ಸೋಂಕಿತರ ಸಂಖ್ಯೆ ಇಳಿಕೆ.. ಮರಣ ಪ್ರಮಾಣದಲ್ಲಿಲ್ಲ ಚೇತರಿಕೆ; ಬೆಂಗಳೂರಲ್ಲೇ 285 ಸಾವು

ಸೋಂಕಿತರ ಸಂಖ್ಯೆ ಇಳಿಕೆ.. ಮರಣ ಪ್ರಮಾಣದಲ್ಲಿಲ್ಲ ಚೇತರಿಕೆ; ಬೆಂಗಳೂರಲ್ಲೇ 285 ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 28,077 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,09,507 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,37,584 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 26,811 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 24,99,784 ಕ್ಕೆ ಏರಿಕೆಯಾಗಿದೆ.

ಇಂದು 40,741 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 20,62,910 ಮಂದಿ ಗುಣಮುಖರಾದಂತಾಗಿದೆ. ಇಂದು 530 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 26,929ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 4,09,924ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

ಇನ್ನು ಬೆಂಗಳೂರು ಒಂದರಲ್ಲೇ 6,433 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 285 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ 740, ಬಳ್ಳಾರಿಯಲ್ಲಿ 796, ಬೆಳಗಾವಿ 1205, ಚಿಕ್ಕಮಗಳೂರು 585, ಧಾರವಾಡ 853, ದಕ್ಷಿಣ ಕನ್ನಡ 729, ಹಾಸನ 1,471, ಮೈಸೂರು 2,792, ತುಮಕೂರು 1,399 ಹಾಗೂ ಉತ್ತರ ಕನ್ನಡದಲ್ಲಿ 786 ಪ್ರಕರಣಗಳು ದಾಖಲಾಗಿವೆ.

 

The post ಸೋಂಕಿತರ ಸಂಖ್ಯೆ ಇಳಿಕೆ.. ಮರಣ ಪ್ರಮಾಣದಲ್ಲಿಲ್ಲ ಚೇತರಿಕೆ; ಬೆಂಗಳೂರಲ್ಲೇ 285 ಸಾವು appeared first on News First Kannada.

Source: newsfirstlive.com

Source link