ಮಂಗಳೂರು: ಸೆಲ್ಫಿ ವಿಡಿಯೋ ತೆಗೆಯುವ ಭರದಲ್ಲಿ ನೀರುಪಾಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಹೊಳೆಯಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ಸೀತಾರಾಮ್ ನೀರು ಪಾಲಾದ ಯುವಕ. ಸೆಲ್ಫಿ ವಿಡಿಯೋ ತೆಗೆಯುವ ವೇಳೆ ಬಂಡೆ ಮೇಲಿಂದ ಕಾಲು ಜಾರಿ ಯುವಕ ನದಿಗೆ ಜಾರಿ ಬಿದ್ದಿದ್ದಾನೆ. ಸೀತಾರಾಮ್ ಆಯತಪ್ಪಿ ನೀರಿಗೆ ಬಿದ್ದ ದೃಶ್ಯ ಸೆಲ್ಫಿ ವಿಡಿಯೋದಲ್ಲಿ ಸೆರೆಯಾಗಿದೆ.
ಸ್ಪೇರ್ ಪಾರ್ಟ್ಸ್ ಸಾಗಾಟ ವಾಹನದ ಚಾಲಕ ಹಾಗೂ ಕಂಡಕ್ಟರ್ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತಮ್ಮ ವಾಹನ ನಿಲ್ಲಿಸಿ ಗುಂಡ್ಯ ಹೊಳೆಗೆ ಇಳಿದಿದ್ದಾರೆ. ಈ ವೇಳೆ ದುರ್ಘಟನೆ ಸಂಭವಿಸಿದೆ. ಸದ್ಯ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಥಳೀಯ ಯುವಕ ನೆರವು ಪಡೆದು ಹೊಳೆಯಲ್ಲಿ ಕೊಚ್ಚಿ ಹೋದ ಯುವಕನಿಗಾಗಿ ಹುಡುಕಾಟ ನಡೆಸಲಾಗಿದೆ.