ನೂತನ ನಾಯಕ ಕೆ.ಎಲ್.ರಾಹುಲ್ಗೆ ದೊಡ್ಡ ಸವಾಲು ಎದುರಾಗಲಿದೆ. ಆ ಸವಾಲನ್ನ ಗೆದ್ರೆ ಮಾತ್ರ ರಾಹುಲ್, ಟೀಮ್ ಇಂಡಿಯಾದ ಬಿಗ್ಬಾಸ್ಗಳ ಮನ ಗೆಲ್ಲಲು ಸಾಧ್ಯ. ಅಷ್ಟಕ್ಕೂ ರಾಹುಲ್ಗೆ ಎದುರಾಗಲಿರೋ ಸವಾಲುಗಳೇನು..? ಆ ಸವಾಲನ್ನ ಗೆಲ್ಲಲು ಕನ್ನಡಿಗ ಏನೆಲ್ಲಾ ಮಾಡ್ಬೇಕು..? ಅನ್ನೋದ್ರ ವಿವರ ಇಲ್ಲಿದೆ.
ದಕ್ಷಿಣ ಆಫ್ರಿಕಾ ಏಕದಿನ ಸರಣಿ, ಕೆ.ಎಲ್.ರಾಹುಲ್ ಪಾಲಿಗೆ, ಅತ್ಯಂತ ಮಹತ್ವದ ಸರಣಿ. ನಾಯಕನಾಗಿ ಇದೇ ಮೊದಲ ಬಾರಿ ಏಕದಿನ ತಂಡವನ್ನ ಮುನ್ನಡೆಸಲಿರುವ ರಾಹುಲ್ ಮೇಲೆ, ಭಾರಿ ನಿರೀಕ್ಷೆ ಇದೆ. ಹೌದು. ಕೊಹ್ಲಿ ಅನುಪಸ್ಥಿತಿಯಲ್ಲಿ ಜೊಹಾನ್ಸ್ಬರ್ಗ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನ ಮುನ್ನಡೆಸಿದ ರಾಹುಲ್, ನಾಯಕನಾಗಿ ಮೊದಲ ಪ್ರಯತ್ನದಲ್ಲೇ ಸೋಲು ಕಂಡರು. ಆದ್ರೀಗ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ತಂಡದ ಸಾರಥ್ಯವಹಿಸಿರುವ ರಾಹುಲ್, ಆಫ್ರಿಕನ್ನರ ಬೇಟೆಗೆ ಸಜ್ಜಾಗಬೇಕಿದೆ.
ನಾಯಕರಾಗಿ ಕೆ.ಎಲ್.ರಾಹುಲ್ಗೆ ಅಗ್ನಿ ಪರೀಕ್ಷೆ
ಟೆಸ್ಟ್ ಸರಣಿಯನ್ನ ಸೋತಿರುವ ಟೀಮ್ ಇಂಡಿಯಾ, ಏಕದಿನ ಸರಣಿಯನ್ನ ಗೆಲ್ಲಲು ಪಣತೊಟ್ಟಿದೆ. ಸೇಡಿನ ಸಮರ ಅಂತಾನೇ ಕರೆಸಿಕೊಂಡಿರುವ ಏಕದಿನ ಸರಣಿಯಲ್ಲಿ, ನೂತನ ನಾಯಕ ಕೆ.ಎಲ್.ರಾಹುಲ್ಗೆ ಅಗ್ನಿ ಪರೀಕ್ಷೆ ಎದುರಾಗಲಿದೆ. ಅದ್ರಲ್ಲೂ ನಾಯಕತ್ವದ ಪರೀಕ್ಷೆಯಲ್ಲಿ, ರಾಹುಲ್ ಪಾಸಾಗಲೇಬೇಕು.
ಒತ್ತಡದಿಂದ ಹೊರಬರಲು ಪ್ಲಾನ್ ಮಾಡಿಕೊಳ್ಳಬೇಕು
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ, ಹೈವೋಲ್ಟೇಜ್ನಿಂದ ಕೂಡಿರುತ್ತದೆ. ಹೀಗಿರುವಾಗ ನೂತನ ಸಾರಥಿ ಕೆ.ಎಲ್.ರಾಹುಲ್ ಮೇಲೆ, ಒತ್ತಡ ಸಹಜ. ನಾಯಕನಾಗಿ ಹಾಗೇ ಬ್ಯಾಟ್ಸ್ಮನ್ ಆಗಿ ರಾಹುಲ್, ಆ ಒತ್ತಡವನ್ನ ಸಮರ್ಥವಾಗಿ ಎದುರಸಬೇಕಿದೆ. ಒಂದು ವೇಳೆ ರಾಹುಲ್ ಒತ್ತಡಕ್ಕೆ ಸಿಲುಕಿದ್ರೆ, ಸರಣಿ ಸೋಲು ಖಚಿತ.
ಪ್ಲೇಯಿಂಗ್ ಇಲೆವೆನ್ ಆಯ್ಕೆ ಬಿಗ್ ಚಾಲೆಂಜ್
ಕನ್ನಡಿಗ ಕೆ.ಎಲ್.ರಾಹುಲ್ ಮುಂದಿರೋ ಮತ್ತೊಂದು ಸವಾಲು, ಪ್ಲೇಯಿಂಗ್ ಇಲೆವೆನ್ ಆಯ್ಕೆ. ಪದೇ ಪದೇ ಎದುರಾಗೋ ಈ ಗೊಂದಲವನ್ನ, ರಾಹುಲ್ ಹೇಗೆ ಸಾಲ್ವ್ ಮಾಡ್ತಾರೆ? ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಹೇಗೆ ಪಿಕ್ ಮಾಡ್ತಾರೆ ಅನ್ನೋ ಕುತೂಹಲ, ಸಹಜವಾಗೇ ಎಲ್ಲರನ್ನೂ ಕಾಡಲಿದೆ.
ಸರಣಿ ಗೆಲ್ಲಲು ತಂತ್ರ-ಪ್ರತಿತಂತ್ರಗಳನ್ನ ರೂಪಿಸಬೇಕು
ಕೇವಲ ನಾಯಕನಾಗಿ ತಂಡವನ್ನ ಮುನ್ನಡೆಸೋದಲ್ಲ. ಕ್ಯಾಪ್ಟನ್ ಆಗಿ ರಾಹುಲ್, ಉತ್ತಮ ಗೇಮ್ಪ್ಲಾನ್, ಸ್ಟ್ರಾಟಜಿ, ಟ್ಯಾಕ್ಟಿಕ್ಸ್ ಮಾಡಬೇಕು. ಎದುರಾಳಿಗಳು ರೂಪಿಸೋ ತಂತ್ರಗಳಿಗೆ, ಪ್ರತಿತಂತ್ರಗಳನ್ನ ರೂಪಿಸಿ ಅವರ ಪ್ಲಾನ್ ಉಲ್ಟಾ ಮಾಡಬೇಕು. ಈ ಟಫ್ ಟಾಸ್ಕ್ ಅನ್ನ ರಾಹುಲ್, ನಿಭಾಯಿಸಬೇಕಿದೆ.
ಕೋಚ್, ಆಯ್ಕೆ ಸಮಿತಿಯ ವಿಶ್ವಾಸ ಉಳಿಸಿಕೊಳ್ಳಬೇಕು
ಲೀಡರ್ಶಿಪ್ ರೋಲ್ನಲ್ಲಿ ಕೆ.ಎಲ್.ರಾಹುಲ್ ಇರೋದ್ರಿಂದ, ಸಹಜವಾಗೇ ಇವರ ಮೇಲೆ Expectations ಜಾಸ್ತಿ ಇರುತ್ತೆ..! ಜೊತೆಗೆ ಟೀಮ್ ಇಂಡಿಯಾ ಕೋಚ್ ಮತ್ತು ಸೆಲೆಕ್ಟರ್ಸ್ಗೆ ರಾಹುಲ್ ನಾಯಕತ್ವದ ಮೇಲೆ ಹೆಚ್ಚು ನಂಬಿಕೆ ಇರೋದ್ರಿಂದ, ರಾಹುಲ್ ಆ ನಂಬಿಕೆಯನ್ನ ಉಳಿಸಿಕೊಳ್ಳಬೇಕಿದೆ.