ತುಮಕೂರು: ಕಳೆದ ಬಾರಿ ತುಮಕೂರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣ ಎನ್ನಲಾದ ಸಿದ್ದರಾಮಯ್ಯ ಆಪ್ತ, ಮಾಜಿ ಶಾಸಕ ಕೆ.ಎನ್. ರಾಜಣ್ಣರನ್ನು ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಹಣಿಯಲು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಅವರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ.
ಕಳೆದ ಲೋಕಸಭಾ ಎಲೆಕ್ಷನ್ನಲ್ಲಿ ದೇವೆಗೌಡರ ಸೋಲಿಗೆ ಪ್ರಮುಖ ಪಾತ್ರ ವಹಿಸಿದ್ದ ಕೆ.ಎನ್.ರಾಜಣ್ಣ ಇದೀಗ ತಮ್ಮ ಪುತ್ರ ಆರ್.ರಾಜೇಂದ್ರರನ್ನು ಪರಿಷತ್ ಎಂಟ್ರಿಗೆ ತಯಾರು ಮಾಡುತ್ತಿದ್ದಾರೆ. ಅವರ ಈ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ದಳ ಪಾಳಯದಲ್ಲಿ ತಂತ್ರಗಳನ್ನು ರೆಡಿ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಾರಿ ಮುಳ್ಳನ್ನ ಮುಳ್ಳಿಂದಲೇ ತೆಗೆಯಬೇಕು ಎಂಬ ಜಿದ್ದಿಗೆ ಬಿದ್ದಿರುವ ದೊಡ್ಡಗೌಡರು ಪ್ರತಿಸ್ಪರ್ಧಿಯಾಗಿ ವಾಲ್ಮೀಕಿ ಜನಾಂಗದ ಕೆಎಎಸ್ ಅಧಿಕಾರಿ ಅನಿಲ್ಕುಮಾರ್ ಅವರನ್ನು ತುಮಕೂರಿನಿಂದ ಪರಿಷತ್ಗೆ ನಿಲ್ಲಿಸುತ್ತಿದ್ದಾರೆ.
ಇನ್ನು ಅನಿಲ್ ಕುಮಾರ್ ಕಣಕ್ಕಿಳಿದರೆ ನಾಯಕ ಸಮುದಾಯ ಸೇರಿದಂತೆ ಅಹಿಂದ ಮತಗಳ ವಿಭಜನೆಯಾಗುತ್ತೆ. ಆ ಮೂಲಕ ಒಕ್ಕಲಿಗ ಮತಗಳ ಕ್ರೂಢೀಕರಣದೊಂದಿಗೆ ಅನಿಲ್ ಕುಮಾರ್ ಗೆಲುವಿನ ನಗೆ ಬೀರುತ್ತಾರೆ ಎಂಬ ವಿಶ್ವಾಸ ದಳಪತಿಗಳಲ್ಲಿದೆ.
The post ಸೇಡು ತೀರಿಸಿಕೊಳ್ಳಲು ದಳಪತಿಗಳು ರೆಡಿ; ಬದ್ಧ ವೈರಿ ಹಣಿಯಲು ಮಾಸ್ಟರ್ ಪ್ಲಾನ್ appeared first on News First Kannada.