ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಈಗ ಮುಗಿದ ಅಧ್ಯಾಯ. ಆದ್ರೆ ಫೈನಲ್ ಪಂದ್ಯದ ಸೋಲು, ಟೀಮ್ ಇಂಡಿಯಾವನ್ನ ಕನಸಿನಲ್ಲೂ ಕಾಡ್ತಿದೆ. ಸೌತ್​ಹ್ಯಾಂಪ್ಟನ್​ನಲ್ಲಿ ಕೊಹ್ಲಿ ಬಾಯ್ಸ್​ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸುತ್ತದೆ ಅಂತ ಯಾರೂ ಕೂಡ ಊಹಿಸಿರಲಿಲ್ಲ. ಆದ್ರೆ ಪಂದ್ಯದ ಫಲಿತಾಂಶದ ನಂತರ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಆಘಾತ ಎದುರಾಗಿತ್ತು.

ಸೂಪರ್​ಸ್ಟಾರ್​​​​ ಆಟಗಾರರನ್ನ ಒಳಗೊಂಡ ಟೀಮ್ ಇಂಡಿಯಾ, ಅದ್ಹೇಗೆ ಲೋ ಪ್ರೊಫೈಲ್ ನ್ಯೂಜಿಲೆಂಡ್​ ತಂಡಕ್ಕೆ ತಲೆಬಾಗಿತು ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.  ಆ ಪ್ರಶ್ನೆಗೆ ಉತ್ತರ, ಟೀಮ್ ಇಂಡಿಯಾ ಆಟಗಾರರ ಫ್ಲಾಪ್ ಶೋ.

ಹೌದು.. ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಚೆತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರಿಶಭ್ ಪಂತ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ.. ಹೀಗೆ ಟೀಮ್ ಇಂಡಿಯಾದಲ್ಲಿ ಒಬ್ಬರನ್ನ ಮೀರಿಸುವ ಮತ್ತೊಬ್ಬ ಸೂಪರ್​​ಸ್ಟಾರ್​ ಆಟಗಾರರಿದ್ದಾರೆ. ಆದ್ರೆ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಇವರು ತಂಡಕ್ಕೆ ನೆರವಾಗಲಿಲ್ಲ. ಜವಾಬ್ದಾರಿ ಮರೆತು ಆಡಿದ ಬಿಗ್ ಸ್ಟಾರ್ಸ್​​, ಕಿವೀಸ್​​ ಆಟಗಾರರ ಬಲೆಗೆ ಸಲೀಸಾಗಿ ಬಿದ್ರು.

ನಿಜ, ಫೈನಲ್​ನಲ್ಲಿ ಸ್ವಲ್ಪ ಹೋರಾಟ ಮಾಡಿದ್ರೆ ಪಂದ್ಯದಲ್ಲಿ ಗೆಲುವು ಸಾಧಿಸೋದು ಇರಲಿ. ಕನಿಷ್ಠ ಪಕ್ಷ ಡ್ರಾ ಸಾಧಿಸಬಹುದಿತ್ತು. ಆದ್ರೆ ಅದಕ್ಕೂ ಟೀಮ್ ಇಂಡಿಯಾ ಆಟಗಾರರು ಪ್ರಯತ್ನ ನಡೆಸಲೇ ಇಲ್ಲ. ಮತ್ತೊಂದೆಡೆ ಫೈನಲ್​ ಪಂದ್ಯಕ್ಕೂ ಮುನ್ನ ಹುಲಿಗಳಂತೆ ಘರ್ಜಿಸಿದ್ದ ಕೊಹ್ಲಿ ಬಾಯ್ಸ್​, ಟೆಸ್ಟ್ ಚಾಂಪಿಯನ್​​ಗಳು ನಾವೇ ಅನ್ನೋ ರೀತಿ ಬಿಲ್ಡ್​ ಅಪ್ ನೀಡಿದ್ರು. ಇಂಟ್ರಾಸ್ಕ್ವಾಡ್​ನ ರೀಲ್​ ಮ್ಯಾಚ್​​ನಲ್ಲಿ ಅಬ್ಬರಿಸಿದ ಆಟಗಾರರು, ರಿಯಲ್ ಫೈಟ್​ನಲ್ಲಿ ಬ್ಲ್ಯಾಕ್​ಕ್ಯಾಪ್ಸ್​ಗೆ ಸಲೀಸಾಗಿ ಶರಣಾದ್ರು.

ಒಂದೇ ಇನ್ನಿಂಗ್ಸ್​ಗೆ ಸುಸ್ತಾದ ಓಪನರ್ಸ್​
ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ, ಟೀಮ್ ಇಂಡಿಯಾ ಓಪನರ್ಸ್​ ತಂಡಕ್ಕೆ 62 ರನ್​ಗಳ ಜೊತೆಯಾಟದ ಕಾಣಿಕೆ ನೀಡಿದ್ರು. ಆದ್ರೆ ಎರಡನೇ ಇನ್ನಿಂಗ್ಸ್​ನಲ್ಲಿ ಈ ಇಬ್ಬರೂ ಆಟಗಾರರು, ಕ್ರೀಸ್​ನಲ್ಲಿ ನಿಲ್ಲೋದಕ್ಕೇ ಪರದಾಡಿದ್ರು. ತಂಡಕ್ಕೆ ಒಳ್ಳೆ ಸ್ಟಾರ್ಟ್ ಇರಲಿ, ವೈಯಕ್ತಿಕವಾಗಿ ರನ್​ಗಳಿಸೋಕೂ ಇವರಿಂದ ಸಾಧ್ಯವಾಗಲಿಲ್ಲ.

ಮಿಡಲ್ ಆರ್ಡರ್ ಬ್ಯಾಟಿಂಗ್ ಕೊಲ್ಯಾಪ್ಸ್​​
ಟೀಮ್ ಇಂಡಿಯಾ ಮಿಡಲ್ ಆರ್ಡರ್ ಬ್ಯಾಟಿಂಗ್​ ಹೇಳಿಕೊಳ್ಳೋದಕ್ಕೆ ಸಖತ್ ಸ್ಟ್ರಾಂಗ್ ಆಗಿದೆ.  ಕೊಹ್ಲಿ, ರಹಾನೆ ಇಬ್ಬರೂ 40 ಪ್ಲಸ್ ರನ್​ ಸ್ಕೋರ್ ಮಾಡಿದ್ರು. ಆದ್ರೆ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ, ಬ್ಯಾಟಿಂಗ್ ಮರೆತಂತೆ ಆಡಿದ್ರು. ಈ ತ್ರಿಮೂರ್ತಿಗಳ ಪ್ರದರ್ಶನ, ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು.

ಪಂತ್-ಜಡ್ಡು ಕಿವೀಸ್​​​ ಮುಂದೆ ಸೈಲೆಂಟ್
ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಶಭ್ ಪಂತ್​ಗೆ, ಟೆಸ್ಟ್ ಯಾವುದು ಒನ್ ಡೇ ಕ್ರಿಕೆಟ್ ಯಾವುದು ಅಂತ ಗೊತ್ತಿಲ್ಲ ಅಂತಾ ಕಾಣ್ಸುತ್ತೆ. ದಿಗ್ಗಜರಿಂದ ಫ್ಯೂಚರ್ ಸ್ಟಾರ್ ಅಂತ ಕರೆಸಿಕೊಂಡ್ರೆ ಪ್ರಯೋಜನವೇನು.? ತಂಡ ಸಂಕಷ್ಟದಲ್ಲಿದ್ದಾಗ ನೆರವಾಗೋ ಆಟಗಾರನೇ ರಿಯಲ್ ಸ್ಟಾರ್.

ಇನ್ನು ಜಡೇಜಾ ಆಯ್ಕೆ, ಎಲ್ಲೋ ಮಿಸ್ ಹೊಡೆದಂತೆ ಕಾಣುತ್ತದೆ. ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಪ್ರಯೋಜನಕ್ಕೆ ಬಾರದ ಜಡ್ಡು ಬದಲಿಗೆ, ಒಬ್ಬ ಫಾಸ್ಟ್ ಬೌಲರನ್ನ ಆಯ್ಕೆ ಮಾಡಿದ್ರೆ ಉಪಯೋಗವಾಗುತ್ತಿತ್ತೇನೋ.

ಫೈನಲ್​ನಲ್ಲಿ ನಡೆಯಲಿಲ್ಲ ಬೂಮ್ರಾ ಆಟ
ವೇಗಿ ಜಸ್ಪ್ರೀತ್ ಬೂಮ್ರಾ, ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಡೇಂಜರಸ್​ ಬೌಲರ್ ಆಗ್ತಾರೆ ಅಂತ ಎಲ್ಲರ ಲೆಕ್ಕಾಚಾರವಾಗಿತ್ತು. ಆದ್ರೆ ಸೌತ್​ಹ್ಯಾಂಪ್ಟನ್​ನಲ್ಲಿ ಬೂಮ್ರಾ ಆಟ ನಡೆಯಲೇ ಇಲ್ಲ. ಬೂಮ್ರಾ ಬೌಲಿಂಗ್​ನಲ್ಲಿ ಪೇಸ್ ಒಂದು ಬಿಟ್ರೆ, ಸ್ವಿಂಗ್ ಹಾಗೇ ಬ್ಯಾಟ್ಸ್​ಮನ್​ಗಳನ್ನ ಟ್ರಬಲ್ ಮಾಡುವಂತಹ ಎಕ್ಸ್ಟ್ರಾರ್ಡಿನರಿ ಡಿಲಿವರಿಗಳನ್ನ ನೋಡಲೇ ಇಲ್ಲ. ನಿಜ ಹೇಳಬೇಕಂದ್ರೆ, ಈ ಪಂದ್ಯದಲ್ಲಿ ಬೂಮ್ರಾ, ಅಟ್ಟರ್ ಫ್ಲಾಪ್ ಬೌಲರ್​ ಎನಿಸಿಕೊಂಡ್ರು.

ತಂಡದ ಆಯ್ಕೆಯಲ್ಲಿ ಎಡವಿದ ಕೊಹ್ಲಿ
ಸ್ಟಾರ್ ಆಟಗಾರರಷ್ಟೇ ತಂಡದ ಸೋಲಿಗೆ ಕಾರಣರಲ್ಲ. ನಾಯಕ ವಿರಾಟ್ ಕೊಹ್ಲಿ ಸಹ, ತಂಡದ ಸೋಲಿನ ಜವಾಬ್ದಾರಿ ಹೊರಬೇಕಿದೆ. ನಾಯಕನಾಗಿ ಪರ್ಫೆಕ್ಟ್ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿದ್ರೆ, ಬಹುಷಃ ಫಲಿತಾಂಶದಲ್ಲಿ ವ್ಯತ್ಯಾಸ ಕಾಣಬಹುದಿತ್ತೇನೋ. ಹೀಗಾಗಿ ಕೊಹ್ಲಿ ಮತ್ತು ಟೀಮ್ ಮ್ಯಾನೇಜ್​ಮೆಂಟ್​​, ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಾದ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕಿದೆ.

ಒಟ್ಟಿನಲ್ಲಿ ಟೆಸ್ಟ್ ಚಾಂಪಿಯನ್​​ಶಿಪ್ ಮುಗಿದ್ರೂ, ಟೀಮ್ ಇಂಡಿಯಾ ಆಟಗಾರರ ವಿರುದ್ಧ ಟೀಕೆಗಳು ಮಾತ್ರ ನಿಂತಿಲ್ಲ. ನ್ಯೂಜಿಲೆಂಡ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿರುವ ಕೊಹ್ಲಿ ಬಾಯ್ಸ್​, ಮುಂಬರುವ ಸರಣಿಗಳಲ್ಲಾದ್ರೂ ಉತ್ತಮ ಪ್ರದರ್ಶನ ನೀಡಿ, ಅಭಿಮಾನಿಗಳ ಮುಖದಲ್ಲಿ ಸಂತಸ ಮೂಡಿಸಬೇಕಿದೆ.

The post ಸುಸ್ತಾದ ಓಪನರ್ಸ್​, ಮಿಡಲ್ ಆರ್ಡರ್ ಬ್ಯಾಟಿಂಗ್ ಕೊಲ್ಯಾಪ್ಸ್​​: WTCನಲ್ಲಿ ಸೋಲಿಗೆ 5 ಕಾರಣಗಳು appeared first on News First Kannada.

Source: newsfirstlive.com

Source link