ಸೆಮಿಫೈನಲ್​ ತಲುಪಿದ ‘ಕಾಮಿಡಿ ಕಿಲಾಡಿಗಳು’.. ಯಾರಾಗ್ತಾರೆ ಫೈನಲ್​ ಚಾಂಪಿಯನ್ಸ್..?

ಸೆಮಿಫೈನಲ್​ ತಲುಪಿದ ‘ಕಾಮಿಡಿ ಕಿಲಾಡಿಗಳು’.. ಯಾರಾಗ್ತಾರೆ ಫೈನಲ್​ ಚಾಂಪಿಯನ್ಸ್..?

ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡಿಗರ ಮೆಚ್ಚಿನ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಫೈನಲ್ ತಲುಪಲಿದೆ. ಈಗಾಗಲೇ ತಂಡ ಸೆಮಿ ಫೈನಲ್​ ಶೂಟಿಂಗ್​ ಕೂಡಾ ಮುಗಿಸಿದೆ. ಈ ಕುರಿತು ನಟಿ ಹಾಗೂ ಶೋ ನ ಜಡ್ಜ್​ ಆಗಿರುವ ರಕ್ಷಿತಾ ಪ್ರೇಮ್ ಹಾಗೂ ನಟ ಜಗ್ಗೇಶ್​ ತಮ್ಮ ಇನ್ಟಾಗ್ರಾಂ ಪೇಜ್‌ನಲ್ಲಿ ಸೋಮವಾರ ವಿಡಿಯೋ ಹಂಚಿಕೊಂಡಿದ್ದಾರೆ.

ಈಗಾಗಲೇ ಕಿಲಾಡಿಗಳು ತಮ್ಮ ಅದ್ಭುತ ಸ್ಕಿಟ್​ಗಳ ಮೂಲಕ ಜಡ್ಜ್​ಗಳನ್ನು ಇಂಪ್ರೆಸ್​ ಮಾಡಲು ಸಕಲ ತಯಾರಿ ಮಾಡಿಕೊಂಡಿದ್ದು, ಬರುವ ಎಪಿಸೋಡ್​ಗಳಲ್ಲಿ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡಲು ಸಿದ್ಧವಾಗಿದ್ದಾರೆ. ಕಳೆದ 3 ಸೀಸನ್‌​ಗಳಿಂದ ಜನರನ್ನು ರಂಜಿಸುವ ಜತೆ ಕಲೆಯ ಕನಸು ಕಂಡ ಅದೆಷ್ಟೂ ಕಲಾವಿದರಿಗೆ ಕಾಮಿಡಿ ಕಿಲಾಡಿಗಳು ಬದುಕು ನೀಡಿದೆ.

ಕಾಮಿಡಿ ಕಿಲಾಡಿಗಳು ಶೋನಲ್ಲಿ ​​ನವರಸ ನಾಯಕ ಜಗ್ಗೇಶ್, ನಟಿ ರಕ್ಷೀತಾ ಪ್ರೇಮ್​ ಹಾಗೂ ಯೋಗರಾಜ ಭಟ್ರು ತೀರ್ಪುಗಾರರಾಗಿದ್ದಾರೆ. ಶೋನ ರೂವಾರಿಯಾಗಿ ಮಾಸ್ಟರ್​ ಆನಂದ್​ ಇದ್ದಾರೆ. ಕನ್ನಡಿಗರ ಮನೆ ಮಾತಾಗಿರುವ ಕಾಮಿಡಿ ಕಿಲಾಡಿಗಳು ಸ್ಮಾಲ್​ ಸ್ಕ್ರೀನ್​ ಕಾಮಿಡಿ ಸ್ಟಾರ್ಸ್​ ಆಗಿದ್ದಾರೆ. ಕಳೆದ ಸೀಸನ್‌ನಲ್ಲಿ ​ ರಾಜೇಶ್​ ಪೂಜಾರಿ ವಿನ್ನರ್ ಆಗಿದ್ದರು. ಈ ಸೀಸನ್‌ನಲ್ಲಿ ಯಾವ ತಂಡ ಗೆಲ್ಲಲಿದೆ ಅನ್ನೋದು ಕುತಹೂಲ ಮೂಡಿಸಿದೆ. ಕಾಮಿಡಿ ಕಿಲಾಡಿಗಳು ಚಾಂಪಿಯನ್ಸ್‌ನಲ್ಲಿ ತಂಡಗಳ ನಡುವೆ ಸ್ಪರ್ಧೆಯಿದೆ.

The post ಸೆಮಿಫೈನಲ್​ ತಲುಪಿದ ‘ಕಾಮಿಡಿ ಕಿಲಾಡಿಗಳು’.. ಯಾರಾಗ್ತಾರೆ ಫೈನಲ್​ ಚಾಂಪಿಯನ್ಸ್..? appeared first on News First Kannada.

Source: newsfirstlive.com

Source link