ಕೊರೊನಾದಿಂದ ಸಂಕಷ್ಟಕ್ಕೆ ಸಿಲಿಕಿದವರಿಗೆ ಮೊದಲಿನಿಂದಲೂ ಸ್ಪಂದಿಸುತ್ತಾ ಬಂದಿರುವ ನಟ ಸೋನು ಸೂದ್,​ ಇದೀಗ ಕ್ರಿಕೇಟಿಗ ಸುರೇಶ್​ ರೈನಾ ಕಷ್ಟಕ್ಕೆ ನೆರವಾಗಿದ್ದಾರೆ.

ಸುರೇಶ್ ರೈನಾ ಸಂಬಂಧಿಕಯೊಬ್ಬರಿಗೆ ಆಕ್ಸಿಜನ್ ಸಿಲಿಂಡರ್ ಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದರು. ರೈನಾರ ಈ ಟ್ವೀಟ್ ಗಮನಿಸಿದ ನಟ ಸೋನು ಸೂದ್ ತಕ್ಕಣವೇ ಸ್ಪಂದಿಸಿದ್ದಾರೆ. ಕೇವಲ 10 ನಿಮಿಷ ನೀಡಿ ನಿಮಗೆ ಅಕ್ಸಿಜನ್ ಸಿಡಿಲಿಂಡರ್ ಸಿಗುತ್ತದೆ ಎಂದು ಹೇಳಿದ ಸಮಯಕ್ಕೆ ನೆರವಾಗಿ ಮಾನವಿಯತೆ ಮೆರೆದಿದ್ದಾರೆ. ಸೋನು ಸೂದ್ ಟ್ವೀಟ್​ ಮಾಡಿದ 10 ನಿಮಷಗಳ ಬಳಿಕ ಪ್ರತಿಕ್ರಿಯೆ ನೀಡಿದ್ದ ರೈನಾ, ಮಹಿಳೆಗೆ ಅಗತ್ಯ ಆಕ್ಸಿಜನ್​ ಲಭ್ಯವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ತುರ್ತು ಸಂದರ್ಭದಲ್ಲಿ ನೆರವಿಗೆ ಬಂದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

The post ಸುರೇಶ್​ ರೈನಾ ಕಷ್ಟಕ್ಕೆ ಸ್ಪಂದಿಸಿದ ಸೋನು ಸೂದ್​​ appeared first on News First Kannada.

Source: newsfirstlive.com

Source link