ಕೊಲ್ಕತ್ತಾ:  ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ರೋಚಕ ಗೆಲುವು ಸಾಧಿಸಿದ್ದಾರೆ. ಇದರಿಂದ ಹತಾಶರಾದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸುವೇಂದು ಅವರ ಕಾರಿನ ಮೇಲೆ ದಾಳಿ ಮಾಡಿದ್ದಾರೆ.

ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿಗೆ ಪ್ರತಿಸ್ಪರ್ಧಿಯಾಗಿದ್ದ ಸುವೇಂದು ಕೊನೆಯ ಹಂತದಲ್ಲಿ ಕಡಿಮೆ ಮತಗಳ ಅಂತರದಲ್ಲಿ ದೀದಿಯನ್ನು ಸೋಲಿಸಿದ್ದಾರೆ. ನಂದಿಗ್ರಾಮದಲ್ಲಿ ಮಮತಾಗೆ ಸೋಲಾದ್ದರಿಂದ ಟಿಎಂಸಿ ಕಾರ್ಯಕರ್ತರು ತೀವ್ರ ಬೇಸರಗೊಂಡಿದ್ದರು.

ಹೀಗಾಗಿ ಹಲ್ದಿಯಾದಲ್ಲಿ ಮತಎಣಿಕೆ ಕೇಂದ್ರದಿಂದ ಸುವೇಂದು ಅಧಿಕಾರಿ ಹೊರಡುತ್ತಿದ್ದಂತೆ ಅವರ ಕಾರಿನತ್ತ ಟಿಎಂಸಿ ಬೆಂಬಲಿಗರು ಕಲ್ಲುಗಳನ್ನು ಎಸೆದಿದ್ದಾರೆ ಎನ್ನಲಾಗಿದೆ. ಟಿಎಂಸಿಯವರು ನನ್ನ ಕಾರಿನ ಮೇಲೆ ದಾಳಿ ನಡೆಸಲು ಯತ್ನಿಸಿದ್ರು. ಜನಪ್ರತಿನಿಧಿಯಾದ ನನಗೇ ಹೀಗಾದ್ರೆ, ಸಾಮಾನ್ಯ ಜನರ ಸ್ಥಿತಿಯೇನು ಯೋಚಿಸಿ ಅಂತ ಟ್ವೀಟ್​ ಮಾಡಿ ಸುವೇಂದು ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

The post ಸುವೇಂದು ಅಧಿಕಾರಿ ಕಾರಿನ ಮೇಲೆ TMC ಕಾರ್ಯಕರ್ತರಿಂದ ದಾಳಿ appeared first on News First Kannada.

Source: newsfirstlive.com

Source link