ಸುಶಾಂತ್ ಸಿಂಗ್ ಪುಣ್ಯತಿಥಿ: ಮೃತಪಟ್ಟು ಎರಡು ವರ್ಷ ಕಳೆದರೂ ಹೊರಬೀಳಲೇ ಇಲ್ಲ ನಟನ ಸಾವಿನ ರಹಸ್ಯ | Sushant Singh Rajput Death Anniversary even after 2 years of death mystery not solved


ಸುಶಾಂತ್ ಸಿಂಗ್ ಅವರು ಮುಂಬೈನ ಫ್ಲ್ಯಾಟ್​ನಲ್ಲಿ ಉಳಿದುಕೊಳ್ಳುತ್ತಿದ್ದರು. ಅದೇ ಫ್ಲ್ಯಾಟ್​ನಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆದರು. ಇದು ಆತ್ಮಹತ್ಯೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು. ಆದರೆ, ಇದು ಕೊಲೆ ಎನ್ನುವ ಆರೋಪಗಳು ಕೇಳಿ ಬಂದವು.

ಅದು ಜೂನ್ 14, 2020. ಬಾಲಿವುಡ್​ಗೆ (Bollywood) ಬರಸಿಡಿಲು ಬಂದಪ್ಪಳಿಸಿದ ದಿನ. ಸುಶಾಂತ್ ಸಿಂಗ್ (Sushant Singh Rajput) ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಅನೇಕರು ಶಾಕ್​ಗೆ ಒಳಗಾದರು. ಚಿತ್ರರಂಗದಲ್ಲಿ ಆಗ ತಾನೇ ಸ್ಟಾರ್ ಪಟ್ಟ ಪಡೆದಿದ್ದ ಸುಶಾಂತ್​ ಅವರು ಮೃತಪಟ್ಟ ವಿಚಾರ ಸಾಕಷ್ಟು ಜನರಿಗೆ ಅರಗಿಸಿಕೊಳ್ಳಲು ಆಗಲಿಲ್ಲ. ಅವರು ಮೃತಪಟ್ಟು ಇಂದಿಗೆ ಎರಡು ವರ್ಷ ಕಳೆದಿದೆ. ಆದಾಗ್ಯೂ ಅವರ ಸಾವಿನ ರಹಸ್ಯ ಮಾತ್ರ ಹೊರಬಿದ್ದಿಲ್ಲ. ಸಿಬಿಐ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಅಂತಿಮ ವರದಿ ಮಾತ್ರ ಬಂದಿಲ್ಲ. ಆದಷ್ಟು ಬೇಗ ಅವರ ಸಾವಿನ ರಹಸ್ಯ ಹೊರ ಬೀಳಲಿ ಅನ್ನುವುದು ಫ್ಯಾನ್ಸ್ ಆಗ್ರಹ.

ಸುಶಾಂತ್ ಸಿಂಗ್ ಅವರು ಮುಂಬೈನ ಫ್ಲ್ಯಾಟ್​ನಲ್ಲಿ ಉಳಿದುಕೊಳ್ಳುತ್ತಿದ್ದರು. ಅದೇ ಫ್ಲ್ಯಾಟ್​ನಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆದರು. ಇದು ಆತ್ಮಹತ್ಯೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು. ಆದರೆ, ಇದು ಕೊಲೆ ಎನ್ನುವ ಆರೋಪಗಳು ಕೇಳಿ ಬಂದವು. ‘ಬಾಲಿವುಡ್​ನ ಕೆಲ ಸ್ಟಾರ್​ಗಳು ಸುಶಾಂತ್​ಗೆ ಕಿರುಕುಳ ನೀಡಿದ್ದರಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡರು’ ಎಂದು ಒಂದು ವರ್ಗದ ಜನರು ಆರೋಪಿಸಿದರು. ಇನ್ನೂ ಕೆಲವರು ‘ಸುಶಾಂತ್ ಅವರನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆ ಎಂದು ಬಿಂಬಿಸುವ ಕೆಲಸ ಆಗಿದೆ’ ಎಂದು ಕೆಲವರು ಆರೋಪಿಸಿದರು.

ಈ ಆರೋಪಗಳ ಮಧ್ಯೆ ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಹೆಸರು ಮುನ್ನೆಲೆಗೆ ಬಂತು. ಸುಶಾಂತ್ ಖಾತೆಯಿಂದ ಅವರ ಖಾತೆಗೆ ಹಣ ವರ್ಗಾವಣೆ ಆಗಿದೆ ಎನ್ನುವ ಆರೋಪಗಳು ಕೇಳಿ ಬಂದವು. ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಮಾದಕದ್ರವ್ಯದ ವಾಸನೆ ಸಿಕ್ಕಿತು. ಈ ಪ್ರಕರಣವನ್ನು ಎನ್​ಸಿಬಿ ಕೂಡ ವಿಚಾರಣೆ ನಡೆಸಿತು.

TV9 Kannada


Leave a Reply

Your email address will not be published.