ನಿದ್ದೆ ಮಾಡುವಾಗಲಂತೂ ನಮ್ಮ ಬದ್ದ ವೈರಿಯಂತೆ ಕಾಣೋದು ಸೊಳ್ಳೆ. ಕೋಟಿ ಕೋಟಿ ಸೊಳ್ಳೆಗಳ ಸಮೂಹ ಮನಷ್ಯನ ರಕ್ತ ಹೀರಿ ಬದುಕುವ ಜೊತೆಗೆ ಕಾಯಿಲೆ ಹರಡುವ ವೈರಸ್ ಹೊತ್ತು ಓಡಾಡುತ್ತವೆ. ಇಂತಹ ಮಾರಕ ಸೊಳ್ಳೆಗಳ ನಿವಾರಣೆಗೆ ಸೊಳ್ಳೆಗಳೇ ಬರ್ತಾ ಇವೆ. ಅದೆಂತಹಾ ಸೊಳ್ಳೆಗಳು , ಎಲ್ಲಿಂದ ಬರ್ತಾ ಇವೆ ಇವು, ಇಲ್ಲಿದೆ ಸ್ಪೆಷಲ್ ರಿಪೋರ್ಟ್

ಜೆನೆಟಿಕಲಿ ಮಾಡಿಫೈಡ್ ಸೊಳ್ಳೆ.. ಏನೋ ವಿಚಿತ್ರವಾಗಿ ಇದ್ಯಲಾ? ನಿಜಕ್ಕೂ ಇದು ವಿಚಿತ್ರ ಸೊಳ್ಳೆನೆ. ಸೊಳ್ಳೆ ಎಂದರೆ ಸಾಕು ನಮಗೆ ಅವುಗಳಿಂದ ಆದ ತೊಂದರೆ, ಅವು ಕಾಡಿದ ಕೆಲವು ರಾತ್ರಿಗಳು ನೆನಪಿಗೆ ಬರುತ್ತೆ. ತನ್ನ ಕರ್ಕಶ ಶಬ್ದದೊಂದಿಗೆ ಕಿವಿಯ ಸುತ್ತ ಸುತ್ತಿ ಎಷ್ಟೋ ರಾತ್ರಿಗಳು ನಮ್ಮ ನಿದ್ದೆಗೆಡಿಸಿವೆ. ಕೆಲಸವಿಲ್ಲದೆ ಕೂತಾಗ ಎಷ್ಟೊ ಸೊಳ್ಳೆಗಳ ದುರ್ಮರಣ ನಮ್ಮ ಕೈಗಳಿಂದಲೆ ಆಗಿದೆ. ಇದಲ್ಲದೆ ಕಾಲಾನುಕಾಲದಿಂದ ಕಾಯಿಲೆಯನ್ನು ಹರಡುವಲ್ಲಿ ಈ ಸೊಳ್ಳೆಗಳು ಬಹುಮುಖ್ಯ ಪಾತ್ರ ಹೊಂದಿವೆ. ಮಲೇರಿಯ, ಡೆಂಘೀ, ಕಾಲರಾ ಹೀಗೆ ಹಲವು ಬಗೆಯ ಕಾಯಿಲೆಯನ್ನು ತನ್ನಲಿ ಹೊತ್ತು ಒಬ್ಬರಿಂದ ಇನ್ನೊಬ್ಬರಿಗೆ ಹರಡಿಸುವುದಕ್ಕೆ ಸೊಳ್ಳೆ ಯಾವಾಗಲು ತಯಾರಾಗಿ ಕಾದಿರುತ್ತವೆ. ರಾತ್ರಿ ಎಂದರೆ ರಾತ್ರಿ.. ಹಗಲು ಎಂದರೆ ಹಗಲು, ನಿಲ್ಲದೆ ರಕ್ತ ಹೀರುವ ಜೊತೆಗೆ ಸಾಂಕ್ರಾಮಿಕ ಹರಡುವಿಕೆಯಲ್ಲಿ ಸೊಳ್ಳೆಯೇ ಇದುವರೆಗೂ ಟಾಪ್ ಒನ್.

ಈ ಕಾಯಿಲೆ ಹರಡುವ ಕಿರಿದಾದ ಸೊಳ್ಳೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮೊದಲ ಆಯುಧವೆ ನಮ್ಮ ಎರಡು ಕೈಗಳು. ಚಪ್ಪಾಳೆ ತಟ್ಟಿ ಕ್ಷಣಾರ್ಧದಲ್ಲೆ ಹೊಡೆದು ಸಾಯಿಸೇಬಿಡುತ್ತೇವೆ. ಆದ್ರೂ ಸೊಳ್ಳೆಗಳ ಸಂಖ್ಯೆ ಮಾತ್ರ ಅಷ್ಟೆ ಕಾಣಿಸುತ್ತದೆ. ಇನ್ನು ಸೊಳ್ಳೆಬತ್ತಿಗಳು, ಎಲೆಕ್ಟಿಕ್ ಕಾಯಿಲ್, ಸೊಳ್ಳೆ ಬ್ಯಾಟ್ ಹೀಗೆ ವಿವಿಧ ಆಯುಧಗಳು ಸೊಳ್ಳೆಗಳನ್ನು ಸಾಯಿಸಿಲೆಂದೆ ನಮ್ಮ ಕೈಗಳಲ್ಲಿ ಇದೆ. ಏನೆ ಆದರೂ ಸೊಳ್ಳೆಗಳ ಹುಟ್ಟನ್ನು ತಡೆಯಲಾಗಿರಲಿಲ್ಲ. ಏಳರಿಂದ ಹತ್ತು ದಿನ ಬದುಕುವ ಈ ಸೊಳ್ಳೆಗಳು ತಮ್ಮ ಮೂರನೆ ದಿನಕ್ಕೆ ಮೊಟ್ಟೆಯನ್ನು ಇಡುವ ಸಾಮರ್ಥ್ಯವನ್ನು ಹೊಂದುತ್ತವೆ. ಒಂದು ಸೊಳ್ಳೆ ಮಿನಿಮಮ್ 1000 ಸೊಳ್ಳೆಗಳಿಗೆ ಜನ್ಮ ನೀಡುತ್ತದೆ. ಇದರಿಂದ ಸೊಳ್ಳೆಗಳ ಸಂಪೂರ್ಣ ನಿರ್ನಾಮ ಕಷ್ಟದ ಕೆಲಸ.

ಮೊಟ್ಟೆಗಳನ್ನು ಇಡುವುದು ಮತ್ತು ಕಾಯಿಲೆ ಹರಡುವ ಸಾಮರ್ಥ್ಯ ಇರುವುದು ಹೆಣ್ಣು ಸೊಳ್ಳೆಗಳಿಗೆ ಮಾತ್ರ. ಗಂಡು ಸೊಳ್ಳೆಗಳಿಗೆ ಹುಟ್ಟಿನಿಂದ ರಕ್ತ ಹೀರುವ ಕಾರ್ಯಕ್ರಮ ಬಿಟ್ಟರೆ ಅದರ ವಂಶ ಉದ್ಧಾರ ಮಾಡಿಕೊಳ್ಳಲು ಹೆಣ್ಣು ಸೊಳ್ಳೆಗಳ ಜೊತೆ ಮೇಟ್ ಮಾಡುವುದೊಂದೆ ಕೆಲಸ. ಒಮ್ಮೆ ಮೇಟ್ ಮಾಡಿದ ಬಳಿಕ ಗಂಡು ಸೊಳ್ಳೆ ತನ್ನ ಪ್ರಾಣವನ್ನು ಕಳೆದುಕೊಳ್ಳತ್ತದೆ. ಆದರೆ ಹೆಣ್ಣು ಮಾತ್ರ ಮೊಟ್ಟೆಗಳನ್ನು ಹಾಕಿದ ಬಳಿಕ ಅದನ್ನು ಪೋಷಿಸಿ ಆ ಮರಿ ಸೊಳ್ಳೆಗಳು ಹಾರಾಡಿದ ಮೇಲೆ  ಕೊನೆಯುಸಿರು ಎಳೆಯುತ್ತದೆ. ಇಲ್ಲವಾದರೆ ಮಾನವನಂತೆ ಯಾವುದಾದರೊಂದು ರೀತಿಯಲ್ಲಿ ಸಾವನ್ನಪ್ಪುತ್ತವೆ.

ಸೊಳ್ಳೆಯಿಂದ ಕಾಯಿಲೆ ಹರಡಿರುವುದು ಭಾರತದಲ್ಲೆ ಅತಿ ಹೆಚ್ಚು
ವಿಶ್ವದಲ್ಲೆ 3500ಕ್ಕೂ ಹೆಚ್ಚು ಜಾತಿಯ ಸೊಳ್ಳಗಳಿವೆ. ಅದರಲ್ಲೂ ಭಾರತ ಸೊಳ್ಳೆಗಳ ಸಂಖ್ಯೆಯಲ್ಲಿ ಟಾಪ್​​ನಲ್ಲಿದೆ. ಇನ್ನುಳಿದಂತೆ ಕೊಲೊಂಬೊ, ಶ್ರೀಲಂಕಾ, ಬ್ರೆಜಿಲ್, ಇಂಡೋನೇಷ್ಯಾದಲ್ಲೂ ಸೊಳ್ಳೆಗಳ ಹಾವಳಿ ಹೆಚ್ಚಾಗೇ ಇದೆ. ಈ ಸೊಳ್ಳೆಗಳಿಂದ ಭಾರತ ಒಂದಾದ ಮೇಲೊಂದು ಸಮಸ್ಯೆಗಳನ್ನು ಎದುರಿಸುತ್ತಲೆ ಇದೆ. ಇತಿಹಾಸವನ್ನ ನೋಡಿದರೆ ಮಲೇರಿಯಾ, ಡೆಂಘೀ ಹಾಗೂ ಮುಂತಾದ ಸೊಳ್ಳೆ ಹರಡಿದ ಕಾಯಿಲೆಗಳು ಭಾರತದಲ್ಲಿ ಹೆಚ್ಚಾಗಿಯೇ ಕಾಡಿದೆ. ಎಷ್ಟೋ ಮಂದಿ ಸಣ್ಣ ಸೊಳ್ಳೆಯಿಂದ ಮೃತರಾಗಿದ್ದಾರೆ. ಆದರೆ ಇದಕ್ಕೆ ಸೂಕ್ತ ಪರಿಹಾರ ಸಿಕ್ಕಿರೋದು, ಸೊಳ್ಳೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಹಾಯಕ ಆಗಲಿದೆ.

ಅಮೆರಿಕಾದ ಸಂಶೋಧಕರನ್ನು ಕಾಡಿದ ಸೊಳ್ಳೆ
ಇದೀಗ ಫ್ಲೋರಿಡಾ ಮಾರಕ ಸೊಳ್ಳೆಗಳಿಂದ ಮುಕ್ತ

ಕಳೆದ ವರ್ಷ ಅಮೆರಿಕದ ಪ್ಲೋರಿಡಾದಲ್ಲಿ ಮಲೇರಿಯಾ ಹೊತ್ತ ಸೊಳ್ಳಗಳ ಸಂಖ್ಯೆ ಹೆಚ್ಚಾಗಿತ್ತು. ಇದರಿಂದ ಅಲ್ಲಿನ ಜನತೆ ತೀರಾ ತೊಂದರೆಗೆ ಒಳಗಾದರು. ಇದಕ್ಕೆ ಪರಿಹಾರ ಅಗತ್ಯ ಎನ್ನುವುದನ್ನು ಅರಿತ ಅಮೆರಿಕಾ, ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಕೆಲವು ಸಂಶೋಧನಾ ಸಂಸ್ಥೆಗಳಿಗೆ ಬೇಡಿತು. ಬೇರೆ ಬೇರೆ ಪ್ಲಾನ್​ಗಳನ್ನು ಹಲವು ಕಂಪನಿಗಳು ಹೊತ್ತು ತಂದಿದ್ದವು. ಅದರಲ್ಲಿ ಈ ಒಂದು ಪ್ಲಾನ್ ತೀರ ಸ್ಪೆಷಲ್ ಹಾಗೂ ವರ್ಕಿಂಗ್ ಅನ್ನಿಸಿತು. ಕೂಡಲೆ ಸೊಳ್ಳೆಗಳ ಮೇಲಿನ ಎಕ್ಸಪರಿಮೆಂಟ್ ಶುರು ಮಾಡಲು ಹೇಳಿದರು. ಯುಕೆ ಮೂಲದ ಬಯೋಟೆಕ್ ಸಂಸ್ಥೆ ಈ ಪ್ರಯೋಗಕ್ಕೆ ಕೈ ಹಾಕಿತ್ತು. ಲ್ಯಾಬ್​ನಲ್ಲಿ ಕುಳಿತು ಸೊಳ್ಳೆ ಮೊಟ್ಟೆಗಳ ಮೇಲೆ ಈ ಪ್ರಯೋಗ ಶುರು ಮಾಡಿತ್ತು. ಮೊಟ್ಟೆ ಸೊಳ್ಳೆಯಾದ ಮೇಲೆ ಅದರಲ್ಲಿನ ಗಂಡು ಸೊಳ್ಳೆಯನ್ನು ಬೇರ್ಪಡಿಸಿ ಉಳಿದ ಹೆಣ್ಣು ಸೊಳ್ಳೆಗಳನ್ನು ಹಾರಲು ಬಿಡಲಾಗುತ್ತದೆ. ಗಂಡು ಸೊಳ್ಳೆಗಳಿಗೆ ವಿಶೇಷ ಪ್ರೋಟೀನ್  ಇಂಜೆಕ್ಟ್ ಮಾಡಿ ಅದರ ಜೀನ್ಸ್ ನಲ್ಲಿ ಬದಲಾವಣೆ ಮಾಡಲಾಗುತ್ತದೆ. ಈ ಇಂಜೆಕ್ಷನ್ ನೀಡಿದ ಜೀನ್ ಮಾರಕ. ಈ ರೀತಿ ಸಿದ್ದವಾದ ಹೊಸ ತಳಿಯ ಸೊಳ್ಳೆಗಳನ್ನು ಜೆನೆಟಿಕಲಿ ಮಾಡಿಫೈಡ್ ಸೊಳ್ಳೆ ಎನ್ನಲಾಗುತ್ತದೆ.

 

ಲ್ಯಾಬ್​ನಲ್ಲಿ ಸಿದ್ದವಾಗಿತ್ತು ಜನಿಟಿಕಲಿ ಮಾಡಿಫೈಡ್ ಸೊಳ್ಳೆ
ಬರೋಬರಿ 750 ಮಿಲಿಯನ್ ಸೊಳ್ಳೆಗಳ ಬಿಡುಗಡೆ
ಫ್ಲೋರಿಡಾದ ಎಲ್ಲ ಸೊಳ್ಳೆಗಳಿಗೂ ಈ ಸೊಳ್ಳೆ ಮಾರಕ

ಈ ಜನಿಟಿಕಲಿ ಮಾಡಿಫೈಡ್ ಸೊಳ್ಳೆಗಳನ್ನು ಲ್ಯಾಬ್​ಗಳಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅದಕ್ಕೆ ವಿಶೇಷ ಆಕ್ಸಿಟೆಕ್‌ ಎನ್ನುವ ಪ್ರೋಟೀನ್ ಗಳನ್ನು ಇಂಜೆಕ್ಟ್ ಮಾಡಲಾಗಿತ್ತು. ಈ ಸೊಳ್ಳೆಗಳು ವೈರಸ್ ಹೊತ್ತ ಆರೋಗ್ಯಕಾರಿ ಹೆಣ್ಣು ಸೊಳ್ಳೆಗಳ ಜೊತೆ ಮೇಟ್ ಮಾಡಿದಾಗ ತನ್ನಲಿರುವ ಈ ಆಕ್ಸಿಟೆಕ್‌ ಪ್ರೋಟೀನ್ ಅನ್ನು ಹೆಣ್ಣು ಸೊಳ್ಳೆಗಳಿಗೆ ನೀಡುತ್ತವೆ. ಈ ಪ್ಲಾನ್ ನಲ್ಲಿ ಒಳಗೊಂಡ ಜೆನಿಟಿಕಲಿ ಮಾಡಿಫೈಡ್ ಸೊಳ್ಳೆಗಳು ಬರೋಬ್ಬರಿ 750 ಮಿಲಿಯನ್. ಇಷ್ಟು ಸೊಳ್ಳೆಗಳು ಫ್ಲೋರಿಡಾದಿಂದ ಹೆಣ್ಣು ಸೊಳ್ಳೆಗಳೊಂದಿಗೆ ಸೇರಿಕೊಳ್ಳುತ್ತವೆ. ಮಾರಕ ಜೀನ್ ಅನ್ನು ಬಿತ್ತುತ್ತವೆ. ಈ ಪ್ರೋಟೀನ್ ಹೆಣ್ಣು ಸೊಳ್ಳೆಗಳಲ್ಲಿ ಇರುವ ಜೀನ್ಸ್ ಜೊತೆ ಸೇರಿ ಮಾರಕವಾಗಿ ಪರಿವರ್ತಿಸಿಕೊಳ್ಳುತ್ತದೆ. ಇದರಿಂದ ಆ ಸೊಳ್ಳೆಗಳು ಹೆಚ್ಚು ಕಾಲ ಜೀವಿಸದೆ ತನ್ನ ಪ್ರಾಣ ತ್ಯಾಗ ಮಾಡಿಬಿಡುತ್ತದೆ.

ಸೊಳ್ಳೆಗಳಲ್ಲಿ ಹೆಣ್ಣು ಮಾತ್ರ ಮನುಷ್ಯರಿಗೆ ಕಚ್ಚುತ್ತದೆ ಮತ್ತು ರೋಗಗಳನ್ನು ಹರಡುತ್ತದೆ. ಆಕ್ಸಿಟೆಕ್ ಪ್ರೋಟೀನ್ ಬಿತ್ತಿದ ಮೇಲೆ ಇದು ಆಕ್ಸಿಟೆಕ್‌ನ ತಳಿಯಾಗಿ ಮಾರ್ಪಡಾಗುತ್ತದೆ. ಇದು ಆಂತಹ ಸೊಳ್ಳೆಗಳ ಹೆಣ್ಣು ಸಂತತಿಯನ್ನು ಬದುಕಲು ಬಿಡುವುದಿಲ್ಲ.

ಇದೀಗ ಇಂಡೋನೇಷ್ಯಾದಲ್ಲಿ ಹೊಸ ಮಾಡಿಫಿಕೇಷನ್
ಫ್ಲೋರಿಡಾ ಮಾದರಿಯಲ್ಲಿ ಹೊಸ ಲ್ಯಾಬ್ ಪ್ರಯೋಗ

ಇದೀಗ ಇಂಡೋನೇಷ್ಯಾದಲ್ಲಿ ಹೊಸ ಪ್ರಯೋಗ ಶುರು ಮಾಡಿದ್ದಾರೆ. ಫ್ಲೋರಿಡದಲ್ಲಿ ಆಕ್ಸಿಟೆಕ್‌ ಪ್ರೋಟಿನ್ ಬಿಟ್ಟರೆ, ಇಂಡೋನೇಷ್ಯಾ ಒಂದು ಹೆಜ್ಜೆ ಮುಂದೆ ಹೋಗಿದೆ. ಫ್ಲೋರಿಡಾ ಲ್ಯಾಬ್ ಮಾದರಿಯಲ್ಲೇ ಇಂಡೋನೇಷ್ಯಾ ಕೂಡ ಜೆನಿಟಿಕಲಿ ಮಾಡಿಫೈಡ್ ಸೊಳ್ಳೆಗಳನ್ನು ತಯಾರಿಸಲು ನಿರ್ಧಾರ ಮಾಡಿದೆ. ಇಲ್ಲಿನ ಲ್ಯಾಬ್ ಪ್ರಯೋಗದಲ್ಲಿ ವಾಲ್ಬಾಷಿಯಾ ಎನ್ನುವ ಬ್ಯಾಕ್ಟೀರಿಯವನ್ನು ಸೊಳ್ಳೆಗಳಲ್ಲಿ ಇಂಜೆಕ್ಟ್ ಮಾಡಲಾಗ್ತಾ ಇದೆ. ವಾಲ್ಬಾಷಿಯಾ ಬ್ಯಾಕ್ಟೀರಿಯ ಇರುವ ಸೊಳ್ಳೆಗಳು ತನ್ನಲ್ಲಿರುವ ಬ್ಯಾಕ್ಟೀರಿಯಾವನ್ನು ಇನ್ನುಳಿದ ಸೊಳ್ಳೆಗಳಿಗೆ ಹರಡಿಸಿ ಎಲ್ಲ ಡೆಂಘೀ ಹರಡುವ ಸೊಳ್ಳೆಗಳನ್ನು ನಾಶ ಮಾಡುತ್ತಿದೆ.

ಮಾಡಿಫೈಡ್ ಸೊಳ್ಳೆಗಳಿಗೆ ಡೆಂಘೀ ಸೊಳ್ಳೆಗಳೇ ಟಾರ್ಗೆಟ್
3500 ಜಾತಿಯ ಸೊಳ್ಳೆಗಳಲ್ಲಿ, ಡೆಂಘೀ ಹರಡುವ ಸೊಳ್ಳೆಗಳಾದ ಏಡಿಸ್ ಹಾಗೂ ಎಜಪ್ಟೈ ಸೊಳ್ಳೆಗಳನ್ನು ಈ ಜನಿಟಿಕಲಿ ಮಾಡಿಫೈಡ್ ಸೊಳ್ಳೆಗಳು ಟಾರ್ಗೆಟ್ ಮಾಡ್ತವೆ. ಬ್ಯಾಕ್ಟೀರಿಯ ಇಂಜೆಕ್ಟ್ ಮಾಡಿದ ಮೇಲೆ ಈ ಸೊಳ್ಳೆಗಳನ್ನು ವಿವಿಧ ಜಾಗಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇವು ಡೆಂಘೀ ಹಾಗೂ ಮಲೇರಿಯಾದಂತ ವೈರಸ್​ಗಳನ್ನು ಕ್ಯಾರಿ ಮಾಡುವ ಸೊಳ್ಳೆಗಳನ್ನು ಹುಡುಕಿ ಸಂಪರ್ಕ ಬೆಳಸುತ್ತವೆ. ಈ ಸಾಂಗತ್ಯದಿಂದ ಸೊಳ್ಳೆಗಳಿಗೆ ಆ ಬ್ಯಾಕ್ಟಿರಿಯಾ ಸೇರಿ ಅದನ್ನು ಕೆಲವೇ ದಿನಗಳಲ್ಲಿ ಸಾಯಿಸಿಬಿಡುತ್ತದೆ. ಇದುವರೆಗೂ ಇಂಡೋನೇಷ್ಯಾದಲ್ಲಿ ಡೆಂಘೀ ಜೊತೆ ಇನ್ನುಳಿದ ಸೊಳ್ಳೆಗಳಿಂದ ಹರಡಿರುವ ಕಾಯಿಲೆಗಳು ಕಡಿಮೆಯಾಗಿರೋದು, ಸೊಳ್ಳೆ ಮೇಲಿನ ಈ ಪ್ರಯೋಗ ಎಫೆಕ್ಟೀವ್ ಆಗಿ ವರ್ಕ್ ಆಗಿದೆ.

ಡೆಂಘೀ ಹರಡುವಿಕೆಯಲ್ಲಿ ಶೇಕಡ 77 ರಷ್ಟು ಇಳಿಕೆ
ಹೀಗೆ ಲ್ಯಾಬ್ ನಲ್ಲಿ ಸಿದ್ದವಾದ ಸೊಳ್ಳೆಗಳನ್ನು ಇಂಡೋನೇಷ್ಯೇದ ಕೆಲವು ಪ್ರಾಂತ್ಯಗಳಲ್ಲಿ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷದ ಡೆಂಘೀ ಪ್ರಕರಣಗಳಿಗೆ ಹೋಲಿಸಿದರೆ, ಇಲ್ಲಿನ ಜನರಲ್ಲಿ ಈ ವರ್ಷ ಡೆಂಘೀ ಕಾಣಿಸಿರುವುದು ಶೇಕಡ 77ರಷ್ಟು ಇಳಿಕೆಯಾಗಿದೆ. ಇನ್ನು ಡೆಂಘೀ ಎಂದು ಆಸ್ಪತ್ರೆ ಸೇರಿರುವವರ ಪ್ರಮಾಣದಲ್ಲಿ ಶೇಕಡ 86ರಷ್ಟು ಇಳಿಕೆ ಕಾಣಿಸಿದೆ. ಇದರಿಂದ ಇಂಡೋನೇಷ್ಯಾದ  ಜನ ನಿಟ್ಟುಸಿರು ಬಿಡವಂತಾಗಿದೆ. ಇದೀಗ ವಾಲ್ಬಾಷಿಯ ಬ್ಯಾಕ್ಟೀರಿಯ ಇರುವ ಸೊಳ್ಳೆಗಳಿರುವ ಜಾಗಗಳಲ್ಲಿ ಶೇಕಡ 2.3ರಷ್ಟು ಜನರಲ್ಲಿ ಮಾತ್ರ ಡೆಂಘೀ ಕಾಣಿಸುತ್ತಿದೆ. ಮತ್ತು ವಾಲ್ವಾಷಿಯ ಸೊಳ್ಳೆಗಳು ಇಲ್ಲದಿರುವ ಜಾಗಗಳಲ್ಲಿ ಶೇಕಡ 9.4 ರಷ್ಟು ಜನರಲ್ಲಿ ಡೆಂಘೀ ಕಾಣಿಸುತ್ತಿದೆ.

ಭಾರತಕ್ಕೂ ಬರಲಿದ್ಯಾ ಡೆಂಘೀ ನಿಯಂತ್ರಣ ಸೊಳ್ಳೆ ?
ಅತಿ ಹೆಚ್ಚು ಸೊಳ್ಳೆಗಳನ್ನು ಹೊಂದಿರುವ ಇಂಡಿಯಾದಲ್ಲಿ, ಈ ಜನಿಟಿಕಲಿ ಮಾಡಿಫೈಡ್ ಸೊಳ್ಳೆಗಳನ್ನು ತರಲು ಸಕಲ ಸಿದ್ದತೆಗಳು ನಡಿತಾ ಇದೆ. ಆದರೆ ಈ ಲ್ಯಾಬ್ ಗ್ರೋನ್ ಜೀವಿಗಳಿಂದ ಸಾಕಷ್ಟು ಅನಾಹುತಗಳನ್ನು ಈಗಾಗಲೇ ಅನುಭವಿಸಿದ್ದೇವೆ. ಈ ಹಿಂದೆ ರೈತರಿಗೆ ಬೆಳೆ ಹಾನಿ ಮಾಡುತ್ತಿದ್ದ ಪಾರ್ತೇನಿಯಂ ಗಿಡಗಳನ್ನು ನಾಶ ಮಾಡುವ ಕೀಟವೊಂದನ್ನು ಭಾರತೀಯರೇ ಲ್ಯಾಬ್​​ನಲ್ಲಿ ಸಿದ್ಧ ಮಾಡಿದ್ದರು. ಆದರೆ ಆ ಕೀಟ ಪಾರ್ತೇನಿಯಂ ಸೇರಿ ಹಲವು ರೈತರ ಬೆಳೆಗಳನ್ನು ತಿಂದು ಇನ್ನೂ ದೊಡ್ಡ ನಷ್ಟ ಮಾಡಿಬಿಟ್ಟಿದ್ದವು. ಇನ್ನು ಲ್ಯಾಬ್​ನಲ್ಲೇ ಸಿದ್ದವಾಗಿದೆ ಎಂದು ಹೇಳಲಾಗ್ತಿರೋ  ಕೊರೊನಾ ವೈರಸ್ ಮಾಡಿರುವ ತೊಂದರೆ ಅಷ್ಟಿಷ್ಟಲ್ಲ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದ್ರೆ, ಈ ಸೊಳ್ಳೆಗಳು ಬೇರೆ ಏನಾದ್ರೂ ಎಡವಟ್ಟು ಮಾಡಿಬಿಡುತ್ತೆ ಅನ್ನೋ ಆತಂಕ ಎಲ್ಲ ತಜ್ಞರಲ್ಲೂ ಕಾಡ್ತಾ ಇದೆ. ಆದರೆ ಇದುವರೆಗೂ ಈ ಸೊಳ್ಳೆಗಳಿಂದ ಯಾವುದೇ ಅಹಿತಕರ ಘಟನೆಗಳು ಸಂಭಸಿಲ್ಲ ಎನ್ನುವ ಧೈರ್ಯದ ಮೇಲೆ ಭಾರತ, ಶ್ರೀಲಂಕ, ಹಾಗೂ ಕೊಲಂಬಸ್​​ನಲ್ಲೂ ಈ ಪ್ರಯೋಗಕ್ಕೆ ರೆಡಿಯಾಗಿದ್ದಾರೆ.

ಸೊಳ್ಳೆಗಳಿಂದ ಈಗಾಗಲೇ ಹಲವು ರೀತಿಯ ತೊಂದರೆಗಳನ್ನು ನಾವು ಅನುಭವಿಸಿದ್ದೆವೆ. ಆದರೆ ಅದನ್ನು ನಿವಾರಿಸಲು ಎಲ್ಲ ಪ್ರಯೋಗವು ವ್ಯರ್ಥವಾಗಿದೆ. ಆದರೆ ಈ ಜೆನಿಟಿಕಲ್ ಸೈನ್ಸ್ ನಿಂದ ನಡೆಯುತ್ತಿರುವ ಹೊಸ ಪ್ರಯೋಗದ ಮೇಲೆ ಅಡ್ಡಿಗಳಿದ್ದರು ವಿಜ್ಞಾನಿಗಳು ವಿಶ್ವಾಸದಿಂದಿದ್ದಾರೆ.

The post ಸೊಳ್ಳೆಗೆ ಸೊಳ್ಳೆಯೇ ವೈರಿ.. ಜೆನಟಿಕಲಿ ಮಾಡಿಫೈಡ್​ ಸೊಳ್ಳೆಗಳಿಂದ ಡೆಂಘೀ ನಿಯಂತ್ರಣ appeared first on News First Kannada.

Source: newsfirstlive.com

Source link