ಬೆಂಗಳೂರು: ತಾವು ಕೆಲಸ ಮಾಡುವ ಆಸ್ಪತ್ರೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾದ ಕೋವಿಡ್ ಸೋಂಕಿತರ ಕೈಹಿಡಿದು ನೃತ್ಯ ಮಾಡುವ ಮೂಲಕ ಸಚಿವ ಸುರೇಶ್ ಕುಮಾರ್‌ ಅವರ ಪುತ್ರಿ ವೈದ್ಯೆ ಡಾ.ದಿಶಾ.ಎಸ್.ಕುಮಾರ್ ಧೈರ್ಯವಾಗಿರಲು ಹುರಿದುಂಬಿಸಿದ್ದಾರೆ.

ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಕೆಲ ಕೋವಿಡ್ ಸೋಂಕಿತರು ವೈದ್ಯಕೀಯ ಶುಶ್ರೂಶೆಯ ಬಳಿಕವೂ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿದ್ದರು. ಅವರಲ್ಲಿ ಆತ್ಮವಿಶ್ವಾಸ ತುಂಬಲು ಈ ರೀತಿ ಅಚಾನಕ್ಕಾದ ನಡೆಯನ್ನು ಅನುಸರಿಸಿದ್ದೆವು. ಸೋಂಕಿತರೊಬ್ಬರ ಕೈ ಹಿಡಿದು ಅವರ ಜೊತೆ ನಾವಿದ್ದೇವೆ ಎಂದು ಸ್ಥೈರ್ಯ ತುಂಬಿದ್ದೇವೆ. ನಾನು ಸತ್ತು ಹೋಗ್ತೇನೆ ಅಂತ ಭಯಭೀತನಾಗಿ ಮಲಗಿದ್ದ ಯುವಕನೊಬ್ಬ ನಮ್ಮೊಂದಿಗೆ ನೃತ್ಯ ಮಾಡಿದ್ದು, ತದನಂತರದಲ್ಲಿ ಆತ ತನ್ನ ಖಾಯಿಲೆಯಿಂದ ಚೇತರಿಸಿಕೊಂಡಿದ್ದು ಒಬ್ಬ ವೈದ್ಯೆಯಾಗಿ ನನಗೆ ಅತೀವ ತೃಪ್ತಿ ತಂದ ವಿಷಯ ಎಂದು ಡಾ.ದಿಶಾ.ಎಸ್.ಕುಮಾರ್ ಹೇಳಿದ್ದಾರೆ.

The post ಸೋಂಕಿತರಿಗೆ ಆತ್ಮವಿಶ್ವಾಸ ತುಂಬಲು ಡ್ಯಾನ್ಸ್​ ಮಾಡಿದ ಸಚಿವ ಸುರೇಶ್ ಕುಮಾರ್ ಪುತ್ರಿ appeared first on News First Kannada.

Source: newsfirstlive.com

Source link