ಬೆಂಗಳೂರು: ಸೈಕಲ್ ರವಿ ಸಹಚರನ ಕೊಲೆ ಯತ್ನ ಪ್ರಕರಣ ಸಂಬಂಧ ನವೀನ ಅಲಿಯಾಸ್ ಸ್ಟಾರ್ ನವೀನ ಎಂಬಾತನನ್ನು ಬೆಂಗಳೂರಿನ ಸಿದ್ದಾಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರೌಡಿ ಸೈಕಲ್ ರವಿಯ ಸಹಚರ ಬೇಕ್ರಿ ರಘು ಕೊಲೆಗೆ ನವೀನ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. ಇದೇ ಯುಗಾದಿ ಹಬ್ಬದ ಸಂದರ್ಭ ರಘುವಿನ ಮೇಲೆ ಅಟ್ಯಾಕ್ ಮಾಡಲಾಗಿತ್ತು. ಈ ವೇಳೆ ರಘು ಕಂಟ್ರಿ ಮೇಡ್ ಪಿಸ್ತೂಲ್ ಹಿಡಿದು ಎಸ್ಕೇಪ್ ಆಗಿದ್ದ. ಈ ಪ್ರಕರಣ ಸಂಬಂಧ ಆರೋಪಿ ನವೀನ ದಕ್ಷಿಣ ವಿಭಾಗದ ಪೊಲೀಸರಿಗೆ ತಲೆನೋವಾಗಿದ್ದ

ಸ್ಟಾರ್ ನವೀನ, ರೌಡಿ ಕುಳ್ಳ ರಿಜ್ವಾನ್​​ನ ಸಹಚರ. ಹಲವು ಕೊಲೆ-ಕೊಲೆಯತ್ನ ಪ್ರಕರಣದಲ್ಲಿ ಬೇಕಾಗಿದ್ದ ಈತನನ್ನ ಈಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

The post ಸೈಕಲ್ ರವಿ ಸಹಚರನ ಕೊಲೆ ಯತ್ನ: ನವೀನ ಅಲಿಯಾಸ್ ಸ್ಟಾರ್ ನವೀನ ಅರೆಸ್ಟ್ appeared first on News First Kannada.

Source: newsfirstlive.com

Source link