ಸೆಲೆಬ್ರಿಟಿ ಫೋಟೋಗ್ರಾಫರ್​ ಜೊತೆ ಫೋಟೋ ಶೂಟ್​


ರಾಕಿಂಗ್​ ಸ್ಟಾರ್​ ಯಶ್​ ಹೊಸದಾಗಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಹೌದು, ಡಬೂ ರತ್ನಾನಿ ಬಾಲಿವುಡ್​ ಲೋಕದ ಖ್ಯಾತ ಸೆಲೆಬ್ರಿಟಿ ಪೋಟೋಗ್ರಾಫರ್​ ಜೊತೆ ನಮ್ಮ ರಾಕಿ ಭಾಯ್​ ಯಶ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಬಿಟೌನ್​ನ್ನ ಸ್ಟಾರ್​ ನಟ ನಟಿಯರ ಫೋಟೋಗ್ರಾಫರ್ ಡಬೂ ರತ್ನಾನಿ ತಾವು ಯಶ್​ ಜೊತೆ ತಾವು ಕ್ಲಿಕಿಸಿಕೊಂಡ ಫೋಟೋಗಳನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು “I’ve got your back” ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಫೋಟೋಶೂಟ್​ ಹಿಂದಿನ ಆಸಲಿ ಕಾರಣ ಎನ್ನು ಎಂಬ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಯಶ್​ ಹಾಗೂ ಡಬೂ ರತ್ನಾನಿ ಪೋಟೋಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ, ಇತ್ತೀಚೆಗೆ ಯಶ್​ ಹಲವು ಬಾರಿ ಮುಂಬೈಗೆ ಭೇಟಿ ನೀಡಿದ್ದರು. ಅದು ಇದೇ ಕಾರಣಕ್ಕಾ ಅನ್ನೋ ಮಾತುಗಳು ಈಗ ಕೇಳಿ ಬರುತ್ತಿವೆ.

News First Live Kannada


Leave a Reply

Your email address will not be published. Required fields are marked *