ಬೆಂಗಳೂರು: ನಿನ್ನೆ ಲಾಕ್​ಡೌನ್ ಪಾಲಿಸದವರ ಮೇಲೆ ಪೊಲೀಸರು ಲಾಠಿ ಬೀಸಿದ್ದನ್ನ ಪ್ರಶ್ನಿಸಿ ಹೈಕೋರ್ಟ್​ಗೆ ಪಿಐಎಲ್​​ಗಳು ಸಲ್ಲಿಕೆಯಾಗಿವೆ.

ಹೈಕೋರ್ಟ್​ನ ಮುಖ್ಯ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಲಾಕ್​ಡೌನ್ ಜಾರಿಗೊಳಿಸುವಾಗ ಲಾಠಿ ಚಾರ್ಜ್ ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್​, ಸಂಯಮ ಪ್ರದರ್ಶಿಸಲು ಪೊಲೀಸರಿಗೆ ಸೂಚಿಸಿತು.

ಕೋವಿಡ್ ಸೋಂಕಿತರಿಗೂ ಲಾಠಿ ಚಾರ್ಜ್ ಮಾಡಿದ ವರದಿಯಿದೆ. ಕರ್ತವ್ಯದ ವೇಳೆ ಪೊಲೀಸರು ಸಮತೋಲನ ತಪ್ಪಬಾರದು. ಇಂತಹ ಘಟನೆಗಳಾಗದಂತೆ ಎಚ್ಚರ ವಹಿಸಬೇಕು. ಪೊಲೀಸರಿಗೆ ಸೂಕ್ತ ಮಾರ್ಗಸೂಚಿ ನೀಡಲು ಸರ್ಕಾರಕ್ಕೆ ಇದೇ ವೇಳೆ ಹೈಕೋರ್ಟ್ ಸೂಚನೆ ನೀಡಿದೆ. ಆಗ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಎಜಿ ಹೈಕೋರ್ಟ್​ಗೆ ಭರವಸೆ ನೀಡಿದರು.

The post ಸೋಂಕಿತರಿಗೂ ಲಾಠಿ ಏಟು; ‘ಪೊಲೀಸ್ರು ಸಮತೋಲನ ತಪ್ಪಬಾರದು’ ಎಂದ ಹೈಕೋರ್ಟ್​ appeared first on News First Kannada.

Source: newsfirstlive.com

Source link