ಚಾಮರಾಜನಗರ: ಎಸ್‌ಎಸ್ಎಲ್​ಸಿ ಮತ್ತು ಪಿಯುಸಿ ಮಕ್ಕಳಿಗೆ ಈ ವರ್ಷ ಪರೀಕ್ಷೆ ಬೇಡ.. ಹಾಗೆಯೇ ಅವರನ್ನ ಪಾಸ್ ಮಾಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್‌ ಒತ್ತಾಯಿಸಿದ್ದಾರೆ.

ಮಕ್ಕಳ ಜೊತೆ ಆಟವಾಡಬೇಡಿ
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್.. ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಕ್ಕಳ ಜೊತೆ ಆಟವಾಡ ಬೇಡಿ. ಎಲ್ಲಾ ರಾಜ್ಯಗಳಲ್ಲಿ ಎಸ್ಎಸ್ಎಲ್ ವಿದ್ಯಾರ್ಥಿಗಳನ್ನ ಪರೀಕ್ಷೆ ಇಲ್ಲದೇ ಪಾಸ್ ಮಾಡಿದ್ದಾರೆ. ನಿಮಗೆ ಹೇಳ್ತೀನಿ, ಈ ವಿಚಾರದಲ್ಲಿ ಚಾಲೆಂಜ್ ತೆಗೆದುಕೊಳ್ಳಬೇಡಿ ಎಂದು ಒತ್ತಾಯಿಸಿದರು.

ಯಾವ ಕಾರಣಕ್ಕೂ ನೀವು ಮಕ್ಕಳಿಂದ ಪರೀಕ್ಷೆ ಬರೆಸಲು ಆಗಲ್ಲ. ಒಂದು ತಿಂಗಳು ಪಾಠವೇ ಆಗಿಲ್ಲ. ಆದ್ರಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳನ್ನ ಪಾಸ್ ಮಾಡಲೇಬೇಕು ಅಂತಾ ಒತ್ತಾಯಿಸಿದರು.

The post ಸುರೇಶ್ ಕುಮಾರ್ ಮಕ್ಕಳ ಜೊತೆ ಆಟವಾಡಬೇಡಿ, ಪರೀಕ್ಷೆ ರದ್ದು ಮಾಡಿ -ವಾಟಾಳ್ ಎಚ್ಚರಿಕೆ appeared first on News First Kannada.

Source: newsfirstlive.com

Source link