ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ರಾಧೆ ಶ್ಯಾಮ ಸೀರಿಯಲ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಪ್ಪ ಅಮ್ಮನ ಮುದ್ದಿನ ಮಗಳು ರಾಧೆ ಐಪಿಎಸ್ ಮಾಡಬೇಕೆಂಬ ಕನಸು ಕಂಡಿರುವ ಹುಡುಗಿ. ಸಾಮಾಜಿಕ ಪ್ರಜ್ಞೆ, ನೇರವಾದ ನಡೆ ನುಡಿ, ಸದಾ ನ್ಯಾಯದ ಪರವಾಗಿ ನಿಲ್ಲುವ ರಾಧೆ, ಇತ್ತ ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇರುವ ಮುಗ್ಧ ಹುಡುಗ ಶ್ಯಾಮ. ಇವರಿಬ್ಬರ ಸುತ್ತ ಹೆಣೆಯಲಾದ ಕತೆಯೇ ರಾಧೆ ಶ್ಯಾಮ.
ರಾಧೆ ಶ್ಯಾಮ ಸೀರಿಯಲ್ ಕಿರುತೆರೆಯಲ್ಲಿ 100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂಭ್ರಮವನ್ನ ಸೀರಿಯಲ್ ತಂಡ ಸೆಟ್ನಲ್ಲಿ ಕೇಕ್ ಕತ್ತರಿಸುವ ಮೂಲಕ ಧಾರಾವಾಹಿಯ ಯಶಸ್ಸನ್ನ ಆಚರಿಸಿದ್ದಾರೆ. ಇದು ರಾಧೆ ಶ್ಯಾಮ ತಂಡದ ಮೊದಲ ಮೈಲುಗಲ್ಲಾಗಿದ್ದು, ಇಡೀ ತಂಡ ಸಂತಸದಲ್ಲಿದೆ.
ಈ ಬಗ್ಗೆ ತಮ್ಮ ಇನ್ಸ್ಟಾ ಪೇಜ್ನಲ್ಲಿ ಬರೆದುಕೊಂಡಿರುವ ನಾಯಕನಟ ಯದುಕುಮಾರ್ ಹಾಗೂ ನಟಿ ತನ್ವಿ ರಾವ್, ರಾಧೆ ಶ್ಯಾಮರ ಜರ್ನಿ ಈಗ 100 ಸಂಚಿಕೆಗಳನ್ನ ಪೂರೈಸಿದೆ. ಹೀಗೇ ನಿಮ್ಮ ಸಪೋರ್ಟ್, ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸದ್ಯ, ರಾಧೆ ಶ್ಯಾಮ ಸಂಸಾರದ ಏಳು-ಬೀಳುಗಳಲ್ಲಿ ಜೊತೆಯಾಗಿ ಸಾಗುತ್ತಿದ್ದಾರೆ. ರಾಧೆ ಅತ್ತೆ ಬಯಸಿದಂತೆ ಮನೆ ಮಿಚ್ಚಿದ ಸೊಸೆಯಾಗುತ್ತಾಳಾ..? ಅಥವಾ ಐಪಿಎಸ್ ಓದಿ ಸಮಾಜ ಸೇವೆ ಮಾಡುತ್ತಾಳಾ ಅನ್ನೋದೇ ರಾಧೆ-ಶ್ಯಾಮನ ಕತೆಯ ಸಾರಂಶ. ಇನ್ನೂ ಖಡಕ್ ಅತ್ತೆ ಪಾತ್ರದಲ್ಲಿ ನಟಿ ಅಶ್ವಿನಿ ಅವರು ಮಿಂಚುತ್ತಿದ್ದಾರೆ.
ಒಟ್ಟಿನಲ್ಲಿ ವಿಭಿನ್ನ ಕತಾ ಹಂದರದ ಮೂಲಕ ರಂಜಿಸುತ್ತಿರುವ ಈ ಧಾರಾವಾಹಿಯ ಕತೆ ಅದ್ಧೂರಿಯಾಗಿ ಮೂಡಿ ಬರುತ್ತಿದ್ದು, ರಾಧೆ-ಶ್ಯಾಮ ಪ್ರೇಮ ಪಕ್ಷಿಗಳಾಗಿದ್ದಾರೆ. ಸಂತಸದಲ್ಲಿರುವ ತಂಡಕ್ಕೆ ಶುಭಾಶಗಳ ಮಹಾಪೂರವೇ ಹರಿದು ಬರುತ್ತಿದೆ. ನಮ್ಮ ಕಡೆಯಿಂದಲೂ ಬೆಸ್ಟ್ ವಿಶ್ಶಸ್.
The post ಸೆಂಚೂರಿ ಸಂಚಿಕೆಯ ಸಂಭ್ರಮದಲ್ಲಿ ಜನಮೆಚ್ಚಿದ ‘ರಾಧೆ ಶ್ಯಾಮ’ appeared first on News First Kannada.