ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ಧರಿಸಿದ ಈ ಲೆಹೆಂಗಾ ಬೆಲೆ ಕೇಳಿ ಕಣ್ಣರಳಿಸಿದ ಫ್ಯಾನ್ಸ್​ | Rhea Chakraborty attended Anushka Ranjan Aditya Seal wedding wearing Lehenga worth Rs 1 Lakh

ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ಧರಿಸಿದ ಈ ಲೆಹೆಂಗಾ ಬೆಲೆ ಕೇಳಿ ಕಣ್ಣರಳಿಸಿದ ಫ್ಯಾನ್ಸ್​

ರಿಯಾ ಚಕ್ರವರ್ತಿ

ನಟಿ ರಿಯಾ ಚಕ್ರವರ್ತಿ (Rhea Chakraborty) ಅವರು ಸುಶಾಂತ್​ ಸಿಂಗ್​ ರಜಪೂತ್ (Sushant Singh Rajput)​ ಪ್ರೇಯಸಿ ಎಂಬ ಕಾರಣಕ್ಕೆ ಸುದ್ದಿ ಆಗಿದ್ದೇ ಹೆಚ್ಚು. ಆದರೆ ಸುಶಾಂತ್​ ನಿಧನದ ನಂತರ ಅವರ ಕೊರಳಿಗೆ ಅನೇಕ ಆರೋಪಗಳು ಸುತ್ತಿಕೊಂಡವು. ಅದರಿಂದ ಹೊರಬರಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈಗ ರಿಯಾ ಸಾಕಷ್ಟು ಚೇತರಿಸಿಕೊಂಡಿದ್ದಾರೆ. ಬೇರೆಲ್ಲ ಸೆಲೆಬ್ರಿಟಿಗಳಂತೆ ಅವರು ಕೂಡ ಸಹಜವಾಗಿ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿದ್ದಾರೆ. ಈಗ ಅವರು ಧರಿಸಿದ ಒಂದು ಲೆಹೆಂಗಾ (Lehenga) ಎಲ್ಲರ ಕಣ್ಣು ಕುಕ್ಕುತ್ತಿದೆ. ಅದರ ಬೆಲೆ ಕೇಳಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಬರೋಬ್ಬರಿ ಒಂದು ಲಕ್ಷ ರೂಪಾಯಿ ಬೆಲೆಯ ಲೆಹೆಂಗಾ ಧರಿಸಿ ರಿಯಾ ಚಕ್ರವರ್ತಿ ಪೋಸ್​ ನೀಡಿದ್ದಾರೆ. ಆ ಫೋಟೋಗಳು ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಬಾಲಿವುಡ್​ನಲ್ಲೀಗ ಮದುವೆ ಸೀಸನ್​ ಶುರುವಾಗಿದೆ. ಅನೇಕ ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೊರೊನಾ ಹಾವಳಿ ಕಡಿಮೆ ಆಗಿರುವುದರಿಂದ ಸಾಲು ಸಾಲು ಮದುವೆ ಸಮಾರಂಭ ನಡೆಯುತ್ತಿದೆ. ಇತ್ತೀಚೆಗಷ್ಟೇ ಅನುಷ್ಕಾ ರಂಜನ್​ ಮತ್ತು ಆದಿತ್ಯ ಸೀಲ್​ ಬಾಳ ಬಂಧನಕ್ಕೆ ಒಳಗಾಗಿದ್ದಾರೆ. ಇವರಿಬ್ಬರ ಮದುವೆಗೆ ರಿಯಾ ಚಕ್ರವರ್ತಿ ಹಾಜರಿ ಹಾಕಿದ್ದರು. ಈ ಸಮಾರಂಭಕ್ಕಾಗಿ ರಿಯಾ ಒಂದು ಲಕ್ಷ ರೂ. ಬೆಲೆಬಾಳುವ ಲೆಹೆಂಗಾ ಧರಿಸಿದ್ದರು. ಆ ಫೋಟೋಗಳಿಗೆ ಕಮೆಂಟ್​ ಮಾಡಿರುವ ಅಭಿಮಾನಿಗಳು ‘ಪರಮ ಸುಂದರಿ’ ಎಂದು ಹೊಗಳುತ್ತಿದ್ದಾರೆ.

ಅನುಷ್ಕಾ ರಂಜನ್​ ಮತ್ತು ಆದಿತ್ಯ ಸೀಲ್​ ಮದುವೆ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳು ಸಾಕ್ಷಿಯಾದರು. ರಾಕೇಶ್ ರೋಷನ್​, ಸುಸಾನೆ ಖಾನ್​, ಜಾಸ್ಮಿನ್​ ಭಾಸಿನ್​, ನಿನಾ ಗುಪ್ತಾ, ವಾಣಿ ಕಪೂರ್​, ಭೂಮಿ ಪೆಡ್ನೇಕರ್​ ಮುಂತಾದವರು ಆಗಮಿಸಿದ್ದರು. ಅವರೆಲ್ಲರಿಗಿಂತ ರಿಯಾ ಚಕ್ರವರ್ತಿ ಅವರು ಫ್ಯಾಷನ್​ ವಿಚಾರದಲ್ಲಿ ಹೆಚ್ಚು ಗಮನ ಸೆಳೆದರು.

ಸುಶಾಂತ್​ ಸಾವಿಗೆ ರಿಯಾ ಚಕ್ರವರ್ತಿ ಕಾರಣ ಎಂದು ಸುಶಾಂತ್​ ಕುಟುಂಬದವರು ಆರೋಪ ಹೊರಿಸಿದ್ದರು. ಡ್ರಗ್ಸ್​ ಜಾಲದ ಜೊತೆಗೂ ಅವರು ನಂಟು ಹೊಂದಿದ್ದರು ಎಂದು ಆರೋಪಿಸಲಾಗಿತ್ತು. ಈ ಎಲ್ಲ ಕಾರಣಕ್ಕಾಗಿ ಸುಶಾಂತ್​ ಅಭಿಮಾನಿಗಳಿಗೂ ರಿಯಾ ಕಂಡರೆ ಅಷ್ಟಕ್ಕಷ್ಟೇ. ಇದೆಲ್ಲದರ ಪರಿಣಾಮವಾಗಿ ರಿಯಾ ಚಕ್ರವರ್ತಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ. ಅಮಿತಾಭ್​ ಬಚ್ಚನ್​ ಮತ್ತು ಇಮ್ರಾನ್​ ಹಷ್ಮಿ ಅವರ ಜೊತೆ ‘ಚೆಹ್ರೆ’ ಚಿತ್ರದಲ್ಲಿ ರಿಯಾ ನಟಿಸಿದರು. ಅದು ಈ ವರ್ಷ ಆಗಸ್ಟ್​ 27ರಂದು ತೆರೆಕಂಡಿತು. ಕೊರೊನಾ ಹಾವಳಿ ಇದ್ದಿದ್ದರಿಂದ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ದೊಡ್ಡ ಪೆಟ್ಟು ಬಿತ್ತು. ‘ಚೆಹ್ರೆ’ ಬಳಿಕ ರಿಯಾ ಚಕ್ರವರ್ತಿ ಬೇರಾವುದೇ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ಸುದ್ದಿ ಆಗಿಲ್ಲ.

ಇದನ್ನೂ ಓದಿ:

ಪ್ರಿಯಾಂಕಾ-ನಿಕ್​ ಜೋನಸ್​ ವಿಚ್ಛೇದನ ನಿಜವೇ? ಒಂದೇ ಕಮೆಂಟ್​ನಲ್ಲಿ ಉತ್ತರ ನೀಡಿದ ದೇಸಿ ಗರ್ಲ್​

ರಸ್ತೆ ಅಪಘಾತದಲ್ಲಿ ಸುಶಾಂತ್​ ಕುಟುಂಬದ 6 ಮಂದಿ ನಿಧನ; ಇನ್ನೂ 4 ಜನರ ಸ್ಥಿತಿ ಗಂಭೀರ

TV9 Kannada

Leave a comment

Your email address will not be published. Required fields are marked *