ಸೂರಜ್ ರೇವಣ್ಣಗೆ ಹಾಸನ ಟಿಕೆಟ್​​- ಕೊನೆಗೂ ಬಿಡುಗಡೆ ಆಯ್ತು ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ


ಬೆಂಗಳೂರು: ವಿಧಾನಪರಿಷತ್ ಚುನಾವಣೆ ರಂಗೇರಿದ್ದು ಇಂದು ಜೆಡಿಎಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆಯಾಗಿದೆ. ಇಂದೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಕೊನೆಯ ಹಂತದಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿ ದಳಪತಿಗಳು ಕುತೂಹಲ ಮೂಡಿಸಿದ್ದಾರೆ.

ಜೆಡಿಎಸ್​​ ಒಟ್ಟು ಏಳು ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮಂಡ್ಯದಲ್ಲಿ ಅಪ್ಪಾಜಿಗೌಡ, ಹಾಸನದಲ್ಲಿ  ಸೂರಜ್ ರೇವಣ್ಣ, ಮೈಸೂರುರಿನಲ್ಲಿ ಸಿ.ಎನ್ ಮಂಜೇಗೌಡ, ಬೆಂಗಳೂರು(ಗ್ರಾ)ದಲ್ಲಿ ರಮೇಶ್‌ಗೌಡ, ತುಮಕೂರುನಲ್ಲಿ ಅನಿಲ್ ಕುಮಾರ್, ಕೋಲಾರದಲ್ಲಿ ವಕ್ಕಲೇರಿ ರಾಮು ಹಾಗೂ ಕೊಡಗು ಸ್ಥಾನಕ್ಕೆ ಹೆಚ್.ಯು ಇಸಾಕ್ ಖಾನ್​​ಗೆ ಟಿಕೆಟ್​ ನೀಡಿದೆ.

ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಭ್ಯರ್ಥಿಗಳನ್ನು ಈಗಾಗಲೇ ಘೋಷಣೆ ಮಾಡಿದ್ದಾರೆ. ಇತ್ತ ಬಿಜೆಪಿಯಲ್ಲಿ ಟಿಕೆಟ್​ ಸಿಗದೆ ಜೆಡಿಎಸ್​​ ಕದ ತಟ್ಟಿದ್ದ ನಾಯಕರಿಗೆ ಮಣೆ ಹಾಕದೇ ದಳಪತಿಗಳು ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *