ನವದೆಹಲಿ: ಇಂದು ಒರಿಸ್ಸಾದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ), ಕಡಿಮೆ ತೂಕದ ಕ್ಷಿಪಣಿ ಪ್ರಯೋಗವನ್ನು ಮ್ಯಾನ್ ಪೋರ್ಟಬಲ್ ಆಂಟಿಟ್ಯಾಂಕ್ ಗೈಡೆಡ್ ಮಿಸೈಲ್ (ಎಂಪಿಎಟಿಜಿಎಂ) ಮುಖೇನ ನಡೆಸಿದ್ದು ಪರೀಕ್ಷೆ ಯಶಸ್ವಿಯಾಗಿದೆ.

ಇದು ಎಂಪಿಎಟಿಜಿಎಂನ ಯಶಸ್ವಿ ಪರೀಕ್ಷೆಯ ನಾಲ್ಕನೇ ಸರಣಿಯಾಗಿದೆ. ಕ್ಷಿಪಣಿಯನ್ನು ಸುಧಾರಿತ ಏವಿಯಾನಿಕ್ಸ್ ಜೊತೆಗೆ ಅತ್ಯಾಧುನಿಕ ಇನ್ಫ್ರಾರೆಡ್ ಇಮೇಜಿಂಗ್ ಸೀಕರ್​ನೊಂದಿಗೆ ಸಂಯೋಜನೆ ಮಾಡಲಾಗಿದೆ. ಕ್ಷಿಪಣಿಯು ಉದ್ದೇಶಿತ ಗುರಿಯನ್ನು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ಮಾಡಿದ ಈ ಸಾಧನೆಯೂ ಆತ್ಮನಿರ್ಭರ ಭಾರತ ಮತ್ತು ಭಾರತೀಯ ಸೇನೆಗೆ ಶಕ್ತಿ ತುಂಬಿದೆ. ಸೋಷಿಯಲ್​ ಮೀಡಿಯಾದಲ್ಲಿ ಕಡಿಮೆ ತೂಕದ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ ಡಿಆರ್​ಡಿಒ ಪರೀಕ್ಷೆ ಯಶಸ್ವಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

The post ಸೇನೆಗೆ ಮತ್ತಷ್ಟು ಶಕ್ತಿ; DRDOದ ಆ್ಯಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ ಯಶಸ್ವಿ ಪರೀಕ್ಷೆ appeared first on News First Kannada.

Source: newsfirstlive.com

Source link