ನವದೆಹಲಿ: ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೂ ಲಸಿಕೆ ಸಿಗುವ ನಿರೀಕ್ಷೆ ಇದೆ ಅಂತಾ ದೆಹಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.

2 ಮತ್ತು 3ನೇ ಹಂತದ ಪ್ರಯೋಗಗಳು ಪೂರ್ಣಗೊಂಡ ನಂತರ ಮಕ್ಕಳ ಮೇಲೆ ಕೋವ್ಯಾಕ್ಸಿನ್​ ಲಸಿಕೆಯ ಪರಿಣಾಮ ಗೊತ್ತಾಗಲಿದೆ. ಸೆಪ್ಟೆಂಬರ್​ ವೇಳೆಗೆ ಪ್ರಯೋಗದ ದತ್ತಾಂಶಗಳು ಲಭ್ಯವಾಗಲಿದ್ದು, ಅದನ್ನು ಅಧರಿಸಿ ಲಸಿಕೆ ಬಳಕೆಗೆ ಅನುಮೋದನೆ ನೀಡಲಾಗುತ್ತೆ ಎಂದಿದ್ದಾರೆ.

ಇನ್ನು ಅಮೆರಿಕಾದ ಫೈಜರ್ ಲಸಿಕೆ ಬಳಕೆಗೆ ಭಾರತದಲ್ಲಿ ಅನುಮತಿ ಸಿಕ್ಕಿದ್ರೆ ಆ ಲಸಿಕೆಯನ್ನು ಮಕ್ಕಳಿಗೆ ನೀಡಬಹುದು ಅಂತಾ ಗುಲೇರಿಯಾ ತಿಳಿಸಿದ್ದಾರೆ.

The post ‘ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ ಸಿಗುವ ನಿರೀಕ್ಷೆ’ -ಏಮ್ಸ್​ ನಿರ್ದೇಶಕ appeared first on News First Kannada.

Source: newsfirstlive.com

Source link