ಬೆಂಗಳೂರು: ಕೊರೊನಾ ಸೋಂಕು ರಾಜ್ಯದಲ್ಲಿ ಏರಿಕೆಯಾಗುತ್ತಿರುವ ವಿಚಾರವಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್‌.. ಕೊರೊನಾವನ್ನು ಜನರು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ಮೈಕೈ ನೋವು, ಜ್ವರ ಎಂದು ಉದಾಸೀನ ಮಾಡಬೇಡಿ..ಆಕ್ಸಿಜನ್ ಲೆವೆಲ್‌ 92ಕ್ಕಿಂತ ಕಡಿಮೆ ಇದ್ರೆ ಆಸ್ಪತ್ರೆಗೆ ದಾಖಲಾಗಿ. ಎಲ್ಲಾ ಸೋಂಕಿತರಿಗೂ ರೆಮ್ಡಿಸಿವಿರ್ ಅವಶ್ಯಕತೆಯಿಲ್ಲ.. ಅಗತ್ಯವಿದ್ದವರು ಮಾತ್ರ ರೆಮ್ಡಿಸಿವಿರ್ ಔಷಧಿ ತೆಗೆದುಕೊಳ್ಳಿ ಎಂದಿದ್ದಾರೆ.

ಡಾ. ಮಂಜುನಾಥ್ ನೀಡಿದ ಮಾಹಿತಿ ಇಂತಿವೆ..

 1. ಸೋಂಕಿತರು ಮನೆಯಲ್ಲಿದ್ರೂ ಮಾನಿಟರಿಂಗ್‌ ಅವಶ್ಯಕತೆಯಿದೆ.
 2. 2ನೇ ಅಲೆಯಲ್ಲಿ ಕುಟುಂಬದ ಎಲ್ಲರಿಗೂ ಪಾಸಿಟಿವ್ ಬರ್ತಿದೆ.
 3. ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದ್ರೆ 98% ಗುಣಮುಖರಾಗ್ತಾರೆ.
 4. 2ನೇ ಅಲೆ ಕಡಿಮೆಯಾದ್ರೂ 6 ತಿಂಗಳು ಮುನ್ನೆಚ್ಚರಿಕೆ ಅಗತ್ಯ.
 5. ಬೇಗ ಸೋಂಕಿತರನ್ನು ಪತ್ತೆ ಹಚ್ಚಲು ಕೊರೊನಾ ಟೆಸ್ಟ್ ಬಹುಮುಖ್ಯ.
 6. ರೋಗಲಕ್ಷಣ ಗೊತ್ತಾದ ತಕ್ಷಣ ಎಲ್ಲರೂ ಟೆಸ್ಟ್‌ ಮಾಡಿಸಿಕೊಳ್ಳಿ.
 7. ಗಂಭೀರ ಪರಿಸ್ಥಿತಿ ಇದ್ದರೆ ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ಆಸ್ಪತ್ರೆಯಲ್ಲಿ ಅಗತ್ಯವಿದ್ದವರಿಗೆ ಬೆಡ್‌ ಸಿಗುವಂತಾಗಬೇಕು.
 8. ಜನರ ನಿರ್ಲಕ್ಷ್ಯವೇ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣ.. ಮಾಸ್ಕ್‌, ಸಾಮಾಜಿಕ ಅಂತರ ಪ್ರತಿಯೊಬ್ಬರ ಜವಾಬ್ದಾರಿ. ಗುಂಪು ಗುಂಪಾಗಿ ಸೇರುವುದನ್ನು ಕಡಿಮೆ ಮಾಡಬೇಕು.
 9. ಕೊರೊನಾ ನಿಯಂತ್ರಿಸಲು ಕಡ್ಡಾಯವಾಗಿ ಲಸಿಕೆ ಪಡೆಯಿರಿ. ಲಸಿಕೆ ಪಡೆದ ಬಳಿಕ ಕೊರೊನಾ ಬಂದ್ರೆ ತೀವ್ರತೆ ಕಮ್ಮಿ ಇರುತ್ತೆ.
  ಊರ ಹಬ್ಬ, ರಾಜಕೀಯ ಕಾರ್ಯಕ್ರಮ ನಿರ್ಬಂಧಿಸಬೇಕು

The post ಸೋಂಕಿತರು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದ್ರೆ 98% ಗುಣಮುಖರಾಗ್ತಾರೆ- ಡಾ. ಮಂಜುನಾಥ್ appeared first on News First Kannada.

Source: newsfirstlive.com

Source link