ಬಹುಭಾಷಾ ನಟಿ ಪ್ರಣೀತಾ ಸುಭಾಷ್ ತನ್ನ ಬಹು ದಿನದ ಗೆಳೆಯ ನಿತಿನ್ ರಾಜ್ ಅವ್ರನ್ನ ವರಿಸಿದ್ದಾರೆ ಎನ್ನಲಾಗಿದೆ. ಕಳೆದ ಶುಕ್ರವಾರವೇ ಇಬ್ಬರ ಮದುವೆ ನಡೆದಿದ್ದು ಸ್ನೇಹಿತರೊಬ್ಬರು ಶೇರ್ ಮಾಡಿರೋ ಫೋಟೋ ದಿಂದಾಗಿ ಪ್ರಣಿತಾ ಮದ್ವೆ ಆಗಿರೋ ವಿಚಾರ ತಿಳಿದು ಬಂದಿದೆ.

ಇನ್ನು ಬೆಂಗಳೂರಿನ ಬೃಹತ್ ಮಾಲ್ ಒಂದರ ಓನರ್ ಆಗಿರೋ ನಿತಿನ್ ರಾಜ್, ಹಲವು ವರ್ಷಗಳಿಂದ ಪ್ರಣೀತಾರ ಆಪ್ತ ಸ್ನೇಹಿತರಾಗಿದ್ದರು ಅನ್ನೋದು ಅವರ ಫ್ರೆಂಡ್ಸ್​ ಸರ್ಕಲ್​ನಲ್ಲಿ ಗೊತ್ತಿತ್ತು. ಆದ್ರೆ, ಅಚ್ಚರಿ ಎಂಬಂತೆ ಅವರಿಬ್ಬರೂ ಈಗ ಬದುವೆಯಾಗಿದ್ದು, ಫ್ರೆಂಡ್ಸ್ ಸಹ ಸಖತ್ ಖುಷಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಲಾಕ್​​ಡೌನ್​​ನಲ್ಲಿ ಸಪ್ತಪದಿ ತುಳಿದ ಪ್ರಣೀತಾ
ಪ್ರಣೀತಾ ಅವ್ರ ಮದ್ವೆ ಗುರು ಹಿರಿಯರ ಸಮ್ಮುಖದಲ್ಲಿಯೇ ಫಿಕ್ಸ್ ಆಗಿತ್ತಂತೆ. ಆದ್ರೆ ಲಾಕ್​ಡೌನ್ ಕಾರಣ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ಆಪ್ತರ ಸಮ್ಮುಖದಲ್ಲಿ ನಡೆದಿದೆ. ಇನ್ನು ಲಾಕ್​ ಡೌನ್ ವೇಳೆ ಸರ್ಕಾರ ರೂಪಿಸಿದ ಮಾರ್ಗದರ್ಶಿ ಮಾದರಿಯಲ್ಲೇ ಅವರು ಮದುವೆಯಾಗುವುದರ ಮೂಲಕ, ಹಲವರಿಗೆ ಸ್ಫೂರ್ತಿ ಕೂಡ ನೀಡಿದ್ದಾರೆ.

ಆದರೆ ಪ್ರಣೀತಾ ಆಗಲಿ ಅವ್ರ ಮನೆಯವರಾಗಲಿ ಮದ್ವೆ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಸಿನಿಮಾರಂಗದ ಮೂಲಗಳ ಪ್ರಕಾರ ಪ್ರಣೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದಂತು ಕನ್ಫರ್ಮ್. ಏನೇ ಆಗಲಿ, ಸಿನಿಮಾ ನಟನೆಯ ಜೊತೆಗೆ ಬಡ ಮಕ್ಕಳು, ಅವರ ವಿದ್ಯೆ, ಭವಿಷ್ಯದ ಬಗ್ಗೆಯೂ ಯೋಚಿಸುವ ಗುಣವನ್ನ ಹೊಂದಿರೋ ಪ್ರಣೀತಾ ದಂಪತಿಗೆ ಮದುವೆಯ ಶುಭಾಶಯಗಳು.

ಇದನ್ನೂ ಓದಿ: ಸದ್ದಿಲ್ಲದೇ ಸಪ್ತಪದಿ ತುಳಿದ ಪಂಚಭಾಷಾ ತಾರೆ; ಬೆಂಗಳೂರು ಹುಡುಗನ ಕೈ ಹಿಡಿದ ಪ್ರಣೀತಾ

The post ಸೈಲೆಂಟಾಗಿ ಪ್ರಣೀತಾ ಮದುವೆ; ಬೊಟ್ಟಲು ಕಂಗಳ ಚೆಲುವೆ ಕೈಹಿಡಿದ ಅದೃಷ್ಟವಂತ ಯಾರು? appeared first on News First Kannada.

Source: newsfirstlive.com

Source link