ಸೆನ್ಸೇಷನಲ್ ಕ್ರೈಮ್ ಕತೆಗಳು: ತೂತುಕುಡಿಯ ಅಮಾನುಷ ಜೋಡಿ ಲಾಕಪ್ ಕೊಲೆ ತಮಿಳುನಾಡು ಜನರನ್ನು ತತ್ತರಿಸುವಂತೆ ಮಾಡಿದ್ದವು! – Tuticorin custodial killings prompted super star Rajnikanth condemn police action


ಸಂತಾಕುಲಮ್ ಇನ್ಸ್ ಪೆಕ್ಟರ್ ಮತ್ತು ಇನ್ನೂ 4 ಜನ ಪೊಲೀಸರು ಜೈರಾಜ್ ಮೇಲೆ ಬೆನಿಕ್ಸ್ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೆ ಅವರ ಮೇಲೆ ಅಮಾನುಷ ಮತ್ತು ಅಸ್ವಾಭಾವಿಕ ಲೈಂಗಿಕ ಅತ್ಯಾಚಾರ ನಡೆಸಿದ್ದರು. ತಂದೆ ಮತ್ತು ಮಗನ ದೇಹಗಳು ಊಹೆಗೆ ನಿಲುಕದ ಮಟ್ಟಿಗೆ ಜರ್ಝರಿತಗೊಂಡಿದ್ದವು.

ಸೆನ್ಸೇಷನಲ್ ಕ್ರೈಮ್ ಕತೆಗಳು: ತೂತುಕುಡಿಯ ಅಮಾನುಷ ಜೋಡಿ ಲಾಕಪ್ ಕೊಲೆ ತಮಿಳುನಾಡು ಜನರನ್ನು ತತ್ತರಿಸುವಂತೆ ಮಾಡಿದ್ದವು!

ಪಿ ಜೈರಾಜ್ ಮತ್ತು ಜೆ ಬೆನಿಕ್ಸ್

ಕೋವಿಡ್-19 ಪಿಡುಗು (pandemic) ಭಾರತದಾದ್ಯಂತ ಹಬ್ಬಿದಾಗ ಲಕ್ಷಾಂತರ ಜನ ಈ ಮಾರಕ ಸೋಂಕಿಗೆ ಬಲಿಯಾಗಿದ್ದು ಇತಿಹಾಸ. ಆದರೆ, ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವು ಲಾಕ್ ಡೌನ್ ಜಾರಿಯಲ್ಲಿದ್ದಾಗ ಪೊಲೀಸ್ ಕಸ್ಟಡಿಯಲ್ಲಿ ಕೊಲೆಯಾದ ತಂದೆ-ಮಗನ ಕತೆಯನ್ನು ನಿಮಗೆ ಹೇಳುತ್ತಿದ್ದೇವೆ. ಜೂನ್ 19, 2020 ರಂದು ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಸಂತಾಕುಲಮ್ ಠಾಣೆಯ ಪೊಲೀಸರು 59-ವರ್ಷ-ವಯಸ್ಸಿನ ಪಿ ಜೈರಾಜ್ (P Jairaj) ಮತ್ತು ಅವರ 31-ವರ್ಷ-ವಯಸ್ಸಿನ ಮಗ ಜೆ ಬೆನಿಕ್ಸ್ ನನ್ನು (J Beniks) ಭಾರತ ಸರ್ಕಾರ ದೇಶದಾದ್ಯಂತ ವಿಧಿಸಿದ್ದ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ ಅರೋಪದಲ್ಲಿ ಬಂಧಿಸಿದ್ದರು. ಪೊಲೀಸರ ಹೇಳಿಕೆ ಪ್ರಕಾರ ಮೊಬೈಲ್ ಫೋನ್ ಮತ್ತು ಅದಕ್ಕೆ ಸಂಬಂಧಿಸ ಉಪಕರಣಗಳ ತಮ್ಮ ಅಂಗಡಿಯನ್ನು ಜೈರಾಜ್ ಮತ್ತು ಅವರ ಮಗ ಲಾಕ್ ಡೌನ್ ಸಡಲಿಸಲಾಗಿದ್ದ ಅವಧಿಗೆ ಮೀರಿ ಅಂಗಡಿಯನ್ನು ಓಪನ್ ಇಟ್ಟಿದ್ದರಿಂದ ಬಂಧಿಸಲಾಗಿತ್ತು.

ಜೂನ್ 19ರಂದು ಅವರಿಬ್ಬರ ವಿರುದ್ಧ ಎಫ್ ಐ ಆರ್ ದಾಖಲಾದ ಬಳಿಕ ಬಂಧಿಸಲಾಯಿತು. ಪ್ರಕರಣದ ತನಿಖೆ ನಡೆಸಿಸ ಕೇಂದ್ರೀಯ ತನಿಖಾ ತಂದೆ ಮಗನ ಜೋಡಿಯು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿರಲಿಲ್ಲ ಎಂದು ತಾನು ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಹೇಳಿತ್ತು. ಕಸ್ಟಡಿಯಲ್ಲಿ ಜೈರಾಜ್ ಮತ್ತು ಮತ್ತು ಬೆನಿಕ್ಸ್ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರಿಂದ ಅವರಿಬ್ಬರ ಸಾವು ಸಂಭವಿಸಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿತ್ತು.

ಜೂನ್ 22, 2020 ರಂದು ಬೆನಿಕ್ಸ್ ಅಸ್ವಸ್ಥನಾದ ಕಾರಣ ಅವರನ್ನು ಕೋವಿಲ್ ಪಟ್ಟಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅದೇ ದಿನ ಸಾಯಂಕಾಲ ಅವರು ಅಲ್ಲೇ ಕೊನೆಯುಸಿರೆಳೆದರು. ಮರುದಿನವೇ ಜೈರಾಜ್ ಪೊಲೀಸ್ ಕಸ್ಟಡಿಯಲ್ಲಿ ನಿಧನಹೊಂದಿದರು.

ಕಸ್ಟಡಿ ಸಾವುಗಳು ಮತ್ತು ನ್ಯಾಯಾಲಯಗಳ ಪಾತ್ರ

ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠವು ಜೂನ್ 24, 2020ರಂದು ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಅದೇ ದಿನ ನ್ಯಾಯಮೂರ್ತಿಗಳಾದ ಪಿ ಎನ್ ಪ್ರಕಾಶ್ ಮತ್ತು ಬಿ ಪುಗಲೆಂದಿ ಅವರು ತೂತ್ತುಕುಡಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪ್ರಕರಣದ ತನಿಖೆ ನಡೆಸಿ ಸ್ಟೇಟಸ್ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು. ಪೊಲೀಸರು ತಮ್ಮ ತನಿಖಾ ವಿಚಾರಣೆಯನ್ನು ಮುಗಿಸಿದ ಬಳಿಕ ಜೈರಾಜ್ ಮತ್ತು ಬೆನಿಕ್ಸ್ ಮರಣೋತ್ತರ ಪರೀಕ್ಷೆಯನ್ನು ಮ್ಯಾಜಿಸ್ಟ್ರೇಟ್ ಒಬ್ಬರ ಸಮ್ಮುಖದಲ್ಲಿ ನಡೆಸಬೇಕು ಮತ್ತು ಮೂವರು ತಜ್ಞರು ಶವಪರೀಕ್ಷೆ ವಿಡಿಯೋ ಟೇಪ್ ಮಾಡಬೇಕೆಂದು ಆದೇಶ ನೀಡಿತು.

ವಿಚಾರಣೆಯಲ್ಲಿ ಬೆಳಕಿಗೆ ಅಂಶಗಳನ್ನು ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ಮದ್ರಾಸ್ ಹೈಕೋರ್ಟ್ ಗೆ ಸಲ್ಲಿಸಲಾಯಿತು. ನಂಬಲು ಅಸಾಧ್ಯವೆನಿಸುವ ಹಲವು ಅಂಶಗಳು ವರದಿಗಳಲ್ಲಿ ಉಲ್ಲೇಖಿಸಲಾಗಿದ್ದವು. ಅಸಲಿಗೆ, ಸಂತಾಕುಲಮ್ ಇನ್ಸ್ ಪೆಕ್ಟರ್ ಮತ್ತು ಇನ್ನೂ 4 ಜನ ಪೊಲೀಸರು ಜೈರಾಜ್ ಮೇಲೆ ಬೆನಿಕ್ಸ್ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೆ ಅವರ ಮೇಲೆ ಅಮಾನುಷ ಮತ್ತು ಅಸ್ವಾಭಾವಿಕ ಲೈಂಗಿಕ ಅತ್ಯಾಚಾರ ನಡೆಸಿದ್ದರು. ತಂದೆ ಮತ್ತು ಮಗನ ದೇಹಗಳು ಊಹೆಗೆ ನಿಲುಕದ ಮಟ್ಟಿಗೆ ಜರ್ಝರಿತಗೊಂಡಿದ್ದವು.

ವರದಿಗಳ ಸಲ್ಲಿಕೆಯಾದ ಬಳಿಕ ತಮಿಳುನಾಡು ಮಾನವ ಹಕ್ಕುಗಳ ಅಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡು ಪೊಲೀಸರ ಪ್ರತಿಕ್ರಿಯೆಯನ್ನು ಕೇಳಿದೆ.

‘ಸರ್ಕಾರದ ಅಥವಾ ವ್ಯವಸ್ಥೆಯ ಕ್ರಿಯೆಗಳು ಜನರಲ್ಲಿ ವಿಶ್ವಾಸ ಹುಟ್ಟಿಸುವಂತಿರಬೇಕು. ಪ್ರತಿಸಲ ಪೊಲೀಸ್ ಲಾಕಪ್ ನಲ್ಲಿ ವ್ಯಕ್ತಿಯೊಬ್ಬ ಸತ್ತಾಗ, ಅದು ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತದೆ,’ ಎಂದು ಕೋರ್ಟ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಈ ಘಟನೆಯ ಬಳಿಕ ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ತಮಿಳುನಾಡು ರಾಜ್ಯ ಪೊಲೀಸ್ ವ್ಯವಸ್ಥೆಗೆ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಅವುಗಳಿಗೆ ಬದ್ಧರಾಗಿರುವಂತೆ ಮತ್ತು ಇಂಥ ಪ್ರಕರಣ ಮರುಕಳಿಸದಂತೆ ಜಾಗ್ರತೆವಹಿಸಬೇಕೆಂದು ಸೂಚಿಸಿದರು.

ಜೈರಾಜ್ ಮತ್ತು ಬೆನಿಕ್ಸ್ ಮೇಲೆ ಪಶುಗಳಂತೆ ಹಲ್ಲೆ ನಡೆಸಿದ ಸಂತಾಕುಲಮ್ ಇನ್ಸ್ ಪೆಕ್ಟರ್ ರಘು ಗಣೇಶ್ ಮತ್ತು ಇತರ ನಾಲ್ಬರು ಪೊಲೀಸರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ರಾಘುಗೆ ಇತ್ತೀಚಿಗಷ್ಟೇ ಜಾಮೀನು ಸಿಕ್ಕಿದೆ.

ಈ ಪ್ರಕರಣ ತಮಿಳುನಾಡಿನಲ್ಲಿ ಯಾವಮಟ್ಟದ ತಲ್ಲಣ ಸೃಷ್ಟಿಸಿತೆಂದರೆ ಮೆಗಾ ಸ್ಟಾರ್ ರಜಿನಿಕಾಂತ್ ಅವರು ಪೊಲೀಸರ ಕೃತ್ಯವನ್ನು ಉಗ್ರವಾಗಿ ಖಂಡಿಸಿದ್ದರು ಮತ್ತು ಪೊಲೀಸರ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದಿದ್ದವು.

ತಾಜಾ ಸುದ್ದಿ

TV9 Kannada


Leave a Reply

Your email address will not be published.