ಸೇನಾ ಹೆಲಿಕಾಪ್ಟರ್ Mi-17V5 ಪತನ; ತನಿಖೆಗೆ ಆದೇಶಿಸಿದ ವಾಯುಸೇನೆ


ನವದೆಹಲಿ: CDS ಮುಖ್ಯಸ್ಥ ಬಿಪಿನ್ ರಾವತ್ ಇದ್ದ Mi-17V5 ಹೆಲಿಕಾಪ್ಟರ್​ ಪತನಕ್ಕೆ ಸಂಬಂಧಿಸಿದಂತೆ ಇಂಡಿಯನ್ ಏರ್​​ಫೋರ್ಸ್​ ತನಿಖೆಗೆ ಆದೇಶ ನೀಡಿದೆ.

ತಮಿಳುನಾಡಿನ ಕೂಣೂರಿನಲ್ಲಿ ಬಿಪಿನ್ ರಾವತ್ ಸೇರಿ ಒಟ್ಟು 9 ಮಂದಿಯಿದ್ದ ಹೆಲಿಕಾಪ್ಟರ್ ಪತನಗೊಂಡಿದೆ. ಮೂವರನ್ನ ರಕ್ಷಣೆ ಮಾಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ವೆಲ್ಲಿಂಗ್ಟನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಇಂಡಿಯನ್ ಏರ್​ಫೋರ್ಸ್​.. ಬಿಪಿನ್ ರಾವತ್ ಇದ್ದ ಐಎಎಫ್​ Mi-17V5 ಹೆಲಿಕಾಪ್ಟರ್ ಪತನಗೊಂಡಿದೆ. ಸಂಬಂಧ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದೆ.

ವಾಯು ಸೇನೆಯ ಅಧಿಕೃತ ಮಾಹಿತಿಯಂತೆ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದು, ಮೂವರಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಕ್ಷಣೆ ಮಾಡಿರೋ ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದು, ಸಿಡಿಎಸ್​ ಬಿಪಿಕ್​ ರಾವತ್​ ಅವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

News First Live Kannada


Leave a Reply

Your email address will not be published. Required fields are marked *