ಕೊರೊನಾ ಸೋಂಕು ವಿಶ್ವಾದ್ಯಂತ ಕ್ರಿಕೆಟ್​ ಚಟುವಟಿಕೆಗಳಿಗೆ ಬ್ರೇಕ್​ ಹಾಕಿದೆ. ಸದಾ ಬ್ಯುಸಿ ಶೆಡ್ಯೂಲ್​ನಿಂದ ಬಸವಳಿದಿರುವ ಕ್ರಿಕೆಟರ್ಸ್​​ಗಳೆಲ್ಲಾ ಇದೀಗ ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ. ಆಸ್ಟ್ರೇಲಿಯಾದ ಸ್ಟೋಟಕ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ಕೂಡ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಬಿಡುವಿನ ವೇಳೆ ಸಿಕ್ಕಿರುವ ಅಮೂಲ್ಯ ಸಮಯವನ್ನ ಪತ್ನಿ, ಮಕ್ಕಳೊಂದಿಗೆ ವಾರ್ನರ್​​ ಕಳೆಯುತ್ತಿದ್ದು, ಮಕ್ಕಳೊಂದಿಗೆ ವಾರ್ನರ್​ ಮೋಜುಮಸ್ತಿ ಮಾಡುತ್ತಿರುವ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ವಾರಾಂತ್ಯಕ್ಕೆ ನಿಮ್ಮ ಪ್ಲ್ಯಾನ್​ ಏನು ಎಂಬ ಪ್ರಶ್ನೆ ಹಾಕಿ 4 ವಿಡಿಯೋಗಳನ್ನ ಕ್ಯಾಂಡಿ ವಾರ್ನರ್​ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದು, ವೈರಲ್​ ಆಗಿದೆ.

 

The post ‘ಸೂಪರ್​​ ಡ್ಯಾಡ್​’ ಅವತಾರದಲ್ಲಿ ಡೇವಿಡ್​​​ ವಾರ್ನರ್​..! appeared first on News First Kannada.

Source: newsfirstlive.com

Source link