ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್​ಡೌನ್ ವಿಧಿಸಿದೆ. ಹೀಗಾಗಿ ಎಲ್ಲಿಯೂ ಅನಗತ್ಯವಾಗಿ ಓಡಾಡುವ ಹಾಗಿಲ್ಲ. ಬೈಕ್​, ಕಾರು ತೆಗೆದುಕೊಂಡು ಸುತ್ತಾಡೋದನ್ನ ಕಂಡ್ರೆ ಪೊಲೀಸರಿಂದ ದಂಡ ಬೀಳೋದು ಪಕ್ಕಾ!

ಅದಕ್ಕೆ ಕೆಲವು ಕಿಲಾಡಿಗಳು ವಿಚಿತ್ರ ವಿಚಿತ್ರ ಐಡಿಯಾಗಳ ಮೊರೆ ಹೋಗ್ತಿದ್ದಾರೆ. ಬೈಕು, ಕಾರು ತೆಗೆದುಕೊಂಡು ಹೊರಟ್ರೆ ಪೊಲೀಸರು ಗಾಡಿ ಸೀಜ್ ಮಾಡ್ತಾರೆ, ಜೊತೆಗೆ ದಂಡ ಕಟ್ಬೇಕು ಅಂತಾ ಸೈಕಲ್ ಏರೋರ ಸಂಖ್ಯೆ ಬೆಂಗಳೂರಲ್ಲಿ ಹೆಚ್ಚಾಗಿದೆ.

ಅದರಂತೆ ಇಂದು ಖತರ್ನಾಕ್ ಕಿಲಾಡಿಯೊಬ್ಬ ಸೈಕಲ್​ ಏರಿ ಅನಗತ್ಯವಾಗಿ ಅಡ್ಡಾಡ್ತಿದ್ದ. ಇದನ್ನ ಗಮನಿಸಿದ ಪೊಲೀಸರು ಸರಿಯಾಗಿ ಕ್ಲಾಸ್​ ತೆಗೆದುಕೊಂಡು 250 ರೂಪಾಯಿ ದಂಡ ವಿಧಿಸಿ ಮನೆಗೆ ಕಳುಹಿಸಿದ್ದಾರೆ. ಅಲ್ಲದೇ ಇನ್ಮುಂದೆ ಅನಗತ್ಯವಾಗಿ ಓಡಾಟ ಮಾಡಬಾರದು ಎಂದು ಎಚ್ಚರಿಕೆಯನ್ನ ನೀಡಿ ಕಳುಹಿಸಿದ್ದಾರೆ.

The post ಸೈಕಲ್ ಏರಿ ಬಂದ್ರೆ ಕೇಳಲ್ಲ ಅನ್ಕೊಂಡಿದ್ದ ಕಿಲಾಡಿಗೆ ಶಾಕ್.. ಪೊಲೀಸ್ರಿಂದ ಬಿತ್ತು ಬಿಗ್​ ಫೈನ್ appeared first on News First Kannada.

Source: newsfirstlive.com

Source link