ಬೆಂಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆಯ ಸಂದರ್ಭದಲ್ಲಿ ಉಂಟಾಗಿದ್ದ ಬೆಡ್​ ಸಮಸ್ಯೆಗೆ ನಗರದಲ್ಲಿ ಬ್ರೇಕ್​​ ಬಿದ್ದಿದೆ. ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಪರಿಣಾಮ ಖಾಸಗಿ ಆಸ್ಪತ್ರೆಗಳಿಂದ ಬಿಬಿಎಂಪಿ ಪಡೆದುಕೊಂಡಿದ್ದ ಬೆಡ್​​ಗಳನ್ನು ವಾಪಸ್​ ನೀಡಲು ಬಿಬಿಎಂಪಿ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೋವಿಡ್​ ಎರಡನೇ ಅಲೆಯ ತೀವ್ರತೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅತಿಹೆಚ್ಚು ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದವು. ಎರಡನೇ ಅಲೆಯ ಪೀಕ್​​ ಅವಧಿಯಲ್ಲಿ ದಿನವೊಂದಕ್ಕೆ 25 ಸಾವಿರ ಪಾಸಿಟಿವ್​ ಪ್ರಕರಣಗಳು, ಆ್ಯಕ್ಟಿವ್ ಕೇಸ್​​ಗಳು 2.5 ಲಕ್ಷದಷ್ಟು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ನೆರವಾಗುವಂತೆ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಬೆಡ್​​ಗಳನ್ನು ಮೀಸಲಿಡಲು ಸೂಚನೆ ನೀಡಿತ್ತು. ಆದರೆ ಸದ್ಯ ಪಾಸಿಟಿವ್​ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಆಗಲು ಮುಂದಾಗಿದೆ. ಅಲ್ಲದೇ ಸರ್ಕಾರಿ ಆಸ್ಪತ್ರೆಗಳಲ್ಲೇ ಸಾಕಷ್ಟು ಬೆಡ್​ಗಳ ಲಭ್ಯತೆ ಹಿನ್ನೆಲೆ ಖಾಸಗಿ ಆಸ್ಪತ್ರೆಗಳ ಬೆಡ್ ಗಳಲ್ಲಿ ಶೇಕಡಾ 20 ರಷ್ಟು ಮಾತ್ರ ಪಡೆದು ಉಳಿದ ಬೆಡ್​ಗಳನ್ನ ಹಿಂತಿರುಗಿಸಲು ತೀರ್ಮಾನ ಮಾಡಿದೆ.

ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಿಂದ ಇದೂವರೆಗೂ 13 ಸಾವಿರ ಬೆಡ್ ಪಡೆಯಲಾಗಿತ್ತು. ಇದರಲ್ಲಿ ಜನರಲ್ ಮತ್ತು ಎಚ್​​ಡಿಯು, ಐಸಿಯು, ಐಸಿಯು/ವೆಂಟಿಲೇಟರ್ ಬೆಡ್​ಗಳು ಸೇರಿವೆ. ಇದರಲ್ಲಿ ಸದ್ಯದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 6,567 ಜನರಲ್​​ ಬೆಡ್​, 3,861 ಎಚ್​​ಡಿಯು ಬೆಡ್, 230 ಐಸಿಯು ಬೆಡ್, ಐಸಿಯು ವಿತ್​ ವೆಂಟಿಲೇಟರ್​ 148 ಬೆಡ್​ಗಳು ಖಾಲಿ ಇವೆ.

ಯಾವ್ಯಾವ ಬೆಡ್ ಎಷ್ಟಿವೆ..? ಎಷ್ಟು ಮಂದಿ ಅಡ್ಮಿಟ್ ಆಗಿದ್ದಾರೆ..? ಎಷ್ಟು ಬೆಡ್ ಗಳು ಖಾಲಿ ಇವೆ ಅನ್ನೋದ್ರ ಡಿಟೇಲ್ಸ್..

ಬೆಡ್​ ಟೈಪ್                ಒಟ್ಟು ಬೆಡ್          ಅಡ್ಮಿಟ್ ಆದ ಬೆಡ್          ಬ್ಲಾಕ್​​ ಆದ ಬೆಡ್        ಲಭ್ಯವಿರುವ ಬೆಡ್​

ಜನರಲ್ ಬೆಡ್            7,170                       595                                     8                              6,567

HDU ಬೆಡ್                4,910                      1,040                                    9                              3,861

ICU ಬೆಡ್                  574                         342                                       2                              230

ICU ವೆಂಟಿಲೇಟರ್     638                        485                                       5                               149

The post ಸೋಂಕಿತರ ಪ್ರಮಾಣದಲ್ಲಿ ಇಳಿಮುಖ: ಬೆಂಗಳೂರಿನಲ್ಲಿ ಬೆಡ್​​ ಸಮಸ್ಯೆಗೆ ಬಿತ್ತು ಬ್ರೇಕ್​ appeared first on News First Kannada.

Source: newsfirstlive.com

Source link