ಚಿಕ್ಕಮಗಳೂರು: ಸುರಿಯುತ್ತಿದ್ದ ಮಳೆ ಮಧ್ಯೆಯೇ ಲೇಡಿಸ್ ಮತ್ತು ಜೆಂಟ್ಸ್ ಫೈಟ್ ಮಾಡಿರುವ ಘಟನೆ ನಗರದ ರಾಮನಹಳ್ಳಿಯಲ್ಲಿ ನಡೆದಿದೆ.

ಮದ್ಯದ ಅಮಲಿನಲ್ಲಿದ್ದ ಯುವಕರ ಗುಂಪುಗಳ ಮಧ್ಯೆ ಸಣ್ಣ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿ ಮಳೆಯಲ್ಲಿಯೇ ರಸ್ತೆ ಮಧ್ಯೆ ಹೊಡೆದಾಡಿದ್ದಾರೆ. ಈ ವೇಳೆ, ಹೆಂಗಸರು ಕೂಡ ರಸ್ತೆ ಮಧ್ಯೆಯೇ ಹೊಡೆದಾಡಿದ್ದಾರೆ. ಗಲಾಟೆ ವೇಳೆ ಹೆಂಗಸರು-ಯುವಕರು ಒಬ್ಬರನ್ನೊಬ್ಬರು ಎಳೆದಾಡಿದ್ದಾರೆ. ಯುವಕರು ಕೂಡ ಒಬ್ಬರನ್ನೊಬ್ಬರು ತಳ್ಳಾಡಿಕೊಂಡು ರಸ್ತೆಗೆ ಹೋಗಿದ್ದಾರೆ.

ಈ ವೇಳೆ, ಮರದ ರೀಪ್‍ನಿಂದ ಹಲ್ಲೆ ಮಾಡಿದ್ದಾರೆ. ಮನೆಯ ಮೇಲ್ಛಾವಣಿಗೆ ಹಾಕುವ ತುಂಡಾದ ಸಿಮೆಂಟ್ ಶೀಟ್‍ನಿಂದಲೂ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಗಲಾಟೆ ಸ್ಪಷ್ಟವಾದ ಕಾರಣ ಏನೆಂದು ತಿಳಿದು ಬಂದಿಲ್ಲ. ಇಡೀ ರಾಜ್ಯದಲ್ಲಿ ಲಾಕ್‍ಡೌನ್ ಇದೆ. ಬೆಳಗ್ಗೆ 10ರ ನಂತರ ಯಾರೂ ಓಡಾಡುವಂತಿಲ್ಲ. ಆದರೆ ಈ ಯುವಕರು ಏಕೆ ಮನೆಯಿಂದ ಹೊರಬಂದಿದ್ದರು ಎಂಬ ಪ್ರಶ್ನೆ ಮೂಡಿದೆ.

The post ಸುರಿಯೋ ಮಳೆ ಮಧ್ಯೆಯೇ ಲೇಡಿಸ್-ಜೆಂಟ್ಸ್ ಫೈಟ್ appeared first on Public TV.

Source: publictv.in

Source link