ಚೆನ್ನೈ: ಸೊಳ್ಳೆಕಾಟದಿಂದ ಮುಕ್ತಿಪಡೆಯಲು ಗ್ರೇಟರ್ ಚೆನ್ನೈ ಕಾರ್ಪೋರೇಷನ್ ಡ್ರೋಣ್​ಗಳ ಮೊರೆಹೋಗಿದೆ. ಮೂರು ಡ್ರೋಣ್​ಗಳನ್ನ ಪಡೆದು ಸೊಳ್ಳೆ ನಿವಾರಕವಾದ ಲ್ಯಾವಿಸೈಡ್​​ನ್ನು ಕಾಲುವೆಗಳಿಗೆ ಸಿಂಪಡಿಸುತ್ತಿರುವ ಪಾಲಿಕೆ ಸಿಂಗಾರ ಚೆನ್ನೈ 2.O ಹೆಸರಿನಲ್ಲಿ ಈ ಪ್ರಯತ್ನಕ್ಕೆ ಮುಂದಾಗಿದೆ.

ಒಟ್ಟು ಮೂರು ಡ್ರೋಣ್​ಗಳನ್ನ ಬಾಡಿಗೆ ಪಡೆದಿರುವ ಸಿವಿಕ್ ಬಾಡಿ.. ಪ್ರತಿ ಡ್ರೊಣ್​ನ್ನು ಐದು ಮುಖ್ಯ ಕಾಲುವೆಗಳಿಗೆ ಹಾಗೂ 31 ಸಣ್ಣ ಪ್ರಮಾಣದ ಕಾಲುವೆಗಳಿಗೆ ಮೀಸಲಿರಿಸಲಾಗಿದೆ. ಈ ಡ್ರೋಣ್​ಗಳು ಒಟ್ಟು 45 ಕೆ.ಜಿ. ತೂಕ ಹೊಂದಿದ್ದು ತಲಾ ಎರಡೆರಡು ಟ್ಯಾಂಕರ್​ಗಳನ್ನು ಹೊಂದಿವೆ. ಒಂದು ಟ್ಯಾಂಕ್​ 5 ಲೀಟರ್ ಪೆಟ್ರೋಲ್​ ತುಂಬುವ ಸಾಮರ್ಥ್ಯ ಹೊಂದಿದ್ದು ಮತ್ತೊಂದು ಟ್ಯಾಂಕ್​ನಲ್ಲಿ 10 ಕೆಜಿಯಷ್ಟು ಲ್ಯಾವಿಸೈಡ್ ತುಂಬಬಹುದಾಗಿದೆ.

ಇನ್ನು ಈ ಡ್ರೋಣ್​ಗಳನ್ನ ಚಲಾಯಿಸಲೆಂದೇ ಅಣ್ಣಾ ಯೂನಿವರ್ಸಿಟಿಯಿಂದ ತರಬೇತಿ ಪಡೆದ ಆಪರೇಟರ್​ಗಳನ್ನ ನೇಮಿಸಲಾಗಿದ್ದು ದಿನಕ್ಕೆ 4 ಗಂಟೆ ಕಾಲ ಈ ಆಪರೇಟರ್​ಗಳು ಡ್ರೋನ್​ಗಳನ್ನ ಚಲಾಯಿಸಲಿದ್ದಾರೆ ಎನ್ನಲಾಗಿದೆ.

The post ಸೊಳ್ಳೆ ಕಾಟಕ್ಕೆ ಡ್ರೋಣ್ ಪರಿಹಾರ: ಹೊಸ ಪ್ರಯತ್ನಕ್ಕೆ ಇಳಿದ ಚೆನ್ನೈ ಪಾಲಿಕೆ appeared first on News First Kannada.

Source: newsfirstlive.com

Source link