ಬೆಳಗಾವಿ: ಜಿಲ್ಲೆಯ ಸುವರ್ಣ ವಿಧಾನಸೌಧದಲ್ಲಿ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಮಧ್ಯೆ ಸುವರ್ಣ ವಿಧಾನಸೌಧದ ಮುಂಭಾಗ ರೈತ ಮುಖಂಡ ಚೂನಪ್ಪ ಪೂಜಾರಿ, ರಾಘವೇಂದ್ರ ನಾಯಕ ನೇತೃತ್ವದಲ್ಲಿ ಕಬ್ಬಿನ ಬಾಕಿ ಬಿಲ್​ಗೆ ಆಗ್ರಹಿಸಿ ರೈತರು ಪ್ರತಿಭಟನೆಗೆ ಇಳಿದಿದ್ದರು.

ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆದಿದ್ದು ರೈತರು.. ಕಬ್ಬಿನ ಬಾಕಿ ಬಿಲ್ ಕೊಡಿಸುವಂತೆ ಸಿಎಂ ಅವರನ್ನ ಕೇಳಲು ಬಂದಿದ್ದೇವೆ. ರಾಜ್ಯದಲ್ಲಿ ಅಂದಾಜು 1,500 ಕೋಟಿ ಕಬ್ಬಿನ ಬಿಲ್ ಬಾಕಿ ಇದೆ. ತರಕಾರಿ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ನಾವು ಯಾರನ್ನ ಕೇಳೋದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ರೈತ ಮುಖಂಡರನ್ನ ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ.

The post ಸುವರ್ಣ ವಿಧಾನಸೌಧದ ಮುಂಭಾಗ ಹೈಡ್ರಾಮಾ: ಪ್ರತಿಭಟನೆಗಿಳಿದ ರೈತರು ಪೊಲೀಸ್ ವಶಕ್ಕೆ appeared first on News First Kannada.

Source: newsfirstlive.com

Source link