ನವದೆಹಲಿ: ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡು ದೊಡ್ಡ ದುರಂತ ಸಂಭವಿಸಿದೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.
ಈ ನಡುವೆ ತಮಿಳುನಾಡಿನ ಅರಣ್ಯ ಸಚಿವ ರಾಮಚಂದನ್ ಘಟನೆ ಬಗ್ಗೆ ಮಾಹಿತಿ ನೀಡಿ.. ಹೆಲಿಕಾಪ್ಟರ್ನಲ್ಲಿ 14 ಜನ ಇದ್ದರು ಅನ್ನೋ ಮಾಹಿತಿ ಇದೆ. ಅದು ಕಾಡಿನೊಳಗೆ ಬಂದು ಪತನಗೊಂಡಿದೆ. ಒಂದು ವೇಳೆ ಇನ್ನೂ 20 ಅಡಿ ಎತ್ತರದಿಂದ ಬಿದ್ದಿದ್ರೆ ಪಕ್ಕದಲ್ಲೇ ಒಂದು ನಂದಪ್ಪಚಿತ್ರಂ ಅನ್ನೋ ಹಳ್ಳಿ ಇತ್ತು.
ಒಂದು ವೇಳೆ ಈ ಹಳ್ಳಿಯಲ್ಲಿ ಕಾಪ್ಟರ್ ಪತನಗೊಂಡಿದ್ದರೆ ನಂದಪ್ಪಚಿತ್ರಂ ಅನ್ನೋ ಹಳ್ಳಿಯ ಜನರೂ ಕೂಡ ಸಾವನ್ನಪ್ಪುವ ಸಾಧ್ಯತೆ ಇತ್ತು. ದುರ್ಘಟನೆಯಲ್ಲಿ ಉಸಿರಾಡುತ್ತಿದ್ದ ಇಬ್ಬರನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅವರ ಸ್ಥಿತಿಯೂ ತುಂಬಾನೇ ಗಂಭೀರವಾಗಿದೆ. 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರು ಜನ ಆಸ್ಪತ್ರೆಯಲ್ಲಿ ಡೆತ್ ಆಗಿದ್ದಾರೆ. 7 ಜನರ ಬಾಡಿ ಇಲ್ಲಿ ಸಿಕ್ಕಿದೆ ಎಂದಿದ್ದಾರೆ.