ಹೈದರಾಬಾದ್​: ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಅತ್ತೆಯೊಂದಿಗೆ ಸಾಮಾಜಿಕ ಅಂತರ ಪಾಲಿಸಿದ ಹಿನ್ನೆಲೆಯಲ್ಲಿ ಕೋಪಗೊಂಡ ಅತ್ತೆ, ಸೊಸೆಯನ್ನ ಬಲವಂತವಾಗಿ ತಬ್ಬಿಕೊಂಡಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ.

ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಿಮ್ಮಾಪುರ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಮೇ 31 ರಂದು ಭೇಟಿ ನೀಡಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಸೊಸೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅತ್ತೆಗೆ ಕೊರೊನಾ ಸೋಂಕು ಇರುವುದು ದೃಢವಾದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದ ಪಾಲಿಸಲು ಮುಂದಾದೆ. ಈ ವೇಳೆ ಅತ್ತೆ ಏಕಾಏಕಿ ನನ್ನನ್ನು ತಬ್ಬಿಕೊಂಡರು. ನನಗೂ ಕೊರೊನಾ ಸೋಂಕು ತಲುವಂತೆ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.

ಸೋಮರಿಪೇಟಾ ಗ್ರಾಮದ ಮಹಿಳೆಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಸೊಸೆ ತನ್ನ ಇಬ್ಬರು ಮಕ್ಕಳನ್ನು ಅತ್ತೆ ಬಳಿ ಹೋಗದಂತೆ ತಡೆದಿದ್ದರು. ಅಲ್ಲದೇ ಊಟ ನೀಡುವ ವೇಳೆಯೂ ದೂರದಿಂದಲೇ ನೀಡುತ್ತಿದ್ದರು. ಇದು ಸೊಸೆಯ ವಿರುದ್ಧ ಅತ್ತೆ ಕೋಪಗೊಳ್ಳಲು ಪ್ರಮುಖ ಕಾರಣವಾಗಿದೆ. ಏಕಾಏಕಿ ಸೊಸೆಯನ್ನು ತಬ್ಬಿಕೊಂಡ ಅತ್ತೆ, ನಾನು ಸಂತೋಷದಿಂದ ಸತ್ತ ಮೇಲೆ ನಿನಗೆ ಏನು ಬೇಕೋ ಅದು ಮಾಡಿಕೋ ಎಂದು ಹೇಳಿದ್ದರು ಎನ್ನಲಾಗಿದೆ. ಅಲ್ಲದೇ ಸೊಸೆಯನ್ನು ಮನೆಯಿಂದ ಹೊರ ಹಾಕಿದ್ದಾಳೆ.

ಸದ್ಯ ಮನೆಯಿಂದ ಹೊರ ಹಾಕಿದ ಮಾಹಿತಿ ಪಡೆದ ಸಹೋದರಿಯನ್ನು ತವರು ತಿಮ್ಮಾಪುರಕ್ಕೆ ಮೇ 29 ರಂದು ಕರೆದುಕೊಂಡು ಬಂದಿದ್ದಾರೆ. ಸದ್ಯ ಸೊಸೆಗೂ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯನ್ನು ವೈದ್ಯಾಧಿಕಾರಿಗಳು ಆಕೆಯನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಿದ್ದಾರೆ. ಅಲ್ಲದೇ ಚಿಕಿತ್ಸೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.  ಇನ್ನೂ ಮಹಿಳೆಯ ಗಂಡ ಟ್ರ್ಯಾಕ್ಟರ್ ಡ್ರೈವರ್ ಆಗಿದ್ದು ಒಡಿಸ್ಸಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ 7 ತಿಂಗಳ ಹಿಂದೆ ಆತ ಮನೆಯಿಂದ ಕೆಲಸಕ್ಕೆ ಒಡಿಸ್ಸಾಗೆ ತೆರಳಿದ್ದ ಎಂಬ ಮಾಹಿತಿ ಲಭಿಸಿದೆ.

The post ಸೊಸೆ ಮೇಲೆ ಎಲ್ಲಿಲ್ಲದ ಸಿಟ್ಟು; ತಬ್ಬಿಕೊಂಡೇ ಬಿಟ್ಟಳು ಕೊರೊನಾ ಸೋಂಕಿತ ಅತ್ತೆ appeared first on News First Kannada.

Source: newsfirstlive.com

Source link