ಸೂಪರ್ ಚಾಲೆಂಜ್ ರೌಂಡಿನ ಸುಳಿಯಲ್ಲಿ ಸೂಪರ್ ಅಮ್ಮಂದಿರು


ನನ್ನಮ್ಮ ಸೂಪರ್ ಸ್ಟಾರ್​ನಲ್ಲಿ ಈ ವಾರ ಸೂಪರ್ ಮಿನಿಟ್​ ಕಾನ್ಸೆಪ್ಟ್​ನ್ನ ತರಲಾಗಿತ್ತು. ಮಕ್ಕಳು ಆಟ ಶುರು ಮಾಡಿದ್ರೇ ಅಮ್ಮಂದಿರು ಆಟನ ಕಂಪ್ಲೀಟ್​ ಮಾಡ್ಬೇಕಿತ್ತು. ಮೊದಲಿಗೆ ಬಂದವ್ರೇ ಮಮತಾ-ಪೂರ್ವಿಕಾ ಹಾಗೂ ವಿಜಯಲಕ್ಷ್ಮೀ-ಧೀರಜ್. ಸಖತ್​ ಗೇಮ್​ ಆಡಿದ್ರು. ಸೂಪರ್​​ ಸ್ಟಾರ್​ ಮಮತಾ-ಪೂರ್ವಿಕಾ ವಿನ್​ ಆದ್ರು. ಬಟ್​ ವಿಜಯಲಕ್ಷ್ಮೀ ಅವ್ರು ಗೇಮ್ ಸೋತಿದ್ದಕ್ಕೆ ಸ್ವಲ್ಪ ಎಮೋಷನಲ್​ ಆದ್ರು.

ಇನ್ನೂ ನಂದಿನಿ-ಅದ್ವಿಕ್​ ಜೋಡಿಗೆ ಕಾಂಪಿಟೆಟರ್​ ಆಗಿ ಜಾಹ್ನವಿ-ಗ್ರಂಥ್​​ ಜೋಡಿ ಗೇಮ್​ ಆಡಿದ್ರು. ಇದ್ರಲ್ಲಿ ಜಾಹ್ನವಿ-ಗ್ರಂಥ್ ವಿನ್​ ಆದ್ರು. ಸೂಪರ್​ ಸ್ಟಾರ್​ ವಂಶಿಕಾ ಅಪ್ಪನನ್ನೆ ಮಿರಿಸುವ ಪರ್ಫಾಮನ್ಸ್​ ಮಾಡಿದ್ದಾಳೆ. ಮಾಸ್ಟರ್​ ಅನಂದ್​ ಹಾಗೂ ಅನಂತ್​ ನಾಗ್​ ಅವ್ರ ಸೂಪರ್​​ ಹಿಟ್​ ಸಿನಿಮಾ ಗೌರಿ ಗಣೇಶ್​ ಚಿತ್ರವನ್ನ ರಿಕ್ರಿಯೇಟ್​ ಮಾಡಿದ್ರು ಯಶಸ್ವಿನಿ-ವಂಶಿಕಾ.

ಇನ್ನೂ ಸೃಜನ್​ ಹಾಗೂ ಅನು ಕಾಂಪಿಟೇಟರ್ಸ್​ ಆದ್ರೇ ಹೆಂಗ್​ ಇರುತ್ತೆ ಹೇಳಿ..? ಸಖತ್ತಾಗೆ ಇರತ್ತೆ ಅಲ್ವ ಅದ್ರರಲ್ಲಿ ವಿನ್ ಆಗಿದ್ದು ನಮ್ಮ ಅನುಪಮ ಅವರು. ಇನ್ನೂ, ಭವ್ಯಾ-ಸುಪ್ರಭಂ ಹಾಗೂ ಸುಪ್ರಿತಾ-ಇಬ್ಬನಿ ಜೋಡಿಯಲ್ಲಿ ಭವ್ಯಾ-ಸುಪ್ರಭಂ ಗೆದ್ದರು.ಒಟ್ನಲ್ಲಿ ಸೂಪರ್​ ಅಮ್ಮಂದಿರು ಹಾಗೂ ಪುಟಾಣಿ ಪಂಟ್ರುಗಳ ಥ್ರಿಲ್ಲಿಂಗ್​ ಗೇಮ್ಸ್​ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದು ಸುಳ್ಳಲ್ಲ.

The post ಸೂಪರ್ ಚಾಲೆಂಜ್ ರೌಂಡಿನ ಸುಳಿಯಲ್ಲಿ ಸೂಪರ್ ಅಮ್ಮಂದಿರು appeared first on News First Kannada.

News First Live Kannada


Leave a Reply

Your email address will not be published.