ಛೇ ಇಂಥದ್ದೊಂದು ಹುನ್ನಾರವನ್ನ ಯಾರಾದ್ರೂ ಮಾಡಬಹುದಾ? ತನ್ನ ಉದ್ದೇಶ ಇಡೇರಿಕೆಗಾಗಿ ಕೊಟ್ಯಂತರ ಅಮಾಯಕರ ಹತ್ಯೆಯನ್ನ ಮಾಡಬಹುದಾ? ಹಿಟ್ಲರ್​ಗಿಂತ ಈ ಆಧುನಿಕ ಯಮಕಿಂಕರ ಡೆಂಜರಾ? ಇಥಂದ್ದೊಂದು ಪ್ರಶ್ನೆ ಚೀನಾದ ಬಗ್ಗೆ ದಿನೇ-ದಿನೆ ಬಲವಾಗುತ್ತಲೇ ಇದೆ. ಇದಕ್ಕೆ ಪೂರಕವೆಂಬಂತೆ ಸದ್ಯ ಮತ್ತೊಂದು ಸತ್ಯ ಬಯಲಾಗ್ತಿದ್ದು.. ಚೀನಾದ ಮುಖವಾಡ ಕಳಚಿದೆ!

ವೈರಸ್​ನ ಮನುಷ್ಯನೇ ಹುಟ್ಟು ಹಾಕಿದ್ದು ಪ್ರೂವ್ ಆಯ್ತಾ?
ಒಂದು ವೈರಸ್.. ಕಣ್ಣಿಗೆ ಕಾಣದ.. ಸಾಮಾನ್ಯ ಮೈಕ್ರೋಸ್ಕೋಪ್​​ನಲ್ಲಿಯೂ ನೋಡಲಾಗದ.. ಚಿಕ್ಕಾತಿಚಿಕ್ಕ ವೈರಸ್.. ಅದ್ರಲ್ಲೇನು ವಿಶೇಷ? ವೈರಸ್​ಗಳು ಹೀಗೆಯೇ ಇರುತ್ತವೆ ಅಲ್ವಾ? ಆದ್ರೆ ಆ ವೈರಸ್​ ನಿಸರ್ಗದತ್ತವಾಗಿದ್ರೆ.. ನಿಸರ್ಗವೇ ಅದನ್ನ ಕಂಟ್ರೋಲ್ ಮಾಡಿ ಬಿಡುತ್ತೆ.. ಕೊಂಚ ಸಮಯ ಹಿಡಿಯಬಹುದು ಅಷ್ಟೇ.. ಆದ್ರೆ, ಇದು ಅಂತಹ ವೈರಸ್​ ಅಲ್ಲ.. ಈ ಕಣ್ಣಿಗೆ ಕಾಣದ ವೈರಸ್​ ಈಗಾಗಲೇ ವಿಶ್ವಾದ್ಯಂತ 40 ಲಕ್ಷ ಜನರನ್ನು ಬಲಿ ಪಡೆದಿದೆ.. ಕ್ಷಣಕ್ಕೊಮ್ಮೆ ರೂಪ ಬದಲಿಸುತ್ತಾ.. ಮ್ಯೂಟೇಶನ್ ಅನ್ನೋ ಹೆಸರಲ್ಲಿ ಅತ್ಯಂತ ಜಾಣ ತನದಿಂದ ಬಣ್ಣ ಬದಲಿಸುತ್ತಲೇ ಇದೆ.. ಸೇರಿಗೆ ಸವ್ವಾ ಸೇರು ಅನ್ನೋ ಹಾಗೆ ತನ್ನದೇ ಆದ ಪಟ್ಟು ಹಾಕುತ್ತಲೇ ಇದೆ.. ಇಂಥದ್ದೊಂದು ಡೇಂಜರಸ್ ವೈರಸ್ ಬರುತ್ತೆ ಅಂತ ಯಾರೂ ಭಾವಿಸಿರಲೇ ಇಲ್ಲ.. ಆದ್ರೆ ಅದು ಬಂದಿದೆ.. ಅದಕ್ಕೆ ವ್ಯಾಕ್ಸಿನ್​ಗಳನ್ನೂ ಈಗ ನೀಡಲಾಗ್ತಿದೆ.. ಯಾಕಂದ್ರೆ ಮನುಷ್ಯ ಹುಟ್ಟು ಹಾಕಿದ ವೈರಸ್​​ ಅನ್ನ ಮನುಷ್ಯನೇ ನಿಯಂತ್ರಿಸಬೇಕಲ್ವಾ?

ಅರೇ ಇದೇನಿದು.. ಈ ವೈರಸ್​ನ ಮನುಷ್ಯನೇ ಹುಟ್ಟು ಹಾಕಿದ್ದು ಪ್ರೂವ್ ಆಯ್ತಾ? ಅಂತ ಹೌಹಾರಬೇಡಿ.. ಯಾಕಂದ್ರೆ ಅದು ಅಷ್ಟು ಸುಲಭಕ್ಕೆ ಪ್ರೂವ್​ ಆಗಲ್ಲ.. ಯಾಕಂದ್ರೆ ಇಂದು ಆರೋಪಿ ಸ್ಥಾನದಲ್ಲಿ ಯಾವುದೋ ಸಾಮಾನ್ಯ ವ್ಯಕ್ತಿ ಅಥವಾ ಸಾಮಾನ್ಯ ಪ್ರಜಾಪ್ರಭುತ್ವ ರಾಷ್ಟ್ರವಿಲ್ಲ.. ಇವತ್ತು ಆರೋಪಿ ಸ್ಥಾನದಲ್ಲಿರೋದು ಕಾಲ್ಪನಿಕ ಡ್ರಾಗನ್​​​​ ಬೆನ್ನೇರಿ ಕುಳಿತ ಭ್ರಮೆಯಲ್ಲಿರೋ ಚೀನಾ ಹೆಸರಿನ ರಾಷ್ಟ್ರ.. ಅದರ ಬಲ ಎಂಥದ್ದು ಅನ್ನೋದು ಇಂದು ಅಂಗೈ ಹುಣ್ಣಿನಂತೆಯೇ ಬಹಿರಂಗವಾಗಿರೋ ರಹಸ್ಯ.. ಅದು ತನ್ನ ಉದ್ದೇಶ ಸಾಧನೆಗಾಗಿ.. ತನ್ನ ಗುರಿ ಮುಟ್ಟಲಿಕ್ಕಾಗಿ ಸಾಮ-ದಾನ-ದಂಡ-ಬೇಧ ಹೀಗೆ ಯಾವ ಮಾರ್ಗ ಅನುಸರಿಸಲೂ ಸಿದ್ಧ.. ಇದೇ ಚೀನಾ ಕಾರಣದಿಂದ ಇಂದು ವರ್ಲ್ಡ್​ ಹೆಲ್ತ್​ ಆರ್ಗನೈಜೇಶನ್ ಅನ್ನು ವುಹಾನ್ ಹೆಲ್ತ್ ಆರ್ಗನೈಜೇಶನ್ ಅಂತಾ ಕರೆಯುವಂಥ ಸಂದರ್ಭ ನಿರ್ಮಾಣವಾಗಿದೆ. ಹೀಗಾಗಿ ಆ ದೇಶದಿಂದ ಸಾಕ್ಷಿ ಸಂಗ್ರಹಿಸೋದು ಬಹುತೇಕ ಅಸಾಧ್ಯ. ಅಲ್ಲಿಗೆ ಅಧ್ಯಯನಕ್ಕಂತ ಯಾರೇ ಹೋದ್ರೂ ಅವರು ಅಷ್ಟೇ ಹೆಲ್ದಿಯಾಗಿ ಇರಬೇಕಂದ್ರೆ ಚೀನಾದ ಹೆಜ್ಜೆ ಮೇಲೆಯೇ ಹೆಜ್ಜೆಯನ್ನ ಇಡಬೇಕು.. ಅಲ್ಲಿ ಕೃತಕ ಪ್ರವಾಹ ಕೂಡ ಸೃಷ್ಟಿಯಾಗಿಬಿಡಬಹುದು.. ಹಾಗಾದ್ರೆ ಈ ಕೊರೊನಾ ವೈರಸ್ ಮಾನವ ನಿರ್ಮಿತ ಅನ್ನೋದು ಹೇಗೆ ಬಯಲಾಗ್ತಿದೆ? ಈ ಗುಮಾನಿ ಹೇಗೆ ಸತ್ಯವಾಗುವ ಸನಿಹದಲ್ಲಿದೆ ಅನ್ನೋ ಪ್ರಶ್ನೆ ಬರೋದು ಸಹಜ..

Bridge P2C -1: ಒಂದು ವಿಷಯ ಗಮನಿಸಿ.. ಅದು ಯಾವುದೇ ರಾಜ್ಯದ ಕ್ರೈಂ ಬ್ರಾಂಚ್​ ಪೊಲೀಸರಿರಲಿ.. ಅವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೊತ್ತಿರುತ್ತೆ.. ಅದೆಂದರೆ ಅಪರಾಧಿ ಎಷ್ಟೇ ಜಾಣತನದಿಂದ ಕೃತ್ಯ ಮಾಡಿದ್ರೂ… ಒಂದಿಲ್ಲೊಂದು ಕುರುಹುಗಳನ್ನು ಉಳಿಸಿಯೇ ಹೋಗಿರ್ತಾನೆ ಅಂತ.. ಹೀಗಾಗಿ ಕೇಸ್​ ತಡವಾಗಿ ಸಾಲ್ವ್ ಆಗಬಹುದು.. ಆದ್ರೆ ಪ್ರಕರಣದ ಅಪರಾಧಿ ಬಗ್ಗೆ ತಿಳಿಯದೇ ಮುಚ್ಚಿಹೋಗೋದು ಕಷ್ಟ..

ಇದೇ ದೃಷ್ಟಿಯಲ್ಲಿ ನೋಡಿದಾಗ.. ಖಂಡಿತ ಚೀನಾದ ಮುಖವಾಡ ಕೂಡ ಕಳಚಲು ಆರಂಭವಾಗುತ್ತೆ.. ಇನ್​ಫ್ಯಾಕ್ಟ್​ ಈಗ ಆರಂಭವಾಗಿ ಬಿಟ್ಟಿದೆ.. ಈಗಾಗಲೇ ಅದರ ಮರ್ಜಿ ಹೊರತಾಗಿಯೂ ಸಾಕಷ್ಟು ವಿವರಗಳು ವಿಶ್ವಾದ್ಯಂತ ಲಭ್ಯವಾಗಲು ಆರಂಭಿಸಿವೆ. ಅದ್ರಲ್ಲೂ ಭಾರತದ ವೈದ್ಯರು ಚೀನಾದ ಮುಖವಾಡ ಕಳಚಲು ಮಹತ್ವದ ಪಾತ್ರ ವಹಿಸಿದ್ದಾರೆ.. ಈ ನಡುವೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಸಹ.. ಚೀನಾದ ಮುಖವಾಡ ಕಳಚಿ ವುಹಾನ್ ವೈರಸ್ ಸತ್ಯವನ್ನ ಬಯಲಿಗೆ ಎಳೆಯುವಂತೆ ತನ್ನ ಗುಪ್ತಚರ ಇಲಾಖೆಗೆ ಆದೇಶ ನೀಡಿದ್ದಾರೆ. ಹೀಗೆ ಸಾಲು ಸಾಲು ಎವಿಡೆನ್ಸ್​ಗಳನ್ನ ಪರೋಕ್ಷವಾಗಿ ಬಿಟ್ಟು ಕೊಡುತ್ತಲೇ ಬಂದಿರೋ ಚೀನಾದಿಂದ.. ಈಗ ಮತ್ತೊಂದು ಸಂಗತಿ ಬಯಲಿಗೆ ಬಂದಿದೆ.

ಚೀನಾದಿಂದ ಬಯಲಿಗೆ ಬಂದ ಸಂಗತಿ ಏನು?
ಚೀನಾದ ಹುನ್ನಾರ ಇನ್ನಾದ್ರೂ ಜಗತ್ತಿಗೆ ತಿಳಿಯುತ್ತಾ?

ಇವತ್ತಿನವರೆಗೂ ಜಗತ್ತಿನ ಜನರ ತಲೆಯನ್ನ ಒಂದು ವಿಷಯ ತಿನ್ನುತ್ತಲೇ ಇದೆ.. ಡಿಸೆಂಬರ್ 2019ರಲ್ಲಿಯೇ ಚೀನಾದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೂ.. ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನ ಹೊಂದಿದ್ದರು.. ಆ ದೇಶ ಅದ್ಹೇಗೆ ಕೊರೊನಾ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಯ್ತು? ಹಲವು ರಾಷ್ಟ್ರಗಳಲ್ಲಿ ಕೊರೊನಾ ಎರಡನೇ, ಮೂರನೇ, ನಾಲ್ಕನೇ ಅಲೆಗಳು ಬಂದರೂ ಈ ದೇಶದಲ್ಲಿ ಮಾತ್ರ ಯಾಕೆ ಇನ್ನೊಂದು ಅಲೆ ಬರಲಿಲ್ಲ? ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಹೆಚ್ಚಿನ ಸಾವು ನೋವು ಸಂಭವಿಸ್ತಾ ಇದ್ರೂ.. ಚೀನಾದಲ್ಲಿ ಮಾತ್ರ ಕೊರೊನಾ ವೈರಸ್​​ ಹೇಗೆ ಜನರನ್ನ ಸಾವಿಗೆ ದೂಡಲಿಲ್ಲ? ಏನಿದರ ಮರ್ಮ? ಹೀಗೆ ಸಾಲು ಸಾಲು ಪ್ರಶ್ನೆಗಳು ಮೂಡುತ್ತಲೇ ಇವೆ..

ಚೀನಾ ಸೋಂಕಿನ-ಸಾವಿನ ಬಗ್ಗೆ ಸತ್ಯ ಮುಚ್ಚಿಡ್ತಾ?
ಮೊದಲೇ ವ್ಯಾಕ್ಸಿನ್ ಸಿದ್ಧ ಪಡಿಸಿಕೋಂಡಿದ್ದೇ ಸತ್ಯಾನಾ?

ಚೀನಾದಲ್ಲಿ ಸೋಂಕೇ ಬಂದಿಲ್ಲ.. ಪ್ರಾರಂಭದಲ್ಲಿ ಕಾಣಿಸಿಕೊಂಡ್ರೂ ನಂತರದ ದಿನಗಳಲ್ಲಿ ಅಲ್ಲಿನ ಸರ್ಕಾರ ಕೈಗೊಂಡ ಕಠಿಣ ನಿಯಮಗಳ ಕಾರಣದಿಂದ ಸೋಂಕು ನಿಯಂತ್ರಣಕ್ಕೆ ಬಂತು.. ಇದೇ ಕಾರಣದಿಂದ ಬೇರೆ ಬೇರೆ ಅಲೆಗಳು ಬರಲಿಲ್ಲ.. ಅನ್ನೋ ವಾದವನ್ನು ಚೀನಾ ಮೊದಲಿನಿಂದಲೂ ಮುಂದಿಡುತ್ತಲೇ ಬರ್ತಿದೆ. ಆದ್ರೆ, ಇದು ನಿಜಕ್ಕೂ ಸತ್ಯಾನಾ? ಅನ್ನೋ ಪ್ರಶ್ನೆಗಳು ಮೂಡುತ್ತಿವೆ. ಚೀನಾ ಇದೇ ವಾದವನ್ನು ಮುಂದಿಡೋದಾದ್ರೆ ಖಂಡಿತವಾಗಿಯೂ ಚೀನಾ ಸುಳ್ಳು ಹೇಳ್ತಿದೆ.. ಒಂದೋ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸಿವೆ ಆದ್ರೆ ಚೀನಾದ ಕಮ್ಯುನಿಸ್ಟ್ ಸರ್ಕಾರ ಅದನ್ನ ಮುಚ್ಚಿಟ್ಟಿದೆ.. ಇಲ್ಲವೇ ವೈರಸ್​​ ನಿಯಂತ್ರಣಕ್ಕೆ ಮೊದಲೇ ವ್ಯಾಕ್ಸಿನ್​ ಅನ್ನ ಸಿದ್ಧ ಪಡಿಸಿಕೊಂಡಿದ್ದೇ ಸೋಂಕು ನಿಯಂತ್ರಣಕ್ಕೆ ಸಹಾಯ ಮಾಡಿದೆ ಅನ್ನೋ ವಾದ ಕೂಡ ಇಂದು ಬಲವಾಗ್ತಿದೆ.. ವಿಶೇಷ ಅಂದ್ರೆ ಎರಡನೇ ಅಂಶ ಬಹುತೇಕ ಸತ್ಯ ಅನ್ನೋವಂಥ ಬೆಳವಣಿಗೆಗಗಳು ಈಗ ನಡೆದಿವೆ.

ಮೊದಲೇ ಸಿದ್ಧವಾಗಿತ್ತು ವ್ಯಾಕ್ಸಿನ್
ಸೋಂಕು ಸಾಂಕ್ರಾಮಿಕವಾಗೋ ಮೊದಲೇ ಪೇಟೆಂಟ್?!

ಹೌದು.. ಇದು ಈಗ ಅಚ್ಚರಿಗೆ ಕಾರಣವಾಗಿರೋ ಅಂಶವೇ ಸರಿ. ಯಾಕಂದ್ರೆ, ಕೊರೊನಾ ಸೋಂಕನ್ನು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗ ಅಂತ ಘೋಷಿಸುವ ಮೊದಲೇ ಚೀನಾದ ಪೇಟೆಂಟ್​​​ಗೆ ಅರ್ಜಿ ಹಾಕಿತ್ತು ಅನ್ನೋ ಸಂಗತಿ ಈಗ ಬಯಲಾಗಿದೆ. ಅದೂ ಕೂಡ ಚೀನಾದ ಮಿಲಿಟರಿ ವಿಜ್ಞಾನಿಗಳು ಕೊರೊನಾ ಸೋಂಕು ನಿಯಂತ್ರಕ ಲಸಿಕೆಗೆ ಪೇಟೆಂಟ್​ ಪಡೆಯಲು ಮುಂದಾಗಿದ್ದರು ಅನ್ನೋ ಮಾಹಿತಿ ಹೊರಬಿದ್ದಿದೆ. ಅಮೆರಿಕಾದೊಂದಿಗೆ ಸಂಪರ್ಕ ಹೊಂದಿದ್ದ ಹಾಗೂ ಪೀಪಲ್ಸ್​ ಲಿಬರೇಷನ್ ಆರ್ಮಿ (PLA)ಗಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿ ಯೂಸೆನ್ ಝೌ 2020ರ ಫೆಬ್ರವರಿ 24ರಂದೇ ಕೋವಿಡ್​ ಲಸಿಕೆಗೆ ಪೇಟೆಂಟ್​​​ಗಾಗಿ ಪೇಪರ್​ವರ್ಕ್​​ ಫೈಲ್ ಮಾಡಿದ್ದರು ಅಂತ ದಿ ಆಸ್ಟ್ರೇಲಿಯನ್ ನ್ಯೂಸ್​​ಪೇಪರ್ ವರದಿ ಮಾಡಿ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.

2. Bridge P2C: ಹಾಗೆ ನೋಡಿದ್ರೆ 2019ರ ಡಿಸೆಂಬರ್​ನಲ್ಲೇ ಚೀನಾದಲ್ಲಿ ಕೊರೊನಾ ಹರಡಲು ಶುರುವಾಗಿತ್ತು. ಆದ್ರೆ ಚೀನಾ ಮಾತ್ರ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ.. ಯಾಕಂದ್ರೆ ಚೀನಾದ ಉದ್ದೇಶವೇ ಇದು ಜಗತ್ತಿಗೆ ಹರಬೇಕು ಅನ್ನೋದಾಗಿತ್ತಾ? ಗೊತ್ತಿಲ್ಲ.. ಆದ್ರೆ ಅದರ ಉದ್ದೇಶ ಮಾತ್ರ ಅದೇ ಆಗಿತ್ತು ಅನ್ನೋದಕ್ಕೆ ಇಂದು ಸಾಕಷ್ಟು ಸಾಕ್ಷಿಗಳು ಲಭ್ಯವಾಗುತ್ತಲೇ ಇವೆ.. ಇದಕ್ಕೆ ಲೇಟೆಸ್ಟ್​ ಸಾಕ್ಷಿಯೇ ಈ ವ್ಯಾಕ್ಸಿನ್​ ಪೇಟೆಂಟ್ ವಿಚಾರ..

ಹಾಗೆ ನೋಡಿದ್ರೆ ವಿಶ್ವದಾದ್ಯಂತ ಲಸಿಕೆ ಲಭ್ಯವಾಗಬೇಕು ಅನ್ನೋ ದೃಷ್ಟಿಯಿಂದ ಕೊರೊನಾ ಲಸಿಕೆ ಮೇಲಿನ ಪೇಟೆಂಟ್​ ರದ್ದತಿಗೆ ವರ್ಲ್ಡ್​​ ಟ್ರೇಡ್​​ ಆರ್ಗನೈಸೇಷನ್​​​ ಸದಸ್ಯರ ಮಾತುಕತೆ ನಡೀತಿದೆ. ಆದ್ರೆ ಒಂದು ವರ್ಷದ ಹಿಂದೆಯೇ ಇಡೀ ಜಗತ್ತಿಗೆ ಕೊರೊನಾ ಹರಡುತ್ತಿದ್ರು, ಮುಂದೆ ದೊಡ್ಡ ಅಪಾಯವೇ ಎದುರಾಗಲಿದೆ ಅನ್ನೋದು ಗೊತ್ತಿದ್ರೂ ಕಳ್ಳಾಟ ಆಡಿದ ಚೀನಾ, ಅದ್ರಿಂದ ರಕ್ಷಿಸಿಕೊಳ್ಳೋಕೆ ಇರೋ ಲಸಿಕೆಯನ್ನ ಬೇರೆ ಯಾರೂ ಬಳಸಬಾರದು ಅನ್ನೋ ಸ್ವಾರ್ಥಕ್ಕೂ ಮುಂದಾಗಿತ್ತು ಅನ್ನೋದು ಲ್ಯಾಬ್​ ಲೀಕ್ ಥಿಯರಿ ಅಥವಾ ಬಯೋವಾರ್ ಮಾತಿಗೆ ಪುಷ್ಠಿ ನೀಡುವಂತಿದೆ..

ಕೊರೊನಾವೈರಸ್​ ಲ್ಯಾಬ್​ ಲೀಕ್ ಎಂಬ ವಾದಕ್ಕೆ ಮತ್ತಷ್ಟು ಪುಷ್ಠಿ
ಮತ್ತೆ ಮತ್ತೆ ಗಾಲಿ ಬಂದು ನಿಲ್ತಿರೋದೇ ವುಹಾನ್​ ಲ್ಯಾಬ್​ನತ್ತ

ಅಂದ್ಹಾಗೆ ಗಮನಿಸಬೇಕಾದ ಸಂಗತಿ ಎಂದ್ರೆ ಹೀಗೆ ಪೇಟೆಂಟ್​ಗೆ ಅಪ್ಲೈ ಮಾಡಿದ್ದ ಚೀನಾದ ಮಿಲಿಟರಿ ವಿಜ್ಞಾನಿ ಯೂಸೆನ್ ಝೌ, ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ವಿಜ್ಞಾನಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರಂತೆ. ಯೆಸ್​ ಅದೇ ವುಹಾನ್​.. ಕೊರೊನಾ ವೈರಸ್​ ಮೊದಲು ಕಾಣಿಸಿಕೊಂಡಿದ್ದೇ ಚೀನಾದ ವುಹಾನ್​ ನಗರದಲ್ಲಿ ಅನ್ನೋದು ಮತ್ತೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ? ಹೌದು ಅದೇ ಲ್ಯಾಬ್‌ನ ಉಪನಿರ್ದೇಶಕಿ ಮತ್ತು ಬ್ಯಾಟ್ ವುಮೆನ್ ಅಂದೇ ಖ್ಯಾತಿ ಪಡೆದಿದ್ದ ಶಿ ಝೆಂಗ್ಲಿ ಜೊತೆಗೆ ಇವರು ಕಾರ್ಯನಿರ್ವಹಿಸಿದ್ದಾರಂತೆ. ಇದೇ ಶೀ ಝೆಂಗ್ಲಿ ಬಾವಲಿಗಳಲ್ಲಿನ ಕರೋನವೈರಸ್ ಕುರಿತ ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ.

3 Birdge P2C : ಜಾಯಿನಿಂಗ್​ ದಿ ಡಾಟ್​ ಅಂತಾರಲ್ಲ.. ಹಾಗೆ ಚುಕ್ಕಿಗಳನ್ನು ಕೂಡಿಸುತ್ತಾ ಹೋದಾಗ.. ಚೀನಾದ ಮುಖವಾಡ ಹೇಗೆ ಕಳಚುತ್ತಿದೆ ನೋಡಿ.. ಒಂದು ಕಡೆ ಚೀನಾ ಮಿಲಿಟರಿ ಅಧಿಕಾರಿ ಯೂಸೆನ್ ಝೌ, ಇನ್ನೊಂದು ಕಡೆ ಶೀ ಝೆಂಗ್ಲಿ.. ಇವರಿಬ್ಬರ ನೇರ ಸಂಪರ್ಕ ವುಹಾನ್​ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯೊಂದಿಗೇ ಇದೆ.. ಹೀಗಾಗಿಯೇ ಈ ವಿಚಾರ ಈಗ ಅನುಮಾನಗಳನ್ನ ಹೆಚ್ಚು ಮಾಡಿದೆ. ವುಹಾನ್​​ ಲ್ಯಾಬ್​ನಿಂದಲೇ ಕೊರೊನಾವೈರಸ್​ ಲೀಕ್ ಆಗಿದ್ದು ಅನ್ನೋ ವಾದಕ್ಕೂ ಇದು ಪುಷ್ಠಿ ನೀಡುತ್ತಿದೆ..

ಪೇಟೆಂಟ್​ಗೆ ಅರ್ಜಿ ಹಾಕಿದ ಮೂರು ತಿಂಗಳಲ್ಲೇ ಝೌ ಸಾವು

ಯೂಸೆನ್​​ ಝೌ ಈಗ ಬದುಕಿಲ್ಲ. ಪೇಟೆಂಟ್​​ಗೆ ಅರ್ಜಿ ಹಾಕಿದ ಮೂರೇ ತಿಂಗಳ ಬಳಿಕ ಅವರು ಸಾವನ್ನಪ್ಪಿದ್ದಾರೆ. ಝೌ ಅವರು ದೇಶದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದರೂ ಕೂಡ ಅವರ ಮರಣದ ಸುದ್ದಿ ಒಂದು ಚೀನಾದ ಮಾಧ್ಯಮದಲ್ಲಿ ಮಾತ್ರ ವರದಿಯಾಗಿತ್ತು ಎಂದು ದಿ ನ್ಯೂಯಾರ್ಕ್ ಪೋಸ್ಟ್ ಹೇಳಿದೆ. ಝೌ ಈ ಹಿಂದೆ ಮಿನ್ನೇಸೋಟ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ಬ್ಲಡ್ ಸೆಂಟರ್ ಸೇರಿದಂತೆ ಅಮೆರಿಕಾ ಸಂಸ್ಥೆಗಳಿಗೆ ಸಂಬಂಧಿಸಿದ ಸಂಶೋಧನೆಯಲ್ಲಿ ಕೆಲಸ ಮಾಡಿದ್ದರು ಎಂದೂ ಪತ್ರಿಕೆ ವರದಿ ಮಾಡಿದೆ. ಹೀಗಾಗಿ ಸಹಜವಾಗಿ ಇಲ್ಲಿ ಚೀನಾ ಯಾಕೆ ಇಷ್ಟು ಗೌಪ್ಯತೆ ಕಾಪಡಿತು? ಅನ್ನೋ ಪ್ರಶ್ನೆ ಮತ್ತಷ್ಟು ಅನುಮಾನವನ್ನೇ ಹುಟ್ಟು ಹಾಕುತ್ತಿದೆ..

ಜೀವಂತ ಪ್ರಾಣಿಗಳನ್ನ ಮಾರಾಟ ಮಾಡಲಾಗ್ತಿದ್ದ ವುಹಾನ್​ನ ವೆಟ್​ ಮಾರ್ಕೆಟ್​​ಗೆ ಲ್ಯಾಬ್​ನಿಂದಲೇ ವೈರಸ್ ಸೋರಿಕೆಯಾಗಿ, ಅಲ್ಲಿಂದ ಎಲ್ಲೆಡೆ ಹಬ್ಬಿದೆ ಎಂಬ ಆರೋಪ ಕೇಳಿಬರುತ್ತಲೇ ಇದೆ. ಜೊತೆಗೆ ಈಗ ವುಹಾನ್ ಲ್ಯಾಬ್ ನೆಪವಷ್ಟೇ.. ಚೀನಾವೇ ಬೇಕಂತಲೇ ವೈರಸ್​​ಗಳನ್ನ ಹರಡಿಸಿದೆ ಅನ್ನೋ ಇನ್ನೋಂದು ವಾದವೂ ಈಗ ಬಲವಾಗ್ತಿದೆ.. ಹೀಗಾಗಿ.. ಸತ್ಯವಂತೂ ಹೊರಬರಲೇ ಬೇಕಿದೆ.. ಗಜ ಪ್ರಸವ ಇನ್ನಾದ್ರೂ ಆಗಲೇ ಬೇಕಿದೆ..!

ವಿಶೇಷ ಬರಹ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್,  ಪೂರಕ ಮಾಹಿತಿ: ಪ್ರಕೃತಿ ಸಿಂಹ, ಡಿಜಿಟಲ್ ಡೆಸ್ಕ್

The post ಸೋಂಕಿಗೂ ಮೊದಲೇ ವ್ಯಾಕ್ಸಿನ್​ ಪೇಟೆಂಟ್​​ಗೆ ಅರ್ಜಿ; ಬಯಲಾಯ್ತು ಚೀನಾದ ಮಹಾ ಮೋಸ appeared first on News First Kannada.

Source: newsfirstlive.com

Source link