ಸೇನಾ ಹೆಲಿಕಾಪ್ಟರ್​​ ಕ್ಲಾಶ್​​; ಸಂಪುಟ ಸಭೆಗೆ ಮುನ್ನ ಸಂಪೂರ್ಣ ಮಾಹಿತಿ ಪಡೆದ ಮೋದಿ


ಭಾರತೀಯ ವಾಯು ಸೇನೆ Mi-17V5 ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಅಪಘಾತಕ್ಕೀಡಾಗಿದೆ. ಇಂದು ಸಂಭವಿಸಿದ ಹೆಲಿಕಾಪ್ಟರ್​​ ದುರ್ಘಟನೆಯಲ್ಲಿ ಬರೋಬ್ಬರಿ 4 ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಸಂಬಂಧ ಈಗಾಗಲೇ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​ ಅವರಿಂದ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.

ಸೇನಾ ಹೆಲಿಕಾಪ್ಟರ್​​ ಕ್ಲಾಶ್ ಬಗ್ಗೆ ಸಂಪುಟ ಸಭೆಗೂ ಮುನ್ನವೇ ಮೋದಿ ಕಂಪ್ಲೀಟ್​​ ಮಾಹಿತಿ ಪಡೆದುಕೊಂಡಿದ್ದಾರೆ. ದುರಂತ ಹೇಗಾಯ್ತು? ಏನಾಗುತ್ತಿದೆ? ಎಂದು ಇಂಚಿಂಚೂ ಮಾಹಿತಿ ಮೋದಿಗೆ ರಾಜನಾಥ್​​ ಸಿಂಗ್​​ ನೀಡುತ್ತಿದ್ದಾರೆ. ಅಲ್ಲದೇ ಈ ಸಂಬಂಧ ಈಗ ಸಂಪುಟ ಸಭೆ ನಡೆಯುತ್ತಿದ್ದು, ರಾಜನಾಥ್​ ಸಿಂಗ್​ ಅವರು ಮಧ್ಯೆಯೇ ಎದ್ದು ಹೊರಟು ಎನ್ನಲಾಗಿದೆ.

News First Live Kannada


Leave a Reply

Your email address will not be published. Required fields are marked *