ಸೆಲ್ಫಿ ಹುಚ್ಚಿಗೆ ನದಿ ಮಧ್ಯದ ಬಂಡೆ ಏರಿದ್ದ ಯುವಕ ನೀರು ಪಾಲು | Youth Died in River Near Gundya of Puttur Taluk


ಸೆಲ್ಫಿ ಹುಚ್ಚಿಗೆ ನದಿ ಮಧ್ಯದ ಬಂಡೆ ಏರಿದ್ದ ಯುವಕ ನೀರು ಪಾಲು

ಸೆಲ್ಫಿ ತೆಗೆದುಕೊಳ್ಳುವಾಗ ನೀರುಪಾಲಾದ ಯುವಕ

ಮಂಗಳೂರು: ನದಿ ಮಧ್ಯದ ಬಂಡೆಯ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಯುವಕ ನೀರು ಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲದಲೂಕಿನ ಗುಂಡ್ಯ ಬಳಿ ನಡೆದಿದೆ. ರಾಜಸ್ಥಾನ ಮೂಲದ ಸೀತಾರಾಮ್ ನೀರುಪಾಲಾದವರು. ಗೂಡ್ಸ್​ ಟೆಂಪೊ ಚಾಲಕ, ಕ್ಲೀನರ್​ ನದಿ ಬಳಿ ಬಂದಿದ್ದಾಗ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಬದಿ ಟೆಂಪೊ ನಿಲ್ಲಿಸಿ ಇವರು ಬಂಡೆಯ ಮೇಲೆ ತೆರಳಿದ್ದರು.

ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಸೀತಾರಾಮ್ ನೀರುಪಾಲಾಗುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಸ್ಥಳೀಯರು ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಮೃತದೇಹ ಪತ್ತೆಯಾಗಲಿಲ್ಲ. ನಾಳೆ ಬೆಳಿಗ್ಗೆ ಮುಳುಗು ತಜ್ಞರು, ಅಗ್ನಿಶಾಮಕ ದಳದಿಂದ ಶೋಧ ಮುಂದುವರಿಯಲಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದರು.

ತಲಕಾವೇರಿಯಲ್ಲಿ ಪ್ರವಾಸಿಗರ ವಾಹನ ಅಪಘಾತ
ಮಡಿಕೇರಿ: ತಲಕಾವೇರಿಯಲ್ಲಿ ಪ್ರವಾಸಿಗರ ವಾಹನವೊಂದು ಗುರವಾರ ಅಪಘಾತಕ್ಕೀಡಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗೇಟ್‌ಗೆ ಕಾರು ಡಿಕ್ಕಿ ಹೊಡೆದ ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಯಿತು. ಘಟನೆ ವೇಳೆ ಎರಡೂ ಕಾರಿನಲ್ಲಿದ್ದ 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭಾಗಮಂಡಲ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: Salman Khan: ಸೆಲ್ಫಿ ಗೆದುಕೊಳ್ಳಲು ಬಂದ ಅಭಿಮಾನಿ ಬಗ್ಗೆ ಸಿಟ್ಟಾದ ಸಲ್ಮಾನ್​ ಖಾನ್ ಮಾಡಿದ್ದೇನು ನೋಡಿ
ಇದನ್ನೂ ಓದಿ: ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳುವಾಗ ಕ್ವಾರಿಗೆ ಬಿದ್ದು ಇಬ್ಬರ ಸಾವು

TV9 Kannada


Leave a Reply

Your email address will not be published. Required fields are marked *