ದಾವಣಗೆರೆ: ಏಷ್ಯಾದ ಎರಡನೇ ಅತೀದೊಡ್ಡ ಕೆರೆ ಎನ್ನಿಸಿಕೊಂಡಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಯ ಬಳಿ ರಸ್ತೆ ಅಗಲೀಕರಣದ ಹೆಸರಿನಲ್ಲಿ ಗುಡ್ಡವನ್ನ ಸ್ಫೋಟಿಸಲಾಗಿದೆ. ಇದರಿಂದಾಗಿ ಜನರು ಗುಡ್ಡ ಕುಸಿತದ ಭೀತಿಯಲ್ಲಿದ್ದಾರೆ.

ಕೆರೆ ಸುತ್ತಮುತ್ತ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆ ಗುಡ್ಡದ ಕಲ್ಲುಬಂಡೆಯನ್ನ ಸ್ಫೋಟಿಸಲಾಗಿದೆ. ಬ್ಲಾಸ್ಟ್ ಮಾಡಿದ ವಿಡಿಯೋ ವೈರಲ್ ಆಗಿದ್ದು ಸೂಳೆಕೆರೆ ಗುಡ್ಡದ ಅಕ್ಕಪಕ್ಕದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಇನ್ನು ಸ್ಫೋಟಕ್ಕೆ ಅನುಮತಿ ಪಡೆಯದೇ ಸ್ಫೋಟಿಸಲಾಗಿದೆ ಎಂದು ಸೂಳೆಕೆರೆ ಗ್ರಾಮದ ಜನರು ಆರೋಪಿಸಿದ್ದಾರೆ.

The post ಸೂಳೆಕೆರೆಯಲ್ಲಿ ಡೈನಾಮಿಕ್ ಸ್ಫೋಟ; ಗುಡ್ಡ ಕುಸಿಯುವ ಭೀತಿಯಲ್ಲಿ ಗ್ರಾಮಸ್ಥರು appeared first on News First Kannada.

Source: newsfirstlive.com

Source link