ಇಂದು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಕೇಂದ್ರ ಸರ್ಕಾರವೂ ಆಜಾದಿ ಕಾ ಅಮೃತ್ ಮಹೋತ್ಸವ್ ಅಭಿಯಾನದ ಭಾಗವಾಗಿ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರ ರಕ್ಷಾ ಸಮರ್ಪಣ ಪರ್ವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಮೋದಿ, ಭಾರತದಲ್ಲೇ ತಯಾರಾದ ಯುದ್ಧ ಹೆಲಿಕಾಪ್ಟರ್, ಡ್ರೋಣ್ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ ಯುದ್ಧೋಪಕರಣಗಳನ್ನು ಸಶಸ್ತ್ರಪಡೆಗಳಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ನ್ಯಾಷನಲ್ ಕೆಡೆಟ್ ಕಾರ್ಪ್ಸ್ನ (ಎನ್ಸಿಸಿ) ಹಳೆ ವಿದ್ಯಾರ್ಥಿಗಳ ಸಂಘಕ್ಕೂ ತಮ್ಮನ್ನೇ ಹೆಸರನ್ನೇ ನೋಂದಾಯಿಸುವ ಮುಖೇನ ಮೋದಿ ಚಾಲನೆ ನೀಡಿದರು.
ಇದು ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅಭಿವೃದ್ಧಿಪಡಿಸಿರುವ ಯುದ್ಧ ಹೆಲಿಕಾಪ್ಟರ್. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಸಹಯೋಗದೊಂದಿಗೆ ಈ ಅತ್ಯಾಧುನಿಕ ಹೆಲಿಕ್ಯಾಪ್ಟರ್ ತಯಾರಿಸಲಾಗಿದೆ.
ಭಾರತೀಯ ಸಶಸ್ತ್ರಪಡೆಗಳಲ್ಲಿ ಸ್ವದೇಶಿ ನಿರ್ಮಿತ ಯುದ್ಧೋಪಕರಣಗಳ ಬಳಕೆಗೆ ನಾವು ಒತ್ತು ನೀಡುತ್ತಿದ್ದೇವೆ. ಆತ್ಮನಿರ್ಭರ್ ಭಾರತ್ ಆಶಯಕ್ಕೆ ಈ ಕ್ರಮಗಳಿಂದ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ ಎಂದರು ಮೋದಿ.
The post ಸೇನೆಗೆ ಸ್ವದೇಶಿ ಶಸ್ತ್ರ ಕೊಟ್ಟ ಮೋದಿ: ಬೆಂಗಳೂರಿನ ಅಟ್ಯಾಕ್ ಹೆಲಿಕ್ಯಾಪ್ಟರ್ ವಿಶೇಷತೆ ಏನು ಗೊತ್ತಾ? appeared first on News First Kannada.