ವಿಜಯನಗರ: ಕೊರೊನಾ ಸೋಂಕಿನ ಜೊತೆಜೊತೆಗೇ ರಾಜ್ಯದಲ್ಲಿ ನಕಲಿ ಡಾಕ್ಟರ್​ಗಳ ಹಾವಳಿಯೂ ಹೆಚ್ಚಾಗ್ತಿದೆ. ಈ ನಕಲಿ ಡಾಕ್ಟರ್​​ಗಳಿಂದ ಸೋಂಕು ಹೆಚ್ಚಾಗೋದರ ಜೊತೆಜೊತೆಗೇ ಸೋಂಕಿತರು ಸಾವನ್ನಪ್ಪುವುದಕ್ಕೂ ಕಾರಣರಾಗ್ತಿದ್ದಾರೆ ಎನ್ನಲಾಗ್ತಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲೂ ನಕಲಿ ವೈದ್ಯರು ಕೋವಿಡ್ ರೋಗ ಲಕ್ಷಣಗಳಿರೋರಿಗೆ ಚಿಕಿತ್ಸೆ ನೀಡಿದ ಪರಿಣಾಮ ಕೆಲವು ಸೋಂಕಿತರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸದ್ಯ ತಂಬ್ರಹಳ್ಳಿಯಲ್ಲಿ 61ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್​​ಗಳು ಪತ್ತೆಯಾಗಿವೆ. ಈ ಪೈಕಿ 5 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಅಲ್ಲದೇ 4 ಕ್ಕೂ ಹೆಚ್ಚು ಕೋವಿಡೇತರ ರೋಗಿಗಳೂ ಸಹ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ನಕಲಿ ವೈದ್ಯರಿಂದ ಸೋಂಕು ಹೆಚ್ಚಾದ ಕಾರಣ ಸ್ಥಳೀಯ ತಹಶೀಲ್ದಾರ್ ಶರಣಮ್ಮ ತಂಬ್ರಹಳ್ಳಿ ಗ್ರಾಮವನ್ನ ಕಂಪ್ಲೀಟ್ ಸೀಲ್​ಡೌನ್​ ಮಾಡಿದ್ದಾರೆ.

The post ಸೋಂಕಿತರ ಜೊತೆಗೆ ನಕಲಿ ಡಾಕ್ಟರ್​ಗಳ ಚೆಲ್ಲಾಟ.. ಹೆಚ್ಚುತ್ತಿದೆ ಸಾವಿನ ಸಂಖ್ಯೆ appeared first on News First Kannada.

Source: newsfirstlive.com

Source link