಿ ಬಿಳಿ ಬಣ್ಣದ ಕಾರುಗಳ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಇಯಾನ್ ಕಾರು ಮಾಲೀಕರನ್ನು ಕರೆಸಿ ವಿಚಾರಣೆ ನಡೆಸಿದ್ದರು.