ಸೇತುವೆಯಿಲ್ಲದೆ ಹೊಳೆಯಲ್ಲೇ ಗರ್ಭಿಣಿಯರು, ರೋಗಿಗಳನ್ನ ಹೊತ್ತು ತೆರಳಬೇಕಾದ ಪರಿಸ್ಥಿತಿ: ಹೊಸಾಕುಳಿ ಗ್ರಾಮಕ್ಕೆ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ | Minister Shivaram Hebbar visited to hosakuli village of Uttara kannada and promised to build the bridge


ಸೇತುವೆಯಿಲ್ಲದೆ ಹೊಳೆಯಲ್ಲೇ ಗರ್ಭಿಣಿಯರು, ರೋಗಿಗಳನ್ನ ಹೊತ್ತು ತೆರಳಬೇಕಾದ ಪರಿಸ್ಥಿತಿ: ಹೊಸಾಕುಳಿ ಗ್ರಾಮಕ್ಕೆ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ

ಆಸ್ಪತ್ರೆಗೆ ಸಾಗಿಸಲು ಹೊಳೆಯ ನೀರಿನಲ್ಲಿ ಹೊತ್ತುಕೊಂಡೇ ಸಾಗಬೇಕಾಗಿದೆ

ಉತ್ತರಕನ್ನಡ: ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಜನರು ಸೇತುವೆಯಿಲ್ಲದೆ ಪರದಾಡುತ್ತಿದ್ದಾರೆ. ಪ್ರತಿನಿತ್ಯ ಹರಸಾಹಸಪಟ್ಟು ಹೊಳೆಯಲ್ಲಿ ನಡೆದು ಹೋಗುವ ಪರಿಸ್ಥಿತಿ ಇದೆ. ಗರ್ಭಿಣಿಯರು, ರೋಗಿಗಳನ್ನ ಹೊಳೆಯಲ್ಲಿ ಹೊತ್ತುಕೊಂಡು ಹೋಗಬೇಕು. ಸ್ವಲ್ಪ ಮೈ ಮರೆತರು ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಹೊಸಾಕುಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಶಿವರಾಮ ಹೆಬ್ಬಾರ್​ಗೆ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಸೇತುವೆಯಿಲ್ಲದೆ ಹೊಳೆಯಲ್ಲೇ ನಡೆದು ಹೋಗುವ ಪರಿಸ್ಥಿತಿ ಹೊಸಾಕುಳಿ ಗ್ರಾಮಸ್ಥರಿಗಿದೆ. ಹೀಗಾಗಿ ಶಾಲಾ ಬಾಲಕಿಯೊಬ್ಬಳು ಸೇತುವೆ ನಿರ್ಮಿಸಿಕೊಡುವಂತೆ ಹೆಬ್ಬಾರ್​ಗೆ ಮನವಿ ಮಾಡಿದ್ದಳು. ಪುಟ್ಟ ಬಾಲಕಿ ಕೈಮುಗಿದು ವಿಡಿಯೋ ಮೂಲಕ ಮನವಿ ಮಾಡಿದ್ದಳು. ಖಾಸಗಿ ಕಾರ್ಯಕ್ರಮದ ನಿಮಿತ್ತ ಹೊನ್ನಾವರಕ್ಕೆ ಆಗಮಿಸಿದ್ದ ಸಚಿವ ಹೆಬ್ಬಾರ್ ಹೊಸಾಕುಳಿ ಗ್ರಾಮಕ್ಕೆ ಭೇಟಿ ನೀಡಿ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.

ಶೀಘ್ರದಲ್ಲೇ ಸೇತುವೆ ನಿರ್ಮಿಸಿಕೊಡುವುದಾಗಿ ಶಿವರಾಮ ಹೆಬ್ಬಾರ್ ಭರವಸೆ ನೀಡಿದ್ದಾರೆ. ಸ್ಥಳೀಯ ಶಾಸಕ ದಿನಕರ್ ಶೆಟ್ಟಿ ಡಿಸೆಂಬರ್ 4 ರಂದು ಗ್ರಾಮಕ್ಕೆ ಭೇಟಿ ನೀಡಿದ್ದರು. ಶಾಸಕರೂ ಕೂಡಾ ತಮ್ಮ ಬಳಿಯಿರುವ ಅನುದಾನದಲ್ಲಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. 2 ಕೋಟಿ ವೆಚ್ಚದಲ್ಲಿ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುತ್ತೇವೆ ಎಂದಿದ್ದರು.

ಶಾಸಕರು ಮುಂದಿನ ಮೇ ಅಂತ್ಯದೊಳಗೆ ಸೇತುವೆ ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವರೂ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರಲ್ಲಿ ಮಂದಹಾಸ ಮೂಡಿದೆ.

TV9 Kannada


Leave a Reply

Your email address will not be published. Required fields are marked *