ಸೈನಿಕರೊಂದಿಗೆ ದೀಪಾವಳಿ; ಸಾಮನ್ಯರಂತೆ ತೆರಳುವಾಗ ಟ್ರಾಫಿಕ್​ನಲ್ಲಿ ಸಿಲುಕಿದ ಪ್ರಧಾನಿ ಮೋದಿ


ನವದೆಹಲಿ: ದೇಶಾದ್ಯಂತ ದೀಪಾವಳಿ ಹಬ್ಬದ ಸಡಗರ ಮನೆಮಾಡಿದೆ. ಪ್ರತಿವರ್ಷದಂತೆ ಈ ವರ್ಷವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್​ಗೆ ಸೇನೆಯೊಂದಿಗೆ ದೀಪಾವಳಿ ಆಚರಿಸಲು ಬಂದಿದ್ದಾರೆ.

ಮೋದಿ ಅವರು ಹೆಲಿಪ್ಯಾಡ್​ನಿಂದ್​ ನೌಶೇರಾ ಸೆಕ್ಟರ್​ಗೆ ತೆರಳುವಾಗ ಯಾವುದೇ ನಿರ್ಬಧಗಳನ್ನು ಹೇರಲಾಗಿಲ್ಲ ಎಂದು ವರದಿಯಾಗಿದೆ. ಪರಿಣಾಮ ಸಾಮಾನ್ಯರಂತೆ ಯಾವುದೇ ಝಿರೋ ಟ್ರಾಫಿಕ್​ ಸೌಲಭ್ಯವಿಲ್ಲದೆ ಮಾರ್ಗ ಮಧ್ಯೆ ಅವರು ತಮ್ಮ ಭದ್ರತಾ ಪಡೆಯೊಂದಿಗೆ ಹೊರಟಾಗ ಅಲ್ಲಲ್ಲಿ ಟ್ರಾಫಿಕ್​ ಜಾಮ್​ಗೆ ಸಿಲುಕಿದ ಪ್ರಸಂಗಗಳು ನಡೆದಿದೆ.

ಸಾಮಾನ್ಯರಂತೆ ಮೋದಿ ತಮ್ಮ ಬೆಂಗಾವಲು ಪಡೆಯ ಜೊತೆ ರಸ್ತೆಯಲ್ಲಿ ಸಾಗಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಇದನ್ನೂ ಓದಿ:ಸೈನಿಕರ ಜೊತೆ ಮೋದಿ ದೀಪಾವಳಿ: ಸೇನಾ ಸಮವಸ್ತ್ರ ತೊಟ್ಟು ನೌಶೆರಾಗೆ ಬಂದಿಳಿದ ಪ್ರಧಾನಿ

News First Live Kannada


Leave a Reply

Your email address will not be published.