ಉಡುಪಿ: ಚಂಡ ಮಾರುತದಿಂದ ಪ್ರಕ್ಷುಬ್ಧಗೊಂಡಿರುವ ಕಡಲಿನಲ್ಲಿ ದುರ್ಘಟನೆಯೊಂದು ನಡೆದು ಹೋಗಿದೆ. ಅಲಾಯನ್ಸ್ ಹೆಸರಿನ ಹಡಗು ಸಮುದ್ರದಲ್ಲಿ ಮುಗುಚಿಬಿದ್ದು ಆರೇಳು ಜನರು ಕಣ್ಮರೆಯಾಗಿದ್ದಾರೆ.

ಅದೃಷ್ಟವಶಾತ್ ಇಬ್ಬರು ಟ್ಯೂಬ್​ನಲ್ಲಿ ಸತತ 8 ಗಂಟೆಗಳವರೆಗೆ ಈಜಿ ಜೀವ ಉಳಿಸಿಕೊಂಡಿದ್ದಾರೆ. ಮಟ್ಟು ಕೊಪ್ಲ ಪರಿಸರದ ನಿವಾಸಿಗಳು ದಡದವರೆಗೆ ಈಜಿದ ಇಬ್ಬರನ್ನು ರಕ್ಷಿಸಿದ್ದಾರೆ. ಮೊಮಿರುಲ್ ಮುಲ್ಲಾ( 34), ಕರೀಮುಲ್ಲಾ ಶೇಕ್ (24) ಕಡಲಿನಿಂದ ಬದುಕಿ ಬಂದವರು. ಮಂಗಳೂರು ಸಮೀಪ ಕಡಲಿನಲ್ಲಿ ದುರ್ಘಟನೆ ನಡೆದಿದ್ದು ಕಣ್ಮರೆಯಾದವರಿಗಾಗಿ ಶೋಧ ಕಾರ್ಯ ಮುಂದುವರದಿದೆ.

The post ಸೈಕ್ಲೋನ್​ನಿಂದ ಮುಗುಚಿದ ದೋಣಿ.. 6-7 ಮಂದಿ ಕಣ್ಮರೆ.. 8 ಗಂಟೆ ಈಜಿ ಇಬ್ಬರು ಪಾರು appeared first on News First Kannada.

Source: newsfirstlive.com

Source link