ಸೆಮೀಸ್​​ ರೇಸ್​​​ನಿಂದ ಔಟ್​​.. ಅಭ್ಯಾಸ ರದ್ದುಪಡಿಸಿ ರೂಮ್​​​​​ನಲ್ಲೇ ಉಳಿದ ಕೊಹ್ಲಿ ಬಾಯ್ಸ್


ಟಿ-20 ವಿಶ್ವಕಪ್​​ನಲ್ಲಿ ಗ್ರೂಪ್​​-2ರಲ್ಲಿ ಪಾಕಿಸ್ತಾನದ ಬಳಿಕ ನ್ಯೂಜಿಲೆಂಡ್​ ಸೆಮಿಫೈನಲ್​ ಪ್ರವೇಶಿಸಿದೆ. ಇಂದು ನಡೆದ ಆಫ್ಘಾನಿಸ್ತಾನದ ವಿರುದ್ಧ 8 ವಿಕೆಟ್​​ಗಳ ಜಯ ಸಾಧಿಸಿದ ಕಿವೀಸ್​, ಆಫ್ಘನ್​ ಮತ್ತು ಟೀಮ್​ ಇಂಡಿಯಾವನ್ನ ವಿಶ್ವಕಪ್​​​ನ ಸೆಮಿಫೈನಲ್​ ರೇಸ್​ನಿಂದ ಹೊರದಬ್ಬಿತ್ತು.

ವಿಶ್ವಕಪ್​​​ ಲೀಗ್​ನ ಕೊನೆ ಪಂದ್ಯದಲ್ಲಿ ಟೀಮ್​ ಇಂಡಿಯಾ, ನಮೀಬಿಯಾವನ್ನ ಎದುರಿಸಲಿದೆ. ಆದರೆ ಈ ಪಂದ್ಯದಲ್ಲಿ ಗೆದ್ದರೂ ಪ್ರಯೋಜನವಿಲ್ಲವಾಗಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಭಾರತ ತೃಪ್ತಿ ಪಡಬೇಕಾಗುತ್ತೆ. ನ್ಯೂಜಿಲೆಂಡ್​ ನಾಲ್ಕು ಪಂದ್ಯಗಳಲ್ಲಿ ಗೆದ್ದು 8 ಅಂಕ ಸಂಪಾದಿಸಿದೆ. ಭಾರತ ನಾಳೆ ಗೆದ್ದರೂ ಮೂರು ಗೆಲುವು ಸಾಧಿಸುತ್ತೆ. ಹಾಗಾಗಿ 6 ಅಂಕವಷ್ಟೇ ಗಳಿಸಲಿದೆ. ಹಾಗಾಗಿ ಸೆಮೀಸ್​​​ ರೇಸ್​ನಿಂದ ಹೊರ ಬಿದ್ದಿದೆ.

ಇನ್ನು ಸೆಮೀಸ್​​ ರೇಸ್​​ನಿಂದ ಹೊರ ಬಿದ್ದ ಮರುಕ್ಷಣವೇ ಟೀಮ್​ ಇಂಡಿಯಾ ಕ್ಯಾಂಪ್​​ನಲ್ಲಿ ಬೇಸರ ವ್ಯಕ್ತವಾಗಿದೆ. ನಾಳೆಯ ಪಂದ್ಯಕ್ಕೆ ನೆಟ್ಸ್​​ನಲ್ಲಿ ಅಭ್ಯಾಸ ನಡೆಸಿಬೇಕಿದ್ದ ಕೊಹ್ಲಿ ಪಡೆ ಅಭ್ಯಾಸವನ್ನ ರದ್ದುಗೊಳಿಸಿದೆ. ಸದ್ಯ ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಯಾವುದೇ ತಯಾರಿ ನಡೆಸದೆ ಕಣಕ್ಕಿಳಿಯಲು ಕೊಹ್ಲಿ ಸೇನೆ ನಿರ್ಧರಿಸಿದೆ. ಸೆಮೀಸ್​ ರೇಸ್​​ನಿಂದ ಔಟ್​​​ ಆದ ಬೆನ್ನಲ್ಲೇ ಈ ನಿರ್ಧಾರಕ್ಕೆ ಬಂದಿದ್ದಾರೆ.

ಟಿ-20 ವಿಶ್ವಕಪ್‌ನಲ್ಲಿ 2ನೇ ಗುಂಪಿನಿಂದ ಹೊರಬಿದ್ದ ಮೊದಲ ದೊಡ್ಡ ತಂಡ ಎಂಬ ಹೆಗ್ಗಳಿಕೆಗೆ ಟೀಮ್​​ ಇಂಡಿಯಾ ಪಾತ್ರವಾಗಿದೆ. ಮೆನ್ ಇನ್ ಬ್ಲೂ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಮೊದಲೆರಡು ಪಂದ್ಯಗಳಲ್ಲಿ ಸೋತಿತ್ತು. ಬಳಿಕ ಸತತ ಎರಡು ಪಂದ್ಯಗಳಲ್ಲಿ ಗೆದ್ದು ಸೆಮೀಸ್​ ಆಸೆ ಜೀವಂತವಾಗಿರಿಸಿಕೊಂಡಿತ್ತು. ಆದರೆ ಇದೀಗ ಅದರಿಂದಲೂ ಹೊರಬಿದ್ದಿದೆ.

ಇದನ್ನೂ ಓದಿ: ಅಂದು ಬೇರೊಂದು ದೇಶದ ಪರ ಬ್ಯಾಟ್​ ಬೀಸಿ ದಾಖಲೆ ಬರೆದಿದ್ದರು ದ್ರಾವಿಡ್​​.. ಆ ದೇಶ ಯಾವ್ದು ಗೊತ್ತಾ?

News First Live Kannada


Leave a Reply

Your email address will not be published.