ನವದೆಹಲಿ: ದಕ್ಷಿಣ ಅರುಣಾಚಲ ಪ್ರದೇಶದಲ್ಲಿ ಮೂವರು NSCN-KYA (National Socialist Council of Nagalim) ಉಗ್ರರನ್ನ ಸೇನೆ ಹೊಡೆದುರುಳಿಸಿದೆ. ಅಸ್ಸಾಂ ರೈಫಲ್ಸ್ನ 6ನೇ ಸೇನಾ ತುಕಡಿ ಮೂವರು ಉಗ್ರರನ್ನ ಹೊಡೆದು ಹಾಕಿದ್ದು, ಕಾರ್ಯಚರಣೆ ಕಂಟಿನ್ಯೂ ಆಗಿದೆ.
ಮೊನ್ನೆ ಮಣಿಪುರದಲ್ಲಿ ಸೇನಾ ಕಮಾಂಡರ್, ಅವರ ಪತ್ನಿ, ಮಗ ಸೇರಿ ನಾಲ್ವರು ಯೋಧರನ್ನ ಉಗ್ರರು ಸಾಯಿಸಿದ್ದರು. ಇದರ ಪ್ರತೀಕಾರವಾಗಿ 46 ಅಸ್ಸಾಂ ರೈಫಲ್ಸ್ ಹಲವು ಕಡೆ ದಾಳಿಯನ್ನ ಆಪರೇಷನ್ ಶುರುಮಾಡಿದೆ.
ನವೆಂಬರ್ 13 ರಂದು ಮಣಿಪುರದ ಚುರಾಚಂದಪುರ ಜಿಲ್ಲೆಯ ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಸಿಂಘಾತ್ನಲ್ಲಿ ಉಗ್ರರು ದಾಳಿ ಮಾಡಿದ್ದರು. ಇಂಫಾಲ್‌ನಿಂದ 100 ಕಿ.ಮೀ ದೂರದಲ್ಲಿರುವ ದಾಳಿಯ ಸ್ಥಳ ಅತ್ಯಂತ ದುರ್ಗಮ ಪ್ರದೇಶವಾಗಿದೆ. ಕರ್ನಲ್ ವಿಪ್ಲವ್ ತ್ರಿಪಾಠಿ ಅಸ್ಸಾಂ ರೈಫಲ್ಸ್ನ ಕಮಾಂಡಿಂಗ್ ಆಫೀಸರ್ ಆಗಿದ್ದು, ಪತ್ನಿ, ಮಗ ಹಾಗೂ ಬೆಂಗಾವಲು ಪಡೆಯೊಂದಿಗೆ ಸೇನಾ ಶಿಬಿರದಿಂದ ವಾಪಸ್ಸಾಗುತ್ತಿದ್ದಾಗ ದಾಳಿ ನಡೆದಿತ್ತು. ರಸ್ತೆಯಲ್ಲಿ ಐಇಡಿ ಸ್ಫೋಟಿಸಿ, ಗುಂಡಿನ ಮಳೆಗರೆದ ಪರಿಣಾಮ ಸೇನಾಧಿಕಾರಿ, ಪತ್ನಿ, ಮಗ ಸೇರಿ 4 ಯೋಧರು ಹುತಾತ್ಮರಾಗಿದ್ದರು.
ಇದನ್ನೂ ಓದಿ: ಸೇನಾಧಿಕಾರಿ, ಪತ್ನಿ, ಮಗು ಸೇರಿ 4 ಯೋಧರು ಹುತಾತ್ಮ; ರಕ್ಕಸ ದಾಳಿಯ ಹೊಣೆ ಹೊತ್ತ PLA, MNPF