ಸೈಟ್​​ ಕೊಡಿಸೋದಾಗಿ ಹೇಳಿ ಕೋಂಟ್ಯಾತರ ರೂ. ವಂಚನೆ ಕೇಸ್​​; ಆರೋಪಿ ಅರೆಸ್ಟ್​​


ಬೆಂಗಳೂರು: ಸೈಟ್​​ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿ ಹಣ ವಂಚನೆ ಪ್ರಕರಣದಲ್ಲಿ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಅಮಾಯಕರಿಗೆ ಸೈಟ್​​ ಕೊಡಿಸುತ್ತೇನೆ ಎಂದು ಹಣ ಪೀಕುತ್ತಿದ್ದ ಡಿ ಗ್ರೂಪ್‌ ಲೇಔಟ್ ಅಧ್ಯಕ್ಷ ನಟರಾಜ್ ಎಂಬಾತನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಮೊದಲು ಸೈಟ್​​ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ಹಣ ಪೀಕುತ್ತಿದ್ದ. ನಂತರ ಒಂದು ಸೈಟ್​​ ಅನ್ನು ಮೂರು ಜನರ ಹೆಸರಿಗೆ ಮಾಡಿಸುತ್ತಿದ್ದ. ಬಳಿಕ ಸೆಟಲ್​​ಮೆಂಟ್​​ ಎಂದು ಮತ್ತೆ ಹಣ ಕೀಳುತ್ತಿದ್ದ ಈತನ ವಿರುದ್ಧ 10ಕ್ಕೂ ಕೇಸುಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *