ದಾವಣಗೆರೆ: ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಯಡಿಯೂರಪ್ಪ ನವರು ಸಿಎಂ ಆಗಿ ಮುಂದಿವರೆಯುದು ಅಷ್ಟೇ ಸತ್ಯ ಎಂದು ಹೊನ್ನಾಳಿ ಕ್ಷೇತ್ರದ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಹೈಕಮಾಂಡ್ ಸೂಚನೆ ನೀಡಿದರೆ ರಾಜೀನಾಮೆ ನೀಡಿ ಪಕ್ಷದ ಸಂಘಟನೆಗೆ ಶ್ರಮಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿ ಯಾಗಿದ್ದು, ಈ ವಿಚಾರವಾಗಿ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕ ಎಂಪಿ ರೇಣುಕಾಚಾರ್ಯ ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ, ಯಡಿಯೂರಪ್ಪ ನವರು ಸಿಎಂ ಆಗಿ ಮುಂದಿವರೆಯುದು ಅಷ್ಟೇ ಸತ್ಯ ಎಂದು ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್ ಬೀಸಿದ್ದಾರೆ. ಇದನ್ನೂ ಓದಿ: ಚಿರುವಿನ ಕೊನೆಯ ದಿನ ನಡೆದಿದ್ದು ಏನು? – ಬಹಿರಂಗ ಪಡಿಸಿದ ಮೇಘನಾ

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು ಹೈಕಮಾಂಡ್ ಸೂಚಿಸಿದರೆ ಎಂದು ಹೇಳಿದ್ದಾರೆ ವಿನಃ ಬೇರೆ ಅಲ್ಲ ಇದುವರೆಗೂ ಹೈಕಮಾಂಡ್ ಸೂಚಿಸಿಲ್ಲ ಅದ್ದರಿಂದ ರಾಜೀನಾಮೆ ನೀಡುವ ಪ್ರಶ್ನೇಯೇ ಇಲ್ಲ, ಇನ್ನು ಎರಡುವರೇ ವರ್ಷ ಸಿಎಂ ಆಗಿ ಯಡಿಯೂರಪ್ಪ ನವರು ಮುಂದುವರೆಯುತ್ತಾರೆ. ನಾನು ಕೂಡ ಇಂದು ಸಂಜೆ ಬೆಂಗಳೂರಿಗೆ ಹೋಗಿ ಸಿಎಂ ಭೇಟಿ ಮಾಡ್ತೇನೆ. ಸಿಎಂ ಭೇಟಿ ಪೂರ್ವ ನಿಯೋಜನೆ ಭೇಟಿಯಾಗಿದೆ ಎಂದು ಹೇಳಿದ್ದಾರೆ.

ಯಾವುದೇ ರಾಜಕೀಯ ಚರ್ಚೇ ಇಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಜೊತೆ ಚರ್ಚೆ ಮಾಡಲು ಹೊರಟಿರುವೆ. ಯಡಿಯೂರಪ್ಪ ಒಂದು ಆಲದ ಮರವಿದ್ದಂತೆ ನಾವು ಅವರ ನೆರಳಿನಲ್ಲಿ ಇರುವವರು. ಅವರಿಗೆ ಪರ್ಯಾಯ ನಾಯಕತ್ವದ ಪ್ರಶ್ನೆಯೇ ಇಲ್ಲ, ಸಿಎಂ ಬದಲಾವಣೆಯಾದ್ರೆ ಮಾತ್ರ ಪರ್ಯಾಯ ನಾಯಕತ್ವದ ಪ್ರಶ್ನೆ ಬರುತ್ತೆ. ಯಡಿಯೂರಪ್ಪ ಸಂಘಟನೆಯಿಂದ ಬೆಳೆದು ಬಂದ ಹಿನ್ನಲೆ ಶಿಸ್ತಿನಿಂದ ಹೇಳಿಕೆ ನೀಡಿದ್ದಾರೆ. ನಾವು ಯಡಿಯೂರಪ್ಪ ನವರ ಬೆಂಬಲಕ್ಕೆ ಸದಾ ಇರ್ತೇವೆ ಎಂದು ಸ್ಪಷ್ಟವಾಗಿ ತಮ್ಮ ನಿಲುವನ್ನು ಹೇಳಿದ್ದಾರೆ.

The post ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಬಿಎಸ್‍ವೈ ಸಿಎಂ ಆಗಿ ಮುಂದಿವರೆಯುದು ಅಷ್ಟೇ ಸತ್ಯ: ರೇಣುಕಾಚಾರ್ಯ appeared first on Public TV.

Source: publictv.in

Source link