ಪಾಟ್ನಾ: ಬಿಹಾರದ ಸೈಕಲ್ ಗರ್ಲ್ ಎಂದೇ ಖ್ಯಾತಿಯಾಗಿರುವ ಜ್ಯೋತಿ ಕುಮಾರ್ ಅವರ ತಂದೆ ನಿಧನರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನೆರವಿನ ಹಸ್ತ ಚಾಚಿದ್ದಾರೆ.

ಜ್ಯೋತಿ ಕುಮಾರ್ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಪ್ರಿಯಾಂಕಾ ಆಕೆಗೆ ಸಮಾಧಾನ ಮಾಡಿದ್ದಾರೆ. ಜೊತೆಗೆ ಆಕೆಯ ವಿಧ್ಯಾಭ್ಯಾಸ ಮತ್ತು ಜೀವನಕ್ಕೆ ನೆರವು ನೀಡುವುದಾಗಿ ಹೇಳಿದ್ದಾರೆ.

ಮೇ 18 2020 ರಂದು ಜ್ಯೋತಿ ಕುಮಾರಿ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು, ತನ್ನ ಅನಾರೋಗ್ಯದ ತಂದೆಯನ್ನು ಹರಿಯಾಣದ ಗುರುಗ್ರಾಮ್‍ನಿಂದ ಬಿಹಾರದ ದಭರ್ಂಗಾಗೆ 1,200 ಕಿ.ಮೀ ಸೈಕಲ್‍ನಲ್ಲಿ ಮನೆಗೆ ಕರೆದೊಯ್ದರು. ಆದರೆ ಕೆಲವು ದಿನಗಳ ನಂತರ ಆಕೆಯ ತಂದೆ ಹೃದಯಾಘಾತದಿಂದ ಸಾವನ್ನಪಿದ್ದರು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ. ಜ್ಯೋತಿಕಾ ತಂದೆಯನ್ನು ಉಳಿಸಿಕೊಳ್ಳಲು ಮಾಡಿರು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಸೈಕಲಿನಲ್ಲೇ ಮಗಳೊಂದಿಗೆ ಕ್ರಮಿಸಿ ಸುದ್ದಿಯಾಗಿದ್ದ ವ್ಯಕ್ತಿ ಸಾವು

ತಂದೆಯನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ತಂದೆಯನ್ನು ಸೈಕಲ್ ನಲ್ಲಿ ಕರೆದುಕೊಂಡು ಹೋಗಿದ್ದ ವಿಷಯವನ್ನು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಹೊಗಳಿದ್ದರು. ನೆಟ್ಟಿಗರು ಜ್ಯೋತಿಕಾ ಕಾರ್ಯವನ್ನು ಮೆಚ್ಚಿದ್ದರು. ಇದನ್ನೂ ಓದಿ : ಅನ್‍ಲಾಕ್ ಸುಳಿವು ನೀಡಿದ್ರು ಸಿಎಂ ಯಡಿಯೂರಪ್ಪ

ಆದರೆ ತಂದೆ ಮೋಹನ್ ಪಾಸ್ವಾನ್ ನಿಧನದ ನಂತರ ಜ್ಯೋತಿಕುಮಾರಿ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ, ಅವರೊಬ್ಬರೇ ಮನೆಯಲ್ಲಿ ದುಡಿಯುತ್ತಿದ್ದು, ಕುಟುಂಬದ ಅಗತ್ಯತೆಗಳನ್ನು ಪೂರೈಸುತ್ತಿದ್ದರು. ಹೀಗಾಗಿ ಆಕೆಗೆ ಕರೆ ಮಾಡಿರುವ ಪ್ರಿಯಾಂಕಾ ಗಾಂಧಿ ವಿಧ್ಯಾಭ್ಯಾಸ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ತಿಳಿಸಿದ್ದಾರೆ. ಪ್ರಿಯಾಂಕಾ ಗಾಂಧಿಯವರೊಂದಿಗೆ ಮಾತನಾಡಿದ ಜ್ಯೋತಿ, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದರು. ಕೋವಿಡ್-19 ಸಾಂಕ್ರಾಮಿಕ ರೋಗವು ಮುಗಿದ ಕೂಡಲೇ ನವದೆಹಲಿಯಲ್ಲಿ ಭೇಟಿಯಾಗುವುದಾಗಿ ಜ್ಯೋತಿಗೆ ಪ್ರಿಯಾಂಕಾ ಭರವಸೆ ನೀಡಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಬರೆದ ಸಂತಾಪ ಪತ್ರವನ್ನು ಪಕ್ಷದ ಮುಖಂಡ ಮಶ್ಕೂಲ್ ಅಹ್ಮದ್ ಅವರು ಜ್ಯೋತಿ ಕುಮಾರಿ ಅವರಿಗೆ ಹಸ್ತಾಂತರಿಸಿದರು. ಯಾವುದಕ್ಕೂ ಮುಜುಗರ ಪಡದೆ ಸಹಾಯ ಕೇಳುವಂತೆ ಪ್ರಿಯಾಂಕಾ ಜ್ಯೋತಿ ಕುಮಾರಿ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

The post ಸೈಕಲ್ ಗರ್ಲ್‍ಗೆ ಪ್ರಿಯಾಂಕಾ ವಾದ್ರಾ ನೆರವು appeared first on Public TV.

Source: publictv.in

Source link